ಶನಿವಾರ, ಡಿಸೆಂಬರ್ 31, 2011

ಓ ಮನಸೇ .....

ಓ ಮನಸೇ ಓ ಮನಸೇ ಹೀಗೇಕೆ ಕಾಡುವೆಯೇ..?
    ಓ ಕನಸೇ ಓ ಕನಸೇ ನನ್ಯಾಕೆ ಕೊಲ್ಲುವೆಯೇ..?
ನೀನು ದೂರ ಹೊದ ಮೇಲೆ,
             ಹೇಗೆ ಅಂತ ಇರಲಿ ನಾನು.?
ನೀನೇ ಹೇಳು ಓ ನನ್ನ ಪ್ರಾಣವೇ... (೧)


ಓ ಗಿಣಿಯೇ ಓ ಗಿಣಿಯೇ ನೀನ್ಯಾಕೆ ಮರೆಯಾದೆ..?
    ನಾ ನಿನಗೆ ನಾ ನಿನಗೆ ಈಗ್ಯಾಕೆ ಹೊರೆಯಾದೆ..?
ನಿನ್ನ ಮುದ್ದು ಪ್ರೀತಿ ನಂಬಿ,
      ನಾನು ಇಂದು ಮೋಸ ಹೋದೆ.?
ಹೀಗೇಕಾಯ್ತು ಹೇಳೆ ಓ ಪ್ರಾಣವೇ....? (೨)


ಓ ಬೆಡಗಿ ಓ ಬೆಡಗಿ ಎಲ್ಲಿರುವೇ ನನ್ನ ನೀಮರೆತು..?
   ಬಾ ನೋಡು ನಾನಿನಗೆ ಕೇಳಿಸುವೆ ನನ್ನ ಎದೆಮಾತು...
ನೀನು ಎಲ್ಲೇ ಹೇಗೆ ಇದ್ರೂ,
         ನಾನು ನಿನ್ನ ಪ್ರೀತಿ ದಾಸ..
ಇದೇ ಸತ್ಯ ಕೇಳೆ ಓ ಪ್ರಾಣವೇ.....(೩)

ಗುರುವಾರ, ಡಿಸೆಂಬರ್ 29, 2011

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ ತಪ್ಪಾದರೇ ಕ್ಷಮಿಸಿ ತಿದ್ದಿ ಹೇಳಿ..

"ನೋಡಿ ನಾವೇ ನಮ್ ಸ್ವಂತ ಬುದ್ಧಿ ಉಪಯೋಗ್ಸಿ ಒಂದು ಕವನ ಬರೆದರೆ, ನಮ್ಗೂ ಬರೆಯೋಕೆ ಬರುತ್ತೆ ಅಂತಾ ಗೊತ್ತಾಗುತ್ತೆ, ಇನ್ನೂ ಬರಿಬೇಕು ಅನ್ನೋ ಆಸೆ ಹುಟ್ಟತ್ತೆ..
ಅಬ್ಬಬ್ಬಾಂದ್ರೆ ಏನ್ರೀ ಒಂದಿಷ್ಟು ಲೈಕ್ ಕಮ್ಮಿ ಬೀಳುತ್ತೆ, ಯಾರಾದ್ರೂ ತಿಳ್ದೋರು ತಪ್ಪನ್ನ ತಿದ್ಕೊಳೋಕೆ ಹೇಳ್ತಾರೆ...."

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ನಾನಿಲ್ಲಿ ಏನಕ್ಕೆ ಬಂದಿದಿನಿ ಗೊತ್ತಾ.?
ನಂಗೂ ಬರ್ಯೋಕೆ ಬರುತ್ತೆ ಅಂತಾ ತೋರ್ಸೊದಿಕ್ಕೆ...")

 
ಸೆಲೆಬ್ರೇಟ್ಟಿ ಅಪ್ಪುಡೇಟಿಗೆ ನೂರೇಂಟು ಲೈಕು..
ನಮ್ಮ ಕವನ ಪೋಸ್ಟು ಆದರೆ ಬರೋದೆಲ್ಲಾ ಮಾರ್ಕು..
ಹೆಚ್ಚಾದರೆ ಹೊಡಿರಿ ಬುಡಕ್ಕೆ..
ಸರಿಯಾದರೆ ತಟ್ಟಿರಿ ಭುಜಕ್ಕೆ...
ಮಾತ್ರೆಯಿಲ್ಲದ ಕವನಾ ಸರಿಯಿಲ್ಲಾ.....

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ಅದೇನೋ ಅಂತಾರಲ್ಲಾ ಬಂದ್ರೆ ಬಾಗಿಲು ಹೋದ್ರೆ ಕೂದಲು" ಹಾಗೆನೇ)

 
ಮನಸಿಲ್ಲದೇ ಏನಾದರೂ ಕವನ ಬರೆಯಬೇಡಿ..
ಮತಿಯಿಲ್ಲದೇ ಯಾರಾದರೂ ಕಾಪಿ ಹೊಡೆಯಬೇಡಿ...
ಧಮ್ಮಿದ್ದರೆ ಬರೀರಿ ಸ್ವಂತದ್ದು..
ಇಲ್ಲಾಂದ್ರೆ ಸುಮ್ನಿರಿ ನೀವೆಂದೂ...
ಕದ್ದ ಕವನಾ ಎಂದೂ ನಿಮದಲ್ಲಾ......

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
(ಈಗ ಏನಾಗುತ್ತೆ ಅಂದ್ರೆ ಪ್ರಕಾಶ್ ಶ್ರೀನಿವಾಸ್ ಅವರ ವಿಷ್ಯದಲ್ಲಾಯ್ತಲ್ಲಾ ವಾದ-ವಿವಾದ,
ಅಯ್ಯೋ ಅದೇಲ್ಲಾ ಹಳೆ ವಿಷ್ಯಾ ಬಿಟ್ಟಾಕಿ.....)

ಶನಿವಾರ, ಡಿಸೆಂಬರ್ 17, 2011

""ನನ್ನ ಕವನ""

ಹಾಳಾದ್ ದಿಲ್ ನಿನ್ನನ್ನೇ ಕೇಳ್ತು..
          ನಾನೇನ್ಮಾಡ್ಲಿ ನೀ ಹೇಳು ಚೈತು..
ನೀನಂತೂ ಇಲ್ಲಾ ನನ್ನಲ್ಲಿ ಇಂದು..
                  ನಾನಿನ್ನ ಹುಡುಕಲಿ ಎಲ್ಲೇಲ್ಲಿ ಎಂದು.? (1)


ನೀ ನನ್ನ ಪ್ರಾಣ ಅಂತ ನೀನೇ ಹೆಳಿದೆ ಅಂದು..
     ಆದರೆ ಯಾಕೆ ಕೋಪ ಈ ಪ್ರಾಣದ ಮೇಲೆ ಇಂದು.?
ಆ ದಿನ ನನ್ನದೆಯಲ್ಲಿ ನೀನೇ ಪ್ರೀತಿಯ ಬಳ್ಳಿ ಹಬ್ಬಿಸಿದೆ..
     ಆದರೀದಿನ ನೀನೇ ಯಾಕೆ ಚಿಗುರುವ ಮುನ್ನವೇ ಕತ್ತರಿಸಿದೆ.? (2)


ನಗುವ ನಯನ ಅಂತ ಯುಗಳಗೀತೆ ಹಾಡಿ ನನ್ನ ಅಟ್ಟಕ್ಕೇರಿಸಿದೆ..
               ಪ್ರೀತಿ ಮಧುರ ತ್ಯಾಗ ಅಮರ ಅಂತ ನೀನನ್ನ ಹಳ್ಳಕ್ಕೆ ತಳ್ಳಿದೆ..
ಆದರೂ ನಾನು ನನಗಿಂತ ಹೆಚ್ಚು ನಿನ್ನ ಪ್ರೀತಿಸಿದೆ..
        ಕಾರಣವಿಲ್ಲದೇ ಯಾಕೆ ನೀನನ್ನ  ನಿನ್ನಿಂದ ದೂರವಾಗಿಸಿದೆ..? (3)


ಕೋಗಿಲೆಯಂತ ನಿನ್ನ ಧ್ವನಿ ಕೇಳಿ ನನ್ನ ನಾ ಮರೆತಿದ್ದೆ..
          ಕೋಗಿಲೆಯೇ ಗಿಡುಗನಾಗಿ ನನ್ನೆದೆಯ ನೀ ಕುಟುಕಿದ್ದೆ..
ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..
      ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ..(4)

ಇದೇನಾ ಪ್ರೀತಿ ಇದೇನಾ ಪ್ರೇಮ.?
             ಪ್ರೀತಿ ಹೆಸರಲಿ ಗೆದ್ದಾಗಿತ್ತು ಕಾಮ..
ಕೊನೆಗೂ ನನ್ನ ಏಕಾಂಗಿಯಾಗಿ ಬಿಟ್ಟು ಹೋದೆ ನೀ ಒಂದುದಿನ..
           ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ.. (5)

ಬುಧವಾರ, ಡಿಸೆಂಬರ್ 14, 2011

""ಜಂಗಮಗಂಟೆಯಲ್ಲಿ ಭೂತ ಭಾಗ ೩""



ನಮಸ್ಕಾರ ಸ್ನೆಹಿತರೇ....
ಇದು "ಜಂಗಮಗಂಟೆಯಲ್ಲಿ ಭೂತ"ದ ಮುಂದುವರೆದ ಭಾಗ..
   ಇದು ಮೊದಲೆರಡು ಸಂಚಿಕೆಗಿಂತ ಭಿನ್ನ ಹಾಗು ಭಯಾನಕವಾಗಿಸಲು ಪ್ರಯತ್ನಿಸಿದ್ದೇನೆ..

ಇಲ್ಲಿಂದ,,:>>

ಆ ಅನಾಮಿಕ ಧ್ವನಿ ಅಷ್ಟೊಂದು ಹೆದರಿಸಿದರೂ, ಏನೋ ಒಂದು ಭಂಡ ಧೈರ್ಯದಿಂದ ನಿದ್ದೆಗೆ ಶರಣಾದೆ..

ಮುಂದೆ,,,

ಸುಖನಿದ್ರೇಲಿ ಮುಗುಳ್ನಗುತ್ತಿದ್ದಂತೆ ಕಾಣುವಂತೆ ಮಲಗಿದ್ದ ರಮೇಶನ ಮೊಬೈಲ್ ಇದ್ದಕ್ಕಿದ್ದಂತೆ ಅರಚಾಡಲು ಶುರುಮಾಡಿತು. ಎಷ್ಟೋ ವರ್ಷ ತಪಸ್ಸಿನಿಂದ ಏಳೋರಂತೆ ಎದ್ದು ಮೆಲ್ಲಗೆ ಗಡಿಯಾರ ನೋಡಿದ. ಸಮಯ 5 ಗಂಟೆ ಆಗಿತ್ತು. ಬೆಳಬೆಳಿಗ್ಗೆ ಯಾರಪ್ಪ ಅಂತ ಪೋನ್ ರಿಸೀವ್ ಮಾಡಿದ. ಒಂದು ಇಂಪಾದ ಗೀತೆ ಈ ಹಾಡನ್ನ ನಿಮ್ಮ ಕಾಲರ್ ಟ್ಯೂನ ಮಾಡಿಕೊಳ್ಳಲು ಒಂದು ಒತ್ತಿ ಅಂತ ಮದುರ ಕಂಟದ ದ್ವನಿ ಕೇಳಿತು. ಕಾಲ್ ಕಟ್ ಮಾಡಿದ. ಮಲಗೋಣ ಅಂತ ತಯಾರಾದ ಯಾಕೋ ನನ್ನ ನೆನಪಾಗಿ ರೂಮ್ ಗೆ ಬಂದ
    ನಾನಿರದಿದ್ದನ್ನು ಕಂಡು ಒಮ್ಮೆ ದಂಗಾದ. ಮನೆಯೆಲ್ಲಾ ಹುಡುಕಿ ನಂತರ ಮನೆ ಟಾರಸಿ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದ ನನ್ನ ಎಬ್ಬಸಿದ..
ನಾನು ಒಮ್ಮೆಲೆ ಗಾಬರಿಯಿಂದ ಎದ್ದು 'ಬೇಡ ನನ್ನ ಏನೂ ಮಾಡಬೇಡ ನಿನಗೆ ಏನ್ ಬೇಕೋ ಕೊಡ್ತೀನಿ ನನ್ನ ಬಿಟ್ಟು ಬಿಡು' ಅಂತ ಹೇಳೋಕೆ ಶುರುಮಾಡಿದೆ. ನನ್ನ ನೋಡಿ ಅವನು ಗಾಬರಿಯಾಗಿ, 'ಏನಾಯ್ತೋ ನಾನ್ ಕಣೋ ರಮೆಶಾ' ಅಂದ.
ಕೊಂಚ ಚೇತರಿಸಿಕೊಂಡು, ಅದು.. ಅದು.. ಅಂತ ತೊದಲೋಕೆ ಶುರು ಮಾಡಿದೆ. 'ಏನಾಯ್ತು ಹೇಳೊ..' ಅಂದ ರಮೆಶ..

  ಆಗ ನಾನು.. "ರಾತ್ರಿ ಮಲಗಿದ್ದೆ ನಿದ್ದೆನೂ ಬಂದಿತ್ತು, ಸಡನ್ನಾಗಿ ಏನೋ ಸೌಂಡ್ ಆಯ್ತು ನಾನು ಇಲಿಗಳಿರ್ಬಹುದು ಅಂತ ಸುಮ್ನಾದೆ. ಸ್ವಲ್ಪೊತ್ತಿನ ನಂತ್ರ, ಮೈಮೇಲೆ ಏನೊ ಹರಿದಾಡಿದ ಹಾಗೆ ಆಯ್ತು,
ಮೊದ್ಲೇ ಹೆದರಿದ್ದ ನಂಗೆ ನಿದ್ದೆ ಎಲ್ಲೋ ಮಾಯವಾಗಿ ಎಚ್ಚರವಾಯ್ತು, ಆಗ mostly 12-12:30 ಆಗಿತ್ತು ಅನ್ಸುತ್ತೆ..ನಾನು ಬೆಡ್ ಲೈಟ್ ಆನ್ ಮಾಡಿ ನೋಡಿದಾಗ ಉಸಿರೇ ನಿಂತಂತಾಗಿತ್ತು. ಯಾಕಂದ್ರೆ ನಾನು ಮಧ್ಯಾಹ್ನ ಮೋರಿಯಲ್ಲಿ ಬಿಸಾಕಿದ ಮೊಬೈಲ್ ನನ್ನ body ಮೇಲೆ ಬ್ರೇಕ್ ಡ್ಯಾನ್ಸ್ ಮಾಡ್ತಿತ್ತು..!!:(

ಅಷ್ಟರಲ್ಲಿ ರಮೇಶ ಜೋರಾಗಿ ನಗುತ್ತಾ "ಸಕತ್ತಾಗಿ ಕಾಮಿಡಿ ಮಾಡ್ತ್ಯಾ" ಅಂದ..

    ನಾನು ಕೋಪದಿಂದ,, "ನಾನಿಲ್ಲಿ ಹೆದ್ರ್ಕೊಂಡು ಸಾಯ್ತಿದಿನಿ ನಿಂಗೆ ಕಾಮಿಡಿ ಥರ ಕಾಣುತ್ತಾ" ಅಂತ ಬೈದೆ. ಅದಕ್ಕೆ ರಮೇಶ್ "ಒಕೆ ಒಕೆ ಮುಂದೇನಾಯ್ತು..?"
ನಾನು  ಭಯದಿಂದ ಏನ್ಮಾಡ್ಬೇಕು ಅಂತ ತಿಳಿದೇ, ಅಲ್ಲಿಂದ ಓಡೋಕೆ ಶುರು ಮಾಡ್ದೆ.. ಇಡೀ ಮನೆ ಸುತ್ತು ಹಾಕಿದಿನಿ ಗೊತ್ತಾ..? ನೀನು ನಂಬ್ತಿಯೊ ಇಲ್ವೊ ಗೊತ್ತಿಲ್ಲ್ಲಾ ಒಳ್ಳೆ ಅಥ್ಲೇಟಿಕ್ ಚಾಂಪಿಯನ್ ಥರ ನನ್ನ ಹಿಂದೆ ಓಡಿ ಬರ್ತಿತ್ತು. ಆಮೇಲೆ ಎಲ್ಲೂ ಜಾಗ ಸಿಗ್ದೇ ಟೆರೆಸ್ ಮೇಲೆ ಹೋಗೋಣಾಂತ ಓಡಿಬಂದೆ ಬರುವಾಗ ಮೆಟ್ಲಿಗೆ ಕಾಲು ತಾಗಿ ಎಡವಿ ಬಿದ್ದೆ, ಅಷ್ಟೆ ಅದು ನನ್ನ ಎದೆ ಮೇಲೆ ಹಾರಿಬಂದು ಕುಳಿತುಕೊಂಡಿತು.
one more thing ಹೇಳೋಕೆ ಮರ್ತಿದ್ದೆ,ಆ ಮೊಬೈಲ್ ಗೆ 2 ಕಾಲು 4ಕೈ ಇತ್ತು. ಕೀಪ್ಯಾಡ್ ಪೂರ್ತಿ ಕೆಂಪಾಗಿತ್ತು. ಕ್ಯಾಮೆರಾ ಲೆನ್ಸಿಂದ ಏನೋ ಒಂಥರಾ ರೆಡ್ ಕಲರ್ ಲಿಕ್ವಿಡ್ ಸುರಿತಾ ಇತ್ತು. ಸ್ಪೀಕರಿಂದ ವಿಕಾರವಾಗಿ ನಗೋ ಸೌಂಡ್ ಬರ್ತಿತ್ತು..
ಇದೆಲ್ಲಾ ಹೊರರ್ ಫಿಲ್ಮ್ ಅಲ್ಲಿ ನೋಡಿ ನಗ್ತಿದ್ದ ನಂಗೆ ಎದುರಲ್ಲಿ ರಿಯಲ್ಲಾಗಿ ನೋಡ್ತಿದ್ದ ನನ್ನ heart ಕೈಗೆ ಬಂದಂತಾಯ್ತು..
ಆಗ ಅದು ಮಾತಾಡೋಕೆ ಶುರುಮಾಡ್ತು. ""ಹಾಯ್ ಫ್ರೆಂಡ್  ನಾನ್ ಹೇಳಿದ್ದು ಮರೆತೋಯ್ತಾ.?ಇವತ್ತು ನಿನ್ನ ಕೊನೇ ದಿನ ಅಂತಾ ಹೇಳಿರ್ಲಿಲ್ವಾ.? oh sory ma dear freind..  ನಾವಿಬ್ರೂ ಮೀಟ್ ಮಾಡಿ ತುಂಬಾ ಟೈಮ್ ಆಯ್ತಲ್ವಾ ಅದ್ಕೆ ಸರ್ ಇಂದ ಫ್ರೆಂಡ್ ಗೆ ಪ್ರಮೋಶನ್ ತಗೊಂಡಿದಿನಿ.. ಅದ್ಬಿಟ್ಟಾಕು ಇನ್ನರ್ಧ ಗಂಟೆ ಮಾತ್ರ ಬ್ಯಾಲೆನ್ಸ್ ಇರೋದು, ಯಾವ್ಯಾವ್ god ಹತ್ರ pray ಮಾಡ್ಬೇಕು ಅಂತಿದ್ಯೋ ಎಲ್ಲಾ ಪಟಾಪಟ್ ಮುಗಿಸ್ಕೊಂಡ್ಬಿಡು.. finaly today is urs last day so,, 1st ಕಾಲಿನ ಬೆರಳಿಂದ start ಮಾಡ್ತಿನಿ"" ಅಂತ ಹೇಳಿದಾಕ್ಷಣ ನನ್ನ ಕಾಲ್ಬೆರಳು ಶಾರ್ಪ್ ಚಾಕುವಿನಿಂದ ಕಟ್ ಮಾಡಿದ ಕ್ಯಾರೆಟ್ ಥರ ತುಂಡಾಗಿ ಬಿತ್ತು, ಆಗ ನಾನು ಜೋರಾಗಿ ಕಿರುಚಿದೆ.ಆಗ ನಂಗೆ ಭಯದಲ್ಲೂ ಕ್ಯೂರಾಸಿಟಿ ಮೂಡಿತ್ತು, ಯಾಕಂದ್ರೆ, ಅಷ್ಟು ಜೋರಾಗಿ ಕಿರುಚ್ತಾ ಇದ್ರೂ ನನ್ನ ವಾಯ್ಸ್ ನಂಗೇ ಕೇಳಿಸುತ್ತಿರಲಿಲ್ಲಾ, ಆ ಧ್ವನಿ ನನ್ನ ಒಂದೊಂದೇ ಪಾರ್ಟ್ ಹೆಸ್ರು ಹೇಳಿದಾಕ್ಷಣ ಆ ಪಾರ್ಟ್ ತುಂಡಾಗಿ ಬೀಳುತ್ತಿತ್ತು,,
(ಕಾಲು, ಕೈ, ಹೊಟ್ಟೆಯೊಳಗಿನ ಕರಳು, ಕಣ್ಣು, ಕಿವಿ, ಕೊನೆಗೆ ನನ್ನ ತಲೆಯೊಳಗಿನ ಮೆದುಳು ಕೂಡ,) ಆದರೂ ನನ್ನಲ್ಲಿ ತ್ರಾಣ ಹಾಗೆ ಇತ್ತು. ನಾನಾಗ ಮತ್ತೊಂದ್ಸಲ ಜೋರಾಗಿ ಕೂಗಿದೆ, ಆಗ ಏನೂ ಇರಲಿಲ್ಲ ಅಷ್ಟರಲ್ಲಿ ನಂಗೆ ತಲೆ ಸುತ್ತಿದಂತಾಗಿ ಇಲ್ಲೇ ಬಿದ್ದೆ..""

ಆಗ ರಮೇಶ,, "ಹೊಗಲೋ ಪುಕಲಾ..! ಎಲ್ಲೋ ಕನಸು ಕಂಡು ಹೆದರಿದ್ದೀಯ ಮೊಬೈಲ್ ಗೆ ಕೈ ಕಾಲಂತೆ ಬಾಯಂತೆ ಯಾರತ್ರ ಹೇಳ್ತೀಯ ಕಥೇನಾ.? ನಡಿ ನಡಿ ಮುಖ ತೊಳ್ಕೊ ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋಗೋಣ" ಅಂತ ಹೇಳ್ತಾ ಇದ್ದಾಗ ರಮೇಶನ ಮೊಬೈಲ್ ಮತ್ತೆ ಬಡ್ಕೊಳೋಕೆ ಶುರುವಾಯ್ತು..

ಆಗ ರಮೇಶ "ಈ ಕಂಪನಿಗಳಿಗೆ ಬೇರೆ ಕೆಲ್ಸಾನೇ ಇಲ್ಲ ಅನ್ಸುತ್ತೆ" ಅಂತ ಗೊಣಗಿ ಕಾಲ್ ರಿಸೀವ್ ಮಾಡ್ದ ಆಗ ಮತ್ತದೇ ದ್ವನಿ.. ತಂತಾನೇ ಸ್ಪೀಕರ್ ಆನ್ ಆಯಿತು. ""HAI FRND ಏನ್ ಕನಸು ಅಂದುಕೊಂಡ್ಯಾ no dis is 100% true ಅವನು ಹೇಳಿದ್ದು ಎಲ್ಲಾ ನಿಜ ನಾನು ಸಾಯಿಸೋಕೆ ಅಂತಾನೇ ಬಂದಿದ್ದೆ ಆದರೆ,""
ಅಂತ ಹೇಳ್ತಿದ್ದಾಗ, ನಾನು ಮೊಬೈಲ್ ಕಸಿದುಕೊಂಡು, "ಏನ್ ಬೇಕಾದ್ರೂ ಮಾಡ್ಕೊ" ಅಂತ ಹೇಳಿ ಮೊಬೈಲ್ ಬಿಸಾಕಿದೆ..

ಆದರೆ ಇನ್ನೊಂದು ಆಶ್ಚರ್ಯ ಏನಪ್ಪಾಂದ್ರೆ ಆ ಧ್ವನಿ ಈಸಲ ಬರೀ ಕಂಗ್ಲೀಷ್ ಭಾಷೆ ಮಾತ್ರ ಬಳಸಿತ್ತು..!! ಬೇರೆ ಇನ್ಯಾವ ಭಾಷೆನೂ ಮಾತಾಡಲಿಲ್ಲ.

 ಆಗ ರಮೇಶ,, "ಇದು ದೆವ್ವದ ಕಾಟ ಇರಬೇಕು ನಂಗೆ ಗೊತ್ತಿರೋ ಮಲಯಾಳಿ ಮಂತ್ರವಾದಿ ಹತ್ರ ಹೋಗೋಣ" ಅಂದ. ನಂಗೆ ಇದರಲೆಲ್ಲ ನಂಬಿಕೆ ಇಲ್ಲದಿದ್ರೂ, ಮನಸ್ಸಿಗೆ ತುಂಬಾ ಹೆದರಿಕೆ ಆಗಿದ್ದರಿಂದ ಒಪ್ಕೊಂಡೆ..
ರಮೇಶ ಬೈಕ್ ಓಡ್ಸೋಕು ಭಯ ಅಂದ. ಸೋ ನಾನೇ ಬೈಕ್ ಓಡಿಸ್ಕೊಂಡು ಮಂತ್ರವಾದಿ ಮನೆಗೆ ಹೊದ್ವಿ

    ನಮ್ಮನ್ನ ನೋಡಿ, ಮಂತ್ರವಾದಿ ಮಲಯಾಳಂನಲ್ಲಿ ಏನೋ ಹೇಳಿದ, ನಂಗೆ ಪೂರ್ತಿ ಅರ್ಥ ಆಗ್ಲಿಲ್ಲ, ಅದು ಅವನಿಗೆ ಗೊತ್ತಾಗಿ which language.? ಅಂತ ಕೇಳ್ದ. 'ಕನ್ನಡ' ಅಂದ್ವಿ..
'ಮೊದಲು ಸ್ನಾನ ಮಾಡಿ ಬನ್ನಿ' ಅಂತ ಬಾವಿ ತೋರಿಸಿದ, ನಾವಿಬ್ಬರೂ ಆ ಬಾವಿಯ ಬಳಿ ಇದ್ದ ಬಿಂದಿಗೆಯಿಂದ ನೀರೇತ್ತಿಕೊಂಡು ಶಾಸ್ತ್ರಕ್ಕೆ ಸ್ನಾನ ಮಾಡಿಕೊಂಡು ಬಂದು ಅವನ ಎದುರಲ್ಲಿ ಕೂತ್ಕೋಂಡ್ವಿ..
ಆ ಮಂತ್ರವಾದಿ ಬಾಯಲ್ಲ್ಲಿ ಏನೇನೋ ಮಂತ್ರ ಬಣಗುಡಿಸಿ, ""ಇದೆ ಇಲ್ಲೊಂದು ಸಮಸ್ಯೆ ಇದೆ"" ಅಂತಾ ಆಪ್ತಮಿತ್ರ ಅವಿನಾಶ್ ಸ್ಟೈಲಲ್ಲಿ ಹೇಳಿದ,, ನನಗೆ ಅಂತಾ ಸೀರಿಯಸ್ ಮೂಮೆಂಟಲ್ಲೂ ನಗು ತಡೆಯಲಾರದೇ, "ಸಮಸ್ಯೆ ಇಲ್ಲಲ್ಲ್ಲಾ ಸ್ವಾಮಿ ನನ್ನ ಮೊಬೈಲಲ್ಲಿರೋದು" ಅಂದೆ.

ಅದಕ್ಕವನು 'ಸರಿ ಆ ಜಂಗಮವಾಣಿಯನ್ನು ಕೊಡಿ" ಅಂದ. ಆಗ ನನ್ನ ಮುಖ ಸಪ್ಪೆಯಾಯಿತು, ಯಾಕಂದ್ರೆ ನಾವು ಕೋಪದಲ್ಲಿ ಬೀಸಾಡಿದ್ದ ಮೊಬೈಲ್ ಅನ್ನು ತರಲು ಮರೆತಿದ್ದೆ, ಆ ಮಂತ್ರವಾದಿ ನನ್ನ ಮುಖ ನೋಡಿ ಮೊಬೈಲ್ ಕೊಡುವಂತೆ ಮತ್ತೊಮ್ಮೆ ಸನ್ನೆ ಮಾಡಿದ.ಆಗ ರಮೇಶ "ಕ್ಷಮಿಸಿ.. ಗಾಬರಿಯಲ್ಲಿ ಪೋನ್ ತರೊದನ್ನ ಮರ್ತುಬಿಟ್ಟಿದ್ದಿವಿ ನಾನು ಹೋಗಿ ತರ್ತಿನಿ" ಅಂತ ಹೊರಟಾಗ,, ""ಆ ತೊಂದ್ರೆ ನಿಮಗೆ ಬೇಡಾ ಅಂತಾ ನಾನೇ ಇಲ್ಲಿಗೆ ಬಂದೆ"" ಅಂತಾ ಹಳೇ ಫಿಲ್ಮ್ ವಿಲನ್ ಥರ ನೆಡ್ಕೊಂಡು ಬರ್ತಾ ಇರೊ ನನ್ನ ಮೊಬೈಲನ್ನು ನೋಡಿ, ನಮಗಿಂತ ಜಾಸ್ತಿ ಆ ಮಂತ್ರವಾದಿಗೆ ಹೆದರಿಕೆಯಾಗಿ 'ನಖಶಿಖಾಂತ' ನಡುಗುತಿದ್ದ್ದ.............


ಕ್ಷಮಿಸಿ ಸ್ನೇಹಿತರೇ.. to be continued.....:)

ಶನಿವಾರ, ಡಿಸೆಂಬರ್ 10, 2011

....ಓಂ ಶಾಂತಿ ಓಂ....

ನೀನೇ ನನ್ನ ಪ್ರೀತಿ ನೀನೇ ರೀತಿ...
  ನೀನೇ ನನ್ನ ಶಾಂತಿ ನೀನೇ ನನ್ನ ಆಸ್ತಿ...
ನೀನೇ ಎಂದೂ ನನ್ನ ಮನದೊಡತಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
      ನಿನ್ನಿಂದ ಮನಸಿಗೆ ಹೊಸ ಕಾಂತಿ... (೧)

ಕಾಡಬೇಡ ನೀನು ಸ್ವಪ್ನದಲಿ ಬಂದು...
          ನಗಬೇಡ ನೀನು ಎದುರಲಿ ನಿಂದು...
ಸೋತು ಹೋಗುವೆ ನಾನು ಓ ಮನದರಸಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನೀನಿಲ್ಲದೇ ಎಲ್ಲಿ ನನ್ನ ಸುಖ ಶಾಂತಿ..? (೨)

ನಾನೀಗ ಅರಿತೆ ಈ ಪ್ರೀತಿ ತುಂಬಾ ಮೋಸ...
            ಪ್ರೀತಿ ಹೆಸರ ಹೇಳಿ ಆಡುತಾರೆ ಸರಸ...
ಇಲ್ಲೂ ಹೀಗೇನಾ..? ಅಥವಾ ಸಹಜ ನಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
   ಈ ಪ್ರೀತಿ ನಿಮಗ್ಯಕೆ ಮಹಾರಾಯ್ತಿ..? (೩)

ನೀನೇ ನನ್ನ ನೋಡಿ ಪ್ರೀತಿ ಮೋಡಿ ಮಾಡಿ...
           ಯಾಕೆ ಹೋದೆ ಓಡಿ ಧನಿಕನ ನೋಡಿ...
ಪ್ರೀತಿಯಲ್ಲೂ ಲಾಭವ ಹುಡುಕಲು ಹೋದೆಯಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
       ನಿನ್ನ ನೆನಪಲ್ಲಿ ಹಾಳಾಯ್ತು ಮನಶ್ಯಾಂತಿ... (೪)

ಹಾಳಾದ ಈ ಮನಸೂ ನನ್ನ ಮಾತೆಲ್ಲಿ ಕೇಳಿತು..?
          ಮತ್ತೊಬ್ಬ್ಬಳ ನೋಡಿ ಖುಷಿಯಿಂದ ಜಿಗಿಯಿತು...
ಮತ್ತದೇ ಪ್ರಾಸಪದ ಮನದಲ್ಲಿ ಮೂಡಿತು...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನಿನ್ನಿಂದ ಮನಸಿಗೆ ಹೊಸ ಕಾಂತಿ... (೫)

ಭಾನುವಾರ, ಡಿಸೆಂಬರ್ 4, 2011

""ನನ್ನ ಕವನ""

ಹೀಗೇಕೆ ಹೀಗೇಕೆ ನಾನಾದೆ..
            ಕಾರಣವ ಹೇಳೆ ಓ ಒಲವೇ. 
ನಿನ್ನ ಕಂಡಾಗ ನನ್ನಿಂದ ನಾನೇ ಮಾಯವಾದೆ.. (೧)


ಮೌನವಾಗಿದ್ದ ನನ್ನ ಕನಸಿಗೆ ನೀ ಮಾತು ಕಲಿಸಿದೆ..
                    ಛಿದ್ರವಾಗಿದ್ದ ನನ್ನ ಮನಸಲಿ ನೀ ಚಿತ್ರ ಬಿಡಿಸಿದೆ..
ತಮ ತುಂಬಿದ್ದ ನನ್ನ ಬದುಕಲಿ ನೀ ದೀವಟಿಗೆಯಾದೆ..(೨)


ಮಾಯಾ ಜಿಂಕೆಯಂತೆ ಬಂದು ನನ್ನ ಚಂಚಲನಾಗಿಸಿದೆ..
                   ಸುಡು ಬಿಸಿಲಲ್ಲಿ ತಂಗಾಳಿಯಾಗಿ ನನ್ನ ಮನದಲಿ ವಾಸವಾದೆ..
ಹೇಗೋ ಇದ್ದವನ ಹೀಗೆ ಬದಲಿಸಿ ನಡುನೀರಲ್ಲಿ ಕೈಬಿಟ್ಟು ಹೋದೆ..(೩)


ಹೀಗೇಕೆ ಮಾಡಿದೆಯೆಂದು ನಾ ಕೇಳಲಾರೆ..
                             ಈ ನಿನ್ನ ನೆನಪಲಿ ನಾ ಕೊರಗುತಾ ಕೂರಲಾರೆ..
ಆದರೆ ಈ ಕಲ್ಲನ್ನು ಶಿಲೆಯಾಗಿಸಿದ್ದನ್ನು ಎಂದೂ ಮರೆಯಲಾರೆ.. (೪)


ಈ ಜೀವನದ ತಿರುವುಗಳೇ ಸರಿಯಿಲ್ಲ..
            ಇನ್ನೊಬ್ಬಳಿಗೆ ನನ್ನ ಮನ ಸೋತು ಹೋಯ್ತಲ್ಲಾ..
ಅವಳೇ ನನ್ನ ಮುದ್ದಿನ ಮಡದಿ ಮೃದುಲಾ..! (೫)

ಶುಕ್ರವಾರ, ಡಿಸೆಂಬರ್ 2, 2011

...""ನನ್ನ ಗೋಳು""...

ತಿಳಿಯಾದ ಆಗಸದಲ್ಲಿ ಕ೦ಡಿತು ತು೦ಬಿದ ರಜನಿ....
                ಪ್ರೀತಿಯಲ್ಲಿ ಕೈಕೊಟ್ಟವಳ ನೆನೆದು ನಾನಾದೆ ತಲೆ ಬೋಳಿಸಿಕೊ೦ಡು ಘಜನಿ...

ಕನಸಲ್ಲಿ ಕ೦ಡ ಅವಳ ಮುಖ ಮುದ್ದಾಗಿದೆಯೆ೦ದು ಅನಿಸಿತ್ತು...
                 ಬ್ರಮಾಲೋಕದಿ೦ದ ಹೊರಬ೦ದಾಗ ಮೇಷ್ಟ್ರ ಕೈಇ೦ದ ಬೆನ್ನ ಮೇಲೆ ಗುದ್ದೊ೦ದು ಬಿದ್ದಿತ್ತು....


ಅವಳು ಸ೦ತಸದಿ೦ದ ಓಡಿ ಬ೦ದು ನನ್ನ ತಬ್ಬಿಕೊ೦ಡಳು...
          ಹ್ಯಾಪಿ ರಕ್ಷಾ ಬ೦ದನ್ ಅ೦ತ ರಾಖಿ ಕಟ್ಟಿ ಮರಳಿ ಓಡಿ ಹೋದಳು....

ಅವಳ೦ದಳು ನೀನಿರುವೆ ನನ್ನ ರಕ್ತದ ಕಣಕಣದಲ್ಲಿ ಎ೦ದೇ೦ದೂ...
              ಆದ್ರೆ ನ೦ಗೇನು ಗೊತ್ತಿತ್ತು ಅವಳ ದೇಹ ಸಕ್ಕರೆ ಕಾರ್ಖಾನೆಯ ಒಡತಿಯೆ೦ದು.....!!!