ಮಂಗಳವಾರ, ಸೆಪ್ಟೆಂಬರ್ 27, 2011

''ನಾ ಕಂಡ ಮಳೆಗಾಲದ ಒಂದು ದಿನ''

ಇದು ಮಳೆಗಾಲದಲ್ಲಿ ಒಂದು ದಿನ ನಾನು ಹಾಗು ನನ್ನ ಗೆಳೆಯ ಮಾಡಿದ ಪ್ರಯಾಣದ ನಡುವೆ ಆದ ಪ್ರಯಾಸದ ಕಥೆ- ವ್ಯಥೆ.!

ಅದು 2009ರ ಜೂನ್ ಮಾಸ...
ವರುಣದೇವ allraedy ತನ್ನ bating ಶುರು ಹಚ್ಕಂಡು ಕೆಲವೊಂದು ಊರಿನಲ್ಲಿ 4's, 6's ಹೊಡ್ದಾಗಿತ್ತು..!

ಅಂತ ಸಮಯದಲ್ಲಿ ನಾನು ಹಾಗು ಮಹೇಶ(my frnd) 'herohonda-splender' bike ತಗೊಂಡು ಹೊನ್ನಾವರದಿಂದ ಯಲ್ಲಾಪುರಕ್ಕೆ ಹೊರಟೆವು...

ನಮ್ಮ ಅದ್ರಷ್ಟಕ್ಕೆ ಈ ದಿನ ಮಳೆಯಿಲ್ಲವೆಂದು ಸಂತಸದಿಂದಲೇ ಹೊರಟ್ವಿ..
But ನಮ್ಮ ಅಲ್ಪಕಾಲದ ಸಂತಸ ನೋಡಿ ವರುಣದೇವ ಮನದಲ್ಲೇ ನಗ್ತಿರೋದು ನಮಗೆ ಗೊತ್ತಾಗಲೇ ಇಲ್ಲಾ....!!

ನಾವು ಹೊನ್ನಾವರ ಸನಿಹದಲ್ಲೇ ಇರುವ ನಮ್ಮೂರು ಅಪ್ಸರಕೊಂಡದಿಂದ ಹೊರಡುವಾಗ ಸಮಯ ಬೆಳಗ್ಗಿನ 8:30 ರ ಆಸುಪಾಸು....
ನಾವು ಹೊರಡುವಾಗೇನೋ ಖುಷಿಯಿಂದಲೇ ಹೊರಟ್ವಿ ಆ......ದ.....ರೆ......,,,???

oh sory ನಾವು ಯಲ್ಲಾಪುರಕ್ಕೆ ಹೊರ್ಟಿದ್ದು ನನ್ frnd ನ ತಾತನಿಗೆ ಹುಷಾರಿಲ್ಲಾಂತ ನೋಡ್ಕೊಂಡು ಬರೋಕೆ... but ಅಲ್ಲಿಂದ ವಾಪಾಸ್ ಬರೋದಿರ್ಲಿ, ಯಲ್ಲಾಪುರಕ್ಕೆ ಹೋಗಿಮುಟ್ತೀವಾ ಅಂತ ನಾವು ಸಾಗಿದ ದಾರಿಯಲ್ಲಿ ಭಯಮಿಶ್ರಿತ ಅನುಮಾನ ಮೂಡಿತ್ತು....!

ಅಂದು ನಾವು ಹೊರಟ ಗಳಿಗೆ ಸರಿಯಿರ್ಲಿಲ್ಲ ಅನ್ಸುತ್ತೆ..!
ಯಾಕಂದ್ರೆ ನಾವಿನ್ನೂ 1km ಹೋಗಲಿಲ್ಲ,, ಅಷ್ಟರಲ್ಲಿ ಒಬ್ಬ ವ್ಯಕ್ತಿ ನಮ್ಮ ಬೈಕಿಗೆ ಅಡ್ಡ ಬಂದು ಸ್ವಲ್ಪದರಲ್ಲಿ ಆಕ್ಸಿಡೆಂಟ್ ಆಗೋದು ತಪ್ಪಿತು....
ನಮ್ಮಿಬ್ಬರಿಗೂ ಈ ತರಹದ (ಅಪ)ಶಕುನದಲ್ಲಿ ನಂಬಿಕೆ ಇಲ್ಲದ್ದಿದ್ದರಿಂದ ನಮ್ಮ ಪಯಣ continue ಆಯ್ತು..

ಹಾಗೇ ಮುಂದೆ ಸಾಗಿ ಕುಮಟಾ ಸನಿಹದ
''ಹೊನ್ಮಾವು cross'' ಬಳಿ tea ಅಂಗಡಿ ಪಕ್ಕ ನಮ್ಮ ''ಐರಾವತ''ವನ್ನು ನಿಲ್ಲಿಸಿ, '2 ಟೀ 2 ಬನ್ನು ಕೊಡಣ್ಣಾ' ಅಂತಾ ಹೇಳಿ, ಹೊರಗಡೆ ಇಟ್ಟಿದ್ದ ನೀರಿನಲ್ಲಿ ಮುಖ ತೊಳೆಯುತ್ತಾ ಇಲ್ಲಿಂದ ಎಲ್ಲೂ ನಿಲ್ಲದೇ ಸೀದಾ ಮಹೇಶನ ಪರಿಚಯದವರ ಮನೆಗೆ ಹೋಗುವ plan ಮಾಡುತ್ತಿರುವಾಗಲೇ,
'ಟಪಕ್' ಅಂತ ಒಂದು ಮಳೆ ಹನಿಯೊಂದು ನೀರಿನಲ್ಲಿ ಬಿತ್ತು....

(ಇನ್ನೊಂದು ವಿಷಯ ನಮ್ಮ ಹತ್ರ ಎಷ್ಟೇ ದುಡ್ಡಿದ್ರೂ, ಎಷ್ಟೇ ದೊಡ್ಡ ಹೋಟೆಲ್ಲಿಗೆ ಹೋಗಿ ತಿಂದ್ರೂನು, ಈ ಟೀ with ಬನ್ನಿನ ತರ ಆಗಲ್ಲಾ ಏನಂತೀರಾ....??)

ಟೀ ಕುಡ್ದಾಯ್ತು ಮಹೇಶ ಒಂದಿಷ್ಟು ಗುಟ್ಕಾ ಪ್ಯಾಕ್ ತಗೊಂಡ,
ಅಲ್ಲೇ ಪಕ್ಕದಲ್ಲಿ ನಮ್ಮ ''natural call'' ಮುಗಿಸಿ, 'raincot' ಧರಿಸಿಕೊಂಡು ಮುಂದೆ ಹೋದೆವು..

But ಅಲ್ಲಿಂದ ನಾವು 'ಕುಮಟಾ ಟೆಂಪೊ ಸರ್ಕಲ್' ದಾಟುತ್ತಿದ್ದಂತೆ, ''ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋದಳೇನೋ'' ಎಂಬಂತೆ,
'ವರುಣದೇವ' ಗಳಗಳನೆ ಅಳಲು ಆರಂಭಿಸಿದ...!
ಆ ಕಣ್ಣೀರು ಮರುದಿನ ನಾವು ಮನೆಗೆ ಬಂದು ಮುಟ್ಟಿದ್ರೂ ಕಮ್ಮಿಯಾಗಿರಲಿಲ್ಲ...!

ನಮಗೆ ಆ ಕಣ್ಣೀರು ಮೊದಮೊದಲು ಪನ್ನೀರಿನಂತೆ ಭಾಸವಾಯಿತು..
ನಂತರದ ಕೆಲವೇ ತಾಸಲ್ಲಿ ನಮ್ಮ ಕಣ್ಣಲ್ಲೇ ನೀರು ಬರುವಂತಾಗಿತ್ತು...!

ಮುಂದೆ ಹೋಗ್ತಾ ಹೋಗ್ತಾ ಮಳೆಯ ರಭಸ ಜೋರಾಗತೊಡಗಿತು..
ಮಳೆ ಹನಿಯು ಭೂಮಿಯ ಮೇಲಿನ ಕೋಪವನ್ನು ನಮ್ಮೇಲೆ ತೋರುತ್ತಾ, ಮುಖದ ತುಂಬಾ 'ರಪರಪನೆ' ಭಾರಿಸತೊಡಗಿತು..
ಮಹೇಶ ಹೆಲ್ಮೇಟಿನಿಂದ,
ನಾನು ಕನ್ನಡಕ ಹಾಗು ಒಂದು ಕರವಸ್ತ್ರದಿಂದ ನಮ್ಮ ಮೂತಿಯನ್ನು ಆದಷ್ಟು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇದ್ವಿ..
bt no use ನಾನು ಹಾಕ್ಕೋಂಡಿದ್ದ raincot ಹಳೇದ್ದಾದ್ದರಿಂದ ಒಳಗೆ ಮಳೆನೀರು ಹೋಗಿ shirt ಒದ್ದೆಯಾಗಿ body ಲಿ ಲೈಟಾಗಿ ಕುಳುಕುಳು ಅನ್ನೋಕೆ start ಆಯ್ತು..!!


ಮಳೆ ಜೋರಾದ ಕಾರಣ ಮಹೇಶ, ಜಾಸ್ತಿ ಸ್ಪೀಡಿಲ್ಲದೇ '30-40kms/h' ವೇಗದಲ್ಲಿ ನಮ್ಮ ಐರಾವತವನ್ನು ಚಲಾಯಿಸುತ್ತಿದ್ದ..!
ನಾನು 'ಚಿನ್ನದ ತಾರೆ ಗಣೇಶ್' ಸ್ಟೈಲಲ್ಲಿ ಮಳೆಗೆ ಹಿಡಿಶಾಪ ಹಾಕುತ್ತಾ, ಅದು ಇದು ಕಷ್ಟಸುಖ ಮಾತಾಡ್ತಾ, ಅವನನ್ನು ನಗೀಸ್ತಾ ಇದ್ದೆ..
ಹಾಗೆ 'kms board' ಗಳನ್ನು ಎಣಿಸುತ್ತಾ ಅಘನಾಶಿನಿ ನದಿಯ ಬ್ರಿಡ್ಜ್ ಬಳಿ ಬಂದಾಗ, ಮಹೇಶ,,
''ಒಂದೇ ನಿಮಿಷಕ್ಕೇ ಸ್ವರ್ಗಕ್ಕೆ ಹೋಗೋ ಆಸೆ ಇದ್ಯಾ ಅಂತ ಕೇಳ್ದಾ''
ನಾನು ಅವನ ಮಾತನ್ನು ಅರ್ಥೈಸಿಕೊಂಡು,,
''ಗಾಡಿ ನಿಂದು ಗಾಡಿ ಓಡಿಸ್ತಿರೋ body ನಿಂದು ನೀ ಎಲ್ಲಿಗೆ ಹೋಗ್ತ್ಯೋ ಅಲ್ಲಿಗೆ ನಾನು ಬರ್ತಿನಿ..!''
ಅಂತ ಫಿಲ್ಮಿ ಸ್ಟೈಲಲ್ಲಿ ಹೇಳಿದಾಗ,,
ಮಹೇಶ ದೊಡ್ಡದಾಗಿ ಸ್ಮೈಲಿದ..
ಅವನು ಹಾಗೆಹೇಳಲು ಕಾರಣವಿತ್ತು.. ದಿನದಿಂದ ಸತತವಾಗಿ ಮಳೆ ಬಿದ್ದ ಕಾರಣ,, ಅಘನಾಶಿನಿ ನದಿ ಅಪಾಯದ ಮಟ್ಟಕ್ಕೆ ಮಟ್ಟಕ್ಕೆ ಮೀರಿ ಹರಿಯುತ್ತಿತ್ತು..

ಹಾಗೆ ಆ ಬ್ರಿಡ್ಜ್ ದಾಟಿ ಸ್ವಲ್ಪದೂರ ಹೋಗಿದ್ವಿ..
ಅಷ್ಟರಲ್ಲಿ ಎದುರಿಗೆ ಒಂದು 'tata sumo' ನಿಧಾನವಾಗೇ ಬರ್ತಾ ಇತ್ತು,,
ನಾವು ನಮ್ಮ left ಗೆ,
sumoದವನು ಅವನ left ಗೆ
ಅರಾಮಾಗಿ ಬರ್ತಿದ್ದಾಗ,
roadನ ಆ ಪಕ್ಕದಲ್ಲಿದ್ದ ಹಸು ಒಂದನ್ನು ನೋಡಿ 'tata sumo'ದ driver,
'horn' ಅದುಮಿದ..
ಅಚಾನಕ್ಕಾಗಿ ಆದ soundನ್ನು ಕೇಳಿ ಆ ಹಸು ಬೆದರಿ road ಕಡೆಗೇ ಓಡಿಬಂತು.. ಮಳೆ ಬೀಳುತ್ತಿದ್ದ ಕಾರಣ roadಲ್ಲಿ ನೀರು ನಿಂತಿತ್ತು.
ಆ ನೀರಿನ ಮೇಲೆ ಕಾಲಿಟ್ಟ ಹಸು ಆಯತಪ್ಪಿ ಜಾರಿಕೊಂಡು ನಮ್ಮ ಕಡಗೇ ಬಂದಾಗ,, ನಮ್ಮಿಬ್ಬರ ಎದೆಯಲ್ಲಿ ನೀರೊಣಗಿ,,
ನಾನು ''ಏಯ್.. ಏಯ್.. ಏಯ್..''
ಅಂದೆ ಅಷ್ಟರಲ್ಲಿ,,,,??

To be continued...
(ಹುಡುಗರು ಚಿತ್ರದ ''ಶಂಭೊ ಶಿವ ಶಂಭೊ'' ಹಾಡಿನ ಧಾಟಿಯಲ್ಲಿ ನನ್ನದೊಂದು ಪ್ರಯತ್ನ)

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ದೇಶವ ನಾಶ ಮಾಡಲು ಹೊರಟ..
ದುಷ್ಟರ ಕೈಗೆ ಮಾರಲುಹೊರಟ..
ಇಂತಹ ಕ್ರಿಮಿಗಳ ವಿರುದ್ಧ ನಾವು
ತಿರುಗಿ ನಿಲ್ಲೋಣ..||

||ಭಾರತ ಮಾತೆಯ ಮಕ್ಕಳು ನಾವು..
ಅವಳ ಸೇವೆಗೆ ಸಿದ್ಧರು ನಾವು..
ನಮ್ಮಯ ಪ್ರಾಣ ದೇಶಕೆ ಮುಡಿಪು..
ಅಂಜಿಕೆ ನಮಗ್ಯಾಕೆ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ನಾವೇನೂ ಮೂರ್ಖರಲ್ಲಾ..
ಹಿಂಸೆನಾ ಸಹಿಸೊದಿಲ್ಲಾ..
ತಾಳ್ಮೆ ಕಳ್ಕೊಂಡ್ರೆ ನಾವು..
ನಿಮ್ಗೆಲ್ಲೂ ಉಳಿಗಾಲವಿಲ್ಲಾ..||

||ಗಾಂಧೀಜೀ ತತ್ವಬೋಧ..
ನಿಮ್ಗೀಗ ಸಾಕಾಗಲ್ಲಾ..
ನಿಮ್ಗೇನಿದ್ರೂ ಬೇಕು ಈಗ..
ಕಂಡಲ್ಲಿ ಗುಂಡಿನ ಪ್ರಯೋಗ..||

||ಯಾರೀಗೂ ಹೆದ್ರೊದಿಲ್ಲಾaaaaa
ನಾವೆಲ್ಲಾ ಒಂದೇ ಕುಲaaaaa
ಯಾರೀಗೂ ಹೆದ್ರೊದಿಲ್ಲಾ
ನಾವೆಲ್ಲಾ ಒಂದೇ ಕುಲ
ಭಾರತ ಮಾತೆಯ ಸುಪುತ್ರರು....||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ದೇಶವ ನಾಶ ಮಾಡಲು ಹೊರಟ..
ದುಷ್ಟರ ಕೈಗೆ ಮಾರಲುಹೊರಟ..
ಇಂತಹ ಕ್ರಿಮಿಗಳ ವಿರುದ್ಧ ನಾವು
ತಿರುಗಿ ನಿಲ್ಲೋಣ..||

||ಭಾರತ ಮಾತೆಯ ಮಕ್ಕಳು ನಾವು..
ಅವಳ ಸೇವೆಗೆ ಸಿದ್ಧರು ನಾವು..
ನಮ್ಮಯ ಪ್ರಾಣ ದೇಶಕೆ ಮುಡಿಪು..
ಅಂಜಿಕೆ ನಮಗ್ಯಾಕೆ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಓಓಓಹೋಓ

||ಬೆನ್ನಿಗೆ ಚಾಕೂ ಹಾಕೊ ಕೆಲಸಾನ
ಮಾಡೋರು ನೀವು..
ನ್ಯಾಯ ನೀತಿ ನಂಬೊ
ದೇಶಭಕ್ತರು ನಾವು..
ದೇಹಿ ಅಂತಾ ಬಂದೊರು
ವೈರಿನೇ ಆದ್ರೂ ಕೂಡ..
ಉಪಚಾರ ಮಾಡಿ ಸಾಕಿ..
ಸಲುಹಿದೋರು ನಾವು..||

||ವಂದೇ ಮಾತರಂ ಅನ್ನೊ ಘೋಷaaa..
ಅದೇ ನಿಮ್ಗೆ ನೇಣಿನ ಪಾಶaaa aaa..
ವಂದೇ ಮಾತರಂ ಅನ್ನೊ ಘೋಷ..
ಅದೇ ನಿಮ್ಗೆ ನೇಣಿನ ಪಾಶ..
ಜೀವದ್ಮೇಲೆ ಆಸೆ ಇದ್ರೆ ತೊಲಗಿರಿ..||



||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಮಾತರಂ ಮಾತರಂ ವಂದೇಮಾತರಂ..
ಮಾತರಂ ಮಾತರಂ ವಂದೇಮಾತರಂ..
ಮಾತರಂ ಮಾತರಂ ವಂದೇಮಾತರಂ..
ವಂದೇಮಾತರಂ.....

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಸೋಮವಾರ, ಸೆಪ್ಟೆಂಬರ್ 26, 2011

(''ಪರಮಾತ್ಮ'' ಚಿತ್ರದ
''ಹೆಸರು ಪೂರ್ತಿ ಹೇಳದೇ''
ಧಾಟಿಯಲ್ಲಿ ನನ್ನದೊಂದು ಪ್ರಯತ್ನ)


||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||

||ಮನವಿದು ಅಳುತಿದೆ ನೋಡೇ
ನೆನೆಯುತಾ ನಿನ್ನನ್ನೇ...

ಹೃದಯವು ಬಯಸಿತು ಈಗ
ನಿನ್ನಯ ನೆನಪನ್ನೇ...||

||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||


||ನಿನ್ನ ಮೊಗದ ನಸುನಗುವೇ ನನ್ನೆದೆಯ ಹಾಡಾಗಿತ್ತು...

ನನ್ನ ಕಣ್ಣು ನಾಚುತ್ತಿತ್ತು ಮುತ್ತಿಡಲು
ನೀ ನನ್ನ ತುಟಿಗೆ...||

||ನಿನ್ನ ನೋಡೊ ಮುಂಚೆ ನಾ
ಸ್ವಲ್ಪ ಒರಟ ಆಗಿದ್ದೆ...

ಈಗ ನಂಗೆ ಅನಿಸಿದೆ ನಂಗೂ
ಒಂದು ಮನಸಿದೆ...

ನಂಗೆ ಏನೋ ಆಗಿದೆ
ನೋಡು ನೀ ಈಗಲೇ...||

||ನಿನ್ನ ಮುದ್ದು ಮಾತಲ್ಲಿದೆ
ಅತಿಯಾದ ಆಕರ್ಷಣೆ....

ಪದವಿಲ್ಲದಂತಾಯಿತು ನನ್ನ ಮನದಲಿ
ನಾ ನಿನ್ನ ಹೊಗಳಲು....||


||ತುಂಬಾ ನೋವು ಆಗಿದೆ
ಒಮ್ಮೆ ಕಾಣಬಾರದೇ...

ನನ್ನ ಮತಿಯು ಕೆಡುತಿದೆ ನನಗೆ
ನೀನು ಸಿಕ್ಕದೇ...

ನಿನ್ನ ನೆನಪಲಿ ನೆನೆಯುತಾ
ಸತ್ತುಬಿಡಲೇ...?||

ಶನಿವಾರ, ಸೆಪ್ಟೆಂಬರ್ 24, 2011

@/''ಮುಖಪುಸ್ತಕದ ಲೈಫು ಇಷ್ಟೆನೇ''\@


''ನಮಗೆ ಮರುನಾಮಕರಣ ಮಾಡೊ
profileಗಳು''...!


''ನಮ್ಮ ಮೂತಿ ಕಾಣಿಸೊ
profile imageಗಳು''...!


''ನಮಗೆ ಕಾಟ ಕೊಡಲು ಬರುವ
frnd accpectಗಳು''...!


''ಇನ್ನೊಬ್ಬರಿಗೆ ನಾವು ಕಾಟ ಕೊಡಲೆಂದೇ ಇರುವ frnd reqvestಗಳು''...!


''ಕ್ಯಾಕರಿಸಿಉಗಿಯಲು ಮತ್ತು ಉಗಿಸಿಕೊಳ್ಳಲು
ಇರುವwallಗಳು''...!


''ನಮ್ಮ ಹಣೆಬರಹವನ್ನು ನಾವೇ ತಿದ್ದಿ ಬರೆದಿರುವ
imfoಗಳು''...!


''ಕಣ್ಣಿಗೆ ಕಾಣದ್ದನ್ನು ಪದೆ ಪದೆ ತೋರಿಸುವ
photosಗಳು''...!


''Hy helow hw r u ಅಂತ ವಿಚಾರಿಸೊ
msgಗಳು''...!


''Iam fine thnk u ಅನ್ನೊ rplyಗಳು''...!


''ಇಷ್ಟವಾಗದವರನ್ನು ದೂರ ಮಾಡೊ unfrndಗಳು''...!


''ಮನಸ್ಸಲ್ಲಿ ಭಾವೈಕ್ಯತೆ,ಗೊಂದಲ,ಅಸಹ್ಯ ಹಾಗು
ದ್ವೇಷ ಮೂಡಿಸೊ groupಗಳು''...!


''ರೂಲ್ಸ್ ರೂಲ್ಸ್ ಅಂತಾ ರಾರಾಜಿಸುವ
group discrptionsಗಳು''...!


''ನಾವೆಲ್ಲರೂ ಒಂದೇ ಎಂದು ಮೆರೆಯುವ
membersಗಳು''...!


''ಎಲ್ಲರೂ ಬಂದು ಸೇರಿ ಎಂದು ಕರೆಯುವ
Add membersಗಳು''...!


''ಯಾರೂ ಬೇಡವೆನಿಸಿದಾಗ ಏಕಾಂಗಿ ಹೋರಾಟಕ್ಕೆ ಸಹಕರಿಸೋ
Leave groupಗಳು''...!


''ನಮಗೆ ತಿಳಿದ ಹಾಗು ತಿಳಿಯದ ವಿಷಯವನ್ನು
ಚರ್ಚಿಸಲು ಇರೋ postಗಳು''...!


''ಅದಕ್ಕೆ ಉತ್ತರವಾಗಿ ಬರೋ comentಗಳು''...!


''ನನ್ನದೊಂದು ಎಲ್ಲಿ ಇಡ್ಲಿ ಅನ್ನೊ
Re comentಗಳು''...!


''ಅಭಿಪ್ರಾಯ ಉತ್ತಮವಾಗಿದೆ ಅಂತ
ಹೇಳೋಕೊಂದುlikeಗಳು''...!


''ನಿದ್ದೆಯಲ್ಲಿದ್ದವರನ್ನು ಎಚ್ಚರಿಸುವ ಅಲರಾಂನಂತೆ ಅವಾಗವಾಗ ಅಭಿಮತ ತಿಳಿಯಲು
ಗೊಚರಿಸುವNotificationಗಳು''...!


''ಕುಂತಲ್ಲೆ ಜಗತ್ತನ್ನು ಸುತ್ತಿಸುವ ವಿಧ ವಿಧ
linkಗಳು''...!


''ಮೋಸ ಮಾಡಲೆಂದು ಬರುವ
fake profileಗಳು''...!


''ಬೇರೆಯವರ ಹೆಸರಲ್ಲಿ chat ಮಾಡೋ
'ವಿಕೃತ ಮನಸ್ಸಿನ'cheef mentalityಗಳು''...!


''ಹಿತಕರವಾದ online fb chatಗಳು''...!


''ಮಧುರ ಭಾವನೆ ಮೂಡಿಸುವ,,
lovestoryಗಳು''...!


''ಅನಾವಶ್ಯಕ ಎನಿಸೋ
love biuldupಗಳು''...!


''ಅವಸರದಲ್ಲಿ ಆಗೋ
love breakupಗಳು''...!


''ಒಟ್ಟಿನಲ್ಲಿ Time passಗೆ ಹೇಳಿ ಮಾಡಿಸಿದ
ಜಾಗಗಳು''...!


''ಈ 'Facebook'ಎಂಬ
'ಸ್ನೇಹಲೋಕ'ಗಳು''......!!



Dis is lifestyle of facebook..!!;)

ಗುರುವಾರ, ಸೆಪ್ಟೆಂಬರ್ 22, 2011

(ಯೋಗರಾಜ್ ಭಟ್ ಅವರ ''ಯಾರಿಗೆ ಹೇಳೋಣ'' ಹಾಡಿನ ಧಾಟಿಯಲ್ಲಿ ನನ್ನ ಕಲ್ಪನೆ...
ಇದು ನನ್ನ ಪ್ರಥಮ ಪ್ರಯತ್ನ ತಪ್ಪಾದಲ್ಲಿ ಮನ್ನಿಸಿ..)

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..
ಕತ್ತೆತ್ತಿ ನೋಡಿದಾಗ ತುಂಬಾ ಆಳಕ್ಹ್ಕೋಗಿದ್ದೆ..
ಇದೆಲ್ಲಾ ನಂಗೆ ಬೇಕಿತ್ತಾ ಅಂತ ಚಿಂತೆಲಿ ಬಿದ್ದೆ..
ಏನೇ ಆದ್ರೂನು, ನಾ ಹೇಗೆ ಅದ್ರೂನು,
ಅಲ್ಲಿಂದ ಬರೋಕೆ ತುಂಬಾ ಟ್ರೈ... ಮಾಡ್ದೆ.. ತಪ್ಪಿಸ್ಕೊಳೊಕೆ ಆಗ್ದೆ ನಾನು ಸೋತೋದೆ...

ಥೂ....!

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..

ತುಂಬಾ ಗ್ರೇಟು ಪೋರ ಅಂತ ಅಂದ್ಕೊಂಡಿದ್ದೆ ನಾನು ಈ ಪ್ರೀತಿ ಹುಟ್ಟೊ ಮೊದ್ಲು..
ಆದ್ರೆ ಪಕ್ಕದ್ಮನೆ ಹುಡುಗಿಯೊಬ್ಬಳು ಹಾರ್ಟು ಸೇಲಾಗೋ ಥರ ಹಾಯ್ ಅಂದ್ಬಿಟ್ಳು..
ಏನಾಯ್ತು ಅಂತ ಗೊತ್ತಾಗೋ ಮೊದ್ಲೆ,, ಎಲ್ಲಿ ಬಿದ್ದೆ ಅಂತ ತಿಳಿಳೇ ಇಲ್ಲಾ...
I love u ಅಂತಾ ಹೇಳೋಣಾಂದ್ರೆ ಧೈರ್ಯ ಕೂಡ ಕೈ ಕೊಡ್ತಲ್ಲಾ..
ಆದ್ರೆ ನಾನು ಅವ್ಳಿಗೆ love uuuuu ಅಂತಾ ಹೇಳ್ದಾಗ್ಲೆಲ್ಲಾ.,
ಅವ್ಳು cho chweet ಅಂತ ಮುಖ ಸವರಿ ಹೋಗ್ತಾಳಲ್ಲಾ...?!



ಏನ್ ಮಾಡ್ಲಿ ನನ್ ಲವ್ ಮ್ಯಾಕ್ಸಿಮಮ್ಮು..
butನಾನು ಕೊಟ್ಟಿಲ್ಲ ಅವ್ಳಿಗೆ ಯಾವ ಪ್ರಾಬ್ಲಮ್ಮು..

ಅವ್ಳು ಸಿಕ್ಕಿದ್ಳು'facebook'ಅಲ್ಲಿ, 'frnd reqvest'ಕಳಿಸಿಕೊಂಡು
ನಾನು ಕ್ಲೋಸಾದೆ..
ಇಬ್ರೂ ಗುರ್ತು ಪರಿಚಯ ಮಾಡಿಕೊಂಡು, Chatನಲ್ಲೇ ಕಷ್ಟಸುಖ ಮಾತಾಡ್ತಾ ಇದ್ವಿ..
ಆದ್ರೊಂದಿನ ಅವ್ಳಣ್ಣ ಅವ್ಳ'cell'ಅಲ್ಲಿ ನನ್ ನಂಬರ್ರ್ ನೋಡೆಬಿಟ್ಟ..
ಅವ್ಳತ್ರ'cell'ಕಿತ್ಕೊಂಡು ಅದ್ರಿಂದ್ಲೇ ನಂಗೆ ಅವಾಜು ಹಾಕ್ದ..
ಈ ಸಲಾನೂ ನನ್ ಲವ್ ಮತ್ತೆ ಯೆ..ಕ್ಕು..ಟ್ಟಿ ಹೋಯ್ತಲ್ರೀ..
Sorry ಅವ್ಳ ಹೆಸ್ರು ಈಗ ನಂಗೆ ನೆನಪಿಗೆ ಬರ್ತಿಲ್ವಲ್ರೀ..!

ಯಾವ ಹುಡ್ಗೀನೂ ನಂಗೆ ಸಿಗ್ತಾನೇ ಇಲ್ಲಾ..
ನಾನೇನ್ಮಾಡ್ಲಿ ಅಂತಾನೂ ಗೊತ್ತಾಗ್ತಾ ಇಲ್ಲಾ..

ಲಾಲ್ ಭಾಗಿನಲ್ಲಿ ಒಮ್ಮೆ ನಾನು ಅವಳನ್ನ ನೋಡಿ ಲೈಟಾಗಿ ಹಾಳಾಗ್ಹೋದೆ...
ಮನಸಲ್ಲಿ ಆಸೆ ಹುಟ್ಟಿ ಅವ್ಳಿಗೆ ಗುಲಾಬಿ ಕೊಟ್ಟು i love you ಅಂದೆ..

ಅವ್ಳು ಅದ್ನ ಕೋಪದಿಂದ ನೋಡಿ, ಆ ಹೂವನ್ನ ಎಸೆದೇ ಬಿಟ್ಳು..
ನನ್ನಣ್ಣಂಗೆ ಹೇಳಿ ನಿನ್ನ ಕೈಕಾಲು ಮುರೀಸ್ತಿನಿ ಅಂದ್ಳು...
ನಾನು ಅವಳಿಗೆ ಕೈಮುಗಿದು ಬೇಡ್ಕೊಂಡ್ಬಿಟ್ಟೆ ಕಣ್ರೀ..!
ಇಲ್ದಿದ್ರೆ ನನ್ನ ''ಎಮ್ಮೆಮ್ಮು'' ಹಾಳಾಗ್ಹೋಗ್ತಿತ್ತು ನೋಡ್ರಿ...!

ಏನು ಮಾಡೋದು ನನ್ನ ಲೈಫು ಇಷ್ಟೇನೆ...!
ಹುಡ್ಗೀರ ಸಬ್ಜೆಕ್ಟಲ್ಲಿeeeee
ನಂಗೆ ಸೊನ್ನೇನೆ...!!

ಮಂಗಳವಾರ, ಸೆಪ್ಟೆಂಬರ್ 20, 2011

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನಸಾಗಿದೆ ಇಂದು ನಿನ್ನ ಕಂಡು ಚಂಚಲ...
ನಿನಗೂ ಆ ಖುಷಿಯ ಒಂಚೂರು ಹಂಚಲಾ...
ನಿನ್ನ ನಗುವ ಕಂಡು ನನಗಾಗಿದೆ ಗೊಂದಲ...
ನನ್ನ ಪ್ರೀತಿಯ ಒಪ್ಪಿಕೊ ನೀ ಒಂದ್ಸಲ...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನದಲಿ ಸಂಚಲನ ಮೂಡಿಸಿದ ಮಿಂಚು ನೀನು...
ಸುಡು ಬಿಸಿಲಲ್ಲೂ ಕರಗದ ಮಂಜು ನೀನು...
ಎದೆಯಾಳದಿ ಮೂಡಿದ ಸಂಗೀತ ಸ್ವರ ನೀನು...
ನಿನ್ನಿ0ಗಿತ ಅರಿಯದೇ ಸೋತು ಬಳಲಿದೆ ನಾನು...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಶುಕ್ರವಾರ, ಸೆಪ್ಟೆಂಬರ್ 16, 2011

ಮಾಘ ಮಾಸದ ತಣ್ಣನೆ ಚಳಿಯಿರಲು..
ಕೈಯಲ್ಲಿ ಬಿಸಿಬಿಸಿ ಕಾಫಿಯಿರಲು..
ಪಕ್ಕದಿ ಬೆಚ್ಚಗೆ ಮಡದಿಯಿರಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಮುಂಜಾನೆ ತಡವಾಗಿ ಎದ್ದು..
tv ಗೆ ಮುಖ ಮಾಡಿ ಕುಳಿತು..
ಮಡದಿ ಮಾಡಿದ ತಿಂಡಿಯ ತಿನ್ನಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ನಸುನಗುತಾ ಮಡದಿ ಬೀಳ್ಕೊಡಲು..
ಮನಸ್ಸಿಲ್ಲದೇ duty ಗೆ ಹೊರಡಲು..
ಸಂಜೆ ಮಲ್ಲಿಗೆಯೊಂದಿಗೆ ಅವಳ ನೋಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ವಾರಕ್ಕೊಂದು ಭಾನುವಾರ ಬರಲು..
ಮಧ್ಯಾಹ್ನದ ಅಡಿಗೆ ನಾನೇ ಮಾಡಲು..
ಸಂಜೆ ಯಾವ್ದಾದ್ರು ಸಿನೆಮಾಕ್ಕೆ ಹೋಗಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...



ಮದುವೆಯಾಗಿ ವರುಷವಾಗಲು..
ಮನೆಯಲ್ಲೊಂದು ಪಾಪು ಬರಲು..
ನಮ್ಮಿಬ್ಬರಲ್ಲಿ ಹರುಷ ಮೂಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಪಾಪು ಗೆ ಐದು ವರಷವಾಗಲು..
ಸ್ಕೂಲ್ ಅಡ್ಮಿಷನ್ ಗಾಗಿ ಕಷ್ಟಪಡುತಿರಲು..
ಮನೆಯಲ್ಲಿ ಕರ್ಚುವೆಚ್ಚ ಬೆಳೆಯುತಿರಲು..
ಇಂತ ನಾಕ ಬೇಕಾ ಅಂದ ಪ್ರದೀಪ...

ಮನೆಯಲ್ಲಿ ಮಡದಿ ಸಿಡುಕುತಿರಲು..
ಆಫೀಸಲ್ಲಿ ಕೆಲಸ ಮರೆತಂತಾಗಲು..
Boss ಹತ್ರ ಉಗಿಸಿಕೊಳ್ಳಲು..
ಇಂತ ನಾಕ ಬೇಕಾ ಅಂದ ಪ್ರದೀಪ...

Bos ಮೇಲಿನ ಕೋಪವ ಮಡದಿ ಮೇಲೆ ತೋರಲು..
ಅವಳು ಬೇಸರದಿಂದ ಅಳುತ್ತಾ ಕೂರಲು..
ಕಷ್ಟವ ಮರೆಯಲು ಇವನು bar ಗೆ ಹೊರಡಲು..
ಇಂತ ನಾಕ ಬೇಕಾ ಅಂದ ಪ್ರದೀಪ...;

ಒಂದೇ ವರ್ಷಕ್ಕೆMarried life ಸಾಕೆನಿಸಲು..
ಮನೆ ಗೇ ಹೋಗೊಕೆ ಬೇಜಾರೆನಿಸಲು..
ಬೇರೊಂದು ಸಂಗಾತಿ ಬೇಕೆನಿಸಲು..
ಈ ನಾಕ ಬೇಡವೇ ಬೇಡವೆಂದ ಪ್ರದೀಪ..

ಮನ ಆಸೆ ಪಟ್ಟಂತೆ ಆಗಲು...
ಬೇರೊಬ್ಬ ಹೆಣ್ಣು ಸನಿಹಕ್ಕೆ ಬರಲು..
ಮನೆಯಲ್ಲಿ ಮರೆತ ಸಂತಸವ ಅವಳಲ್ಲಿ ಕಾಣಲು..
ಮತ್ತೆ ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

To be continued....

ಬುಧವಾರ, ಸೆಪ್ಟೆಂಬರ್ 14, 2011

ಮನಸು ಜಾರುತಿದೆ
ಕನಸು ಕಾಡುತಿದೆ
ನಾನಿನ್ನ ಕಂಡಾಗಲೇ...
ಯಾಕೆ ಹೀಗಾಯ್ತೊ
ಎಲ್ಲಿ ಏನಾಯ್ತೊ
ನೀ ಸೇರು ನನ್ನೀಗಲೇ...
ಏನೂ ತೋಚದೇ ನಾನು
ಸೋತು ಹೋದೆನು ನಾನು
ನೀ ಒಮ್ಮೆ ನಕ್ಕಾಗಲೇ...
ನಿನ್ನ ನೊಟ ಸೆಳೆಯುತಿದೆ
ನಿನ್ನ ಮಾತು ಕೊಲ್ಲುತಿದೆ
ನೀ ಬಂದು ಸಂಭಾಳಿಸು...
ಏನೆ ಮಾಡಿದರೂ ಸರಿಯೇ
ಹೇಗೆ ಕಾಡಿದರೂ ಸರಿಯೇ
ನೀ ಒಮ್ಮೆ ನನ್ನ ಪ್ರೀತಿಸು...
ಏನು ಅರಿಯದ ನಾನು
ಒಬ್ಬ ದಡ್ಡನು ನಾನು
ನಿನ್ನ ಮೋಡಿಗೆ ಮರುಳಾದೆನಾ..?
ಈ ಪ್ರೀತಿ ಪಯಣದಲಿ
ಕವನ ಬರೆಯುತಲಿ
ನಾನೀಗ ಕವಿಯಾದೆನಾ..?