ಸೋಮವಾರ, ಜನವರಿ 16, 2012

("ಗಾಳಿಪಟ" ಚಿತ್ರದ "ಕವಿತೆ.. ಕವಿತೆ.." ಹಾಡಿನ ಧಾಟಿಯಲ್ಲಿ ನನ್ನ ಪ್ರಯತ್ನ...) ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. ನನ್ನುಸಿರಾ ಉಸಿರಲ್ಲಿ ನಿನ್ನೆಸರ ಕುಣಿತ.. ಓ ಚೆಲುವೆ ನೀನನ್ನ ಜೀವನದಾ ಮಿಡಿತ.. ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. (೧) ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. ಚಿಮ್ಮುತಿದೆ ಈ ನನ್ನ ಎದೆಯೊಳಗೆ ಆಸೆ.. ಓ ಗೆಳತಿ ನೀನೀಡು ವರಕೊಡುವ ಭಾಷೆ.. ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. (೨) ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. ನನ್ನೊಲವೇ ಈಗ್ಯಾಕೆ ನೀನಾದೆ ದೂರ.. ಏಕಾಂತ ಮನವನ್ನು ಮಾಡಿಹುದು ಭಾರ.. ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. (೩)


ಶನಿವಾರ, ಜನವರಿ 7, 2012

""ಕವಿ ಕಲ್ಪನೆ""


ನಮಸ್ಕಾರ ಸ್ನೇಹಿತರೇ....

ನಂಗಿವತ್ತು ಒಂದ್ಮಾತು ನಿಜ ಅನ್ನಿಸ್ತಾ ಇದೆ.
ಕವಿಗಳಿರ್ತಾರಲ್ಲಾ ಕವಿಗಳು, ಇವ್ರಿಗೆ ನಮ್ಮ ಅಂದ್ರೆ ಮನುಷ್ಯರ ಮನಸು & ಹಾರ್ಟ್ ಅಂತ ಏನ್ ಕರಿತೀವಿ ನೋಡಿ, ಎರಡು ಅಂಗಗಳು ಒಂಥರಾ "ಸರಿಯಾಗಿ ಕಲಸಿ ಹದ ಮಾಡಿಟ್ಟ ಗೋಧಿ ಹಿಟ್ಟು ಇದ್ದ ಹಾಗೆನೆ..
ಯಾಕಂತೀರಾ.? ಕೆಳಗಡೆ ಬನ್ನಿ,

ನೀವೇ ಥಿಂಕಿಸಿ ಗೋಧಿ ಹಿಟ್ಟನ್ನು ಹದಮಾಡಿ ರೆಡಿಯಾಗಿಟ್ಟರೆ,
ಚಪಾತಿ ಮಾಡಬಹುದು,
/ ಇಂಚು ದಪ್ಪಗಿರೋ ರೊಟ್ಟಿ ಮಾಡಬಹುದು,
ಪೂರಿ ಮಾಡಬಹುದು,
ಯಾವ್ದೂ ಬೇಡಾಂದ್ರೆ ಇನ್ನೊಂದ್ಸ್ವಲ್ಪ ನೀರು ಮಿಕ್ಸ್ ಮಾಡಿ "ಗೋಧಿ ತೆಳ್ಳಾವು"(ಬಹುಷಃ ನೀರುದೋಸೆ ಅಂತಾರೆ) ಮಾಡಿ ತಿನ್ನಬಹುದು,
ಅದೂ ಬೇಡಾಂದ್ರೆ, ನಿಮಗೆ ಮಾಡಲು ಆಸಕ್ತಿ ಹಾಗು ಸಮಯ ಇವೆರಡೂ ಇದ್ದ್ದರೆ, ಬಗೆ ಬಗೆಯ ಕುರುಕಲು ತಿನಿಸನ್ನು ಮಾಡಬಹುದು, ಮಾಡುತ್ತ್ತಾರೆ,

ಹಾಗೆ ಮನಸು & ಹಾರ್ಟನ್ನೂ ಸಹ ನಮಗೆ ಃಏಗೆ ಬೇಕೊ ಹಾಗೆ ಬದಲಾಯಿಸುತ್ತೇವೆ, ಬದಲಾಯಿಸುತ್ತಿದ್ದೇವೆ..
ಉದಾ:> ಒಬ್ಬ ಮರುಭೂಮಿಯಾಗಿಸುತ್ತಾನೆ,
ಇನ್ನೊಬ್ಬ ಆಕಾಶ ತೋರಿಸುತ್ತಾನೆ,
ಮತ್ತೊಬ್ಬ ಬಾವಿ ಅಗೆಯುತ್ತಾನೆ,
ಮಗದೊಬ್ಬ ಸರೋವರ ಅಂತಾ ಹೆಳ್ತಾನೆ,
ಇನ್ನೂ ಕೆಲವರು "ಕಾಲಿಡಬ್ಬಾ" ಅಂತಾರೆ,
ಚಂಚಲ ಚಿತ್ತ ಅಂತಾರೆ,
ತಾವು ಪ್ರೀತಿಸಿದವರಿಗೆ ಹೋಲಿಸುತ್ತ್ತಾರೆ,
ಮತ್ತೊಂದಿಷ್ಟು ಜನರಿದ್ದಾರೆ,
ಅವರು ತಮ್ಮಾಸೆ ಈಡೇರಲಿಲ್ಲಾಂತ  ಹರ್ಟಿಗೆ ಮುಳ್ಳಿನ ತಂತಿಯನ್ನು ಬಿಗಿಯಾಗಿ ಕಟ್ಟುತ್ತಾರೆ,
ಪಾಪ ಹಾರ್ಟು "ಅಯ್ಯೋ ನನ್ನ ಬಿಟ್ಟಾಕ್ರೋ" ಅಂತಾ ಬೊಬ್ಬಿಟ್ಟರೂ ಯಾರೂ ಕೇಳೋರಿಲ್ಲಾ.

ಇನ್ನು ಮನಸ್ಸು.
ಮನಸು ಅನ್ನೋದು ಏಣು ಅಂತಾ ಇನ್ನುವರೇಗೂ ಯಾರಿಗೂ ತಿಳಿಯಲಿಲ್ಲಾ.
ಆಂಗ್ಲ ಶಬ್ಧಕೋಶದಲ್ಲೂ ಪದಕ್ಕೆ ಅರ್ಥವಿಲ್ಲವೆಂದು ನನ್ನ ಗೆಳೇಯನೊಬ್ಬ ಹೇಳಿದ ನೆನಪು.
ಹಾಗದ್ರೆ, ಮನಸು ಅಂದ್ರೆ ಏನು,?
ಇದು ಒಂದು ಮಾನವನ ಅಂಗ ನಾ.? ಅಥವಾ ಹಾರ್ಟ್, ಹೃದಯ ಅಂತಾರಲ್ಲಾ ಅದರ ಪರ್ಯಾಯ ಪದನಾ.?
ನೀವೇ ಹೇಳಿ....:)

ಗುರುವಾರ, ಜನವರಿ 5, 2012

""ಜೋಪಡಿಯ ಬದುಕು""



ಸುಕ್ಕುಗೆಟ್ಟ ತಲೆಗೂದಲು..
    ಪಾತಾಳಕ್ಕಿಳಿದ ಕಂಗಳು..
ನೀರು ಕಾಣದ ಮರಗೆಟ್ಟಿರುವ ಶರೀರ..
ಐಶರಾಮಿ ಬಾಳ್ವೆಯ ಕನಸಿನಲ್ಲಿರುವ ಮನಗಳು..
ಮಳೆಯಿರಲಿ ಚಳಿಯಿರಲಿ, ಸುಡುವ ಬಿಸಿಲಿರಲಿ,
  ನೋವಲ್ಲಿ ನಲಿವು ಕಾಣುವ ಇವರು ಜೋಪಡಿಗರು..(೧)



ಅನರಕ್ಷತೆಯ ಭವ್ಯ ನೆಂಟಸ್ತಿಕೆ
 ಶುದ್ದ ವ್ಯವಹಾರದ ಮಾತುಗಾರಿಕೆ..
ಎಲ್ಲರೂ ನಮ್ಮವರೆಂದು ಮೋಸ ಹೋಗಿ,
 ನಂತರ ಬದುಕಲಿ ಗೋಳಾಡುವರು
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
        ಶ್ರಮದಿಂದ ದುಡೀವ ಇವರು ಜೋಪಡಿಗರು.. (೨)


ಕೇವಲ ಮಾನ ಮುಚ್ಚಲಷ್ಟೇ ವಸ್ತ್ರವ ತೊಟ್ಟು,,
  ನಾಳೆ ಬಗ್ಗೆ ಚಿಂತಿಸದೇ ಈದಿನದಲ್ಲಿ ಖುಷಿಯ ಕಂಡು,,
ಪಡೆದ ಕಾಸಿಗೆ ತಕ್ಕ ಕೆಲಸ ಮಾಡುವ ಕೂಲಿಗಳಿವರು..
 ಕೆಟ್ಟ ಚಟಕ್ಕೆ ಬಲಿಯಾಗಿ ಅರೆಹೊಟ್ಟೆ ತಿಂದು ದುಃಖಿಸುವರು.,
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
ಜೋಪಡಿಯಲ್ಲೇ ಬದುಕು ಮುಗಿಸುವ ಇವರು ಜೋಪಡಿಗರು... (೩)

""ಒಂದರಿಂದ ಒಂದರವರೆಗೆ""

ಹೊಸ ಪ್ರಯತ್ನ... ಫಲ ನೀಡಿ ಆಶಿರ್ವದಿಸಿ...

  ""ಒಂದರಿಂದ ಒಂದರವರೆಗೆ""

ಒಂದೆರಡು ಸಲದ ಭೇಟಿ,

ಮೂರ್ನಾಲ್ಕು ಸಲ ಮಾಡಿದ ದೂರವಣಿ ಕರೆ,

ಐದಾರು ಮಾತುಗಳಲ್ಲೇ ಅವಳಲ್ಲಿ ಸ್ನೇಹವಾಯಿತು.

ಏಳಂಟು ದಿನದಲ್ಲಿ ಆ ಸ್ನೇಹ ಪ್ರೇಮಕ್ಕೆ ವಾಲಿತು.

೯-೧೦ ಜನರಿದ್ದ ಅವಳ ಮನೆಯಲ್ಲಿ ಒಪ್ಪಿಸಿ,

೧೧-೧೨ ದಿನಗಳ ಕಾಲ ತಿಕ್ಕಾಡಿ ಕಿತ್ತಾಡಿ ನಮ್ಮನೆಯವರನೆಲ್ಲಾ ಒಪ್ಪಿಸಿದೆ.

೧೩ನೇ ದಿನ ನೀನನಗೆ ಜೋಡಿಯಲ್ಲವೆಂದು ಅವಳಂದಾಗ,

ನನಗಾಗ ನಿಂತಲ್ಲೇ ನನ್ನದೇ ೧೪ನೇ ದಿನದ (ವೈಕುಂಟ)ಸಮಾರಾಧನೆಯಾದಂತೆ ಭಾಸವಾಯಿತು.

೧೫ನೇ ದಿನ ಅವಳನ್ನು ವಿಚಾರಿಸಲು ನನ್ನ ೧೬-೧೭ ಮಂದಿ ಸ್ನೇಹಿತರು ಮುಂದಾದಾಗ,

ಅವಳಿಗಿನ್ನು ೧೮ರ ಬಾಲ್ಯಬುದ್ಧಿಯೆಂದು ಅವರನ್ನು ಸಮಾಧಾನಿಸಿದೆ.

೧೯ನೇ ದಿನ ಮನದ ಕಾಟ ತಾಳಲಾರದೇ ಅವಳ ಹುಡುಕುತಾ ಹೊರಟಾಗ,

೨೦-೨೧ ಐಶರಾಮಿ ಕಾರು ನಿಂತಿರುವುದನ್ನು ಕಂಡು,

೨೨-೨೩ ದಿನಗಳವರೆಗೂ ಕೇವಲ ಹಣಕ್ಕಾಗಿ ಪ್ರೀತಿಯೇ ಎಂದು ಯೋಚಿಸುತ್ತಿದ್ದೆ,

೨೪ನೇ ದಿನಾಂಕದಂದು ಅವಳ ಮದುವೆಯೆಂದು ಗೊತ್ತಾದಾಗ,

ನನ್ನ್ನೆದೆಯ ಕೋಣೆಯಲ್ಲಿ ನನ್ನೀ ಮನ ೨೫ ಸಲ ಕಣ್ಣೀರಿಟ್ಟಿತ್ತು.

೨೬-೨೭ ಈ ಎರಡು ದಿನ ಅವಳ ಬಗ್ಗೆ ಚಿಂತಿಸಿ,

೨೮ನೇ ದಿನ ಅವಳನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿ,

೨೯ರಂದು ನಾ ದೂರದ ಊರಿಗೆ ತೆರಳಿದಾಗ,

೩೦-೩೧ ಜನರಿದ್ದ ಆ ಬಸ್ಸಿನಲ್ಲಿ ಮತ್ತೊಮ್ಮೆ ನನ್ನ ಮನವ ಕದಿಯಲು ಹವಣಿಸುತ್ತಿತ್ತು,
ರೂಪಸಿಯೊಬ್ಬಳ 'ಒಂದು' ಜೋಡಿ ನಯನಗಳು..........

ಬುಧವಾರ, ಜನವರಿ 4, 2012

'ವದನ ವರ್ಣನೆ'

ನಿನ್ನೀ ಸುಂದರ ನಗುವ ನೋಡಲು ಬಲುಚೆಂದ..
               ಈ ನಣುಪಾದ ರೇಶಿಮೆ ಕೆನ್ನೆ ಇನ್ನೂ ಅಂದ..


ಹಾರಾಡುವ ಆ ನಿನ್ನ ಮುಂಗುರುಳು ಅತೀ ಸುಂದರ..
         ಈ ಸೌಂದರ್ಯ ರಾಶಿಯ ನೋಡಿ ನಾಚಿದ ಆ ಚಂದಿರ..


ಕೆಂದಾವರೆಯ ಎಸಳಿನಂತಿರುವ ಆ ಅಧರ..
           ನೋಡಿ ಮೂಡಿದವು ಆಸೆಗಳು ಥರ ಥರ..


ನಿನ್ನ ಕಂಗಳು ಯಾರಿಗಾದರೂ ಮಾಡುವುದು ಮೋಡಿ..
             ನಾ ಸ್ತಬ್ದನಾಗಿದ್ದೆ ಆ ಜೋಡಿ ತಾರೆಗಳ ನೋಡಿ..



ಶ್ವೇತವಜ್ರಗಳಂತಿರುವ ಆ ನಿನ್ನ ದಂತಪಂಕ್ತಿ..
          ಎಷ್ಟೇ ಹೊಗಳಿದರೂ ಆಗದು ಅತೀಶಯೋಕ್ತಿ..


'ವದನ ವರ್ಣನೆ'ಗೇ ಇಷ್ಟು ಪದಗಳು ಕಾಲಿಯಾಗಿರುವಾಗ,,
    ನಿನ್ನ ಪೂರ್ತಿಯಾಗಿ ವರ್ಣಿಸಲು ಎಲ್ಲಿ ಹುಡುಕಲಿ ಪದಗಳ ನಾನೀಗ..?

ಮಂಗಳವಾರ, ಜನವರಿ 3, 2012

""..ಸಪ್ತಫಲ..""

ಬೇಸಿಗೆಯಲ್ಲಿ ಬೆಳೆಯುವುದು ಮಾವು...
             ದನಗಳಿಗೆ ಬೇಕಾಗಿರುವುದು ಮೇವು...

ತಿನ್ನಲು ಬಲುರುಚಿ ಸಿಹಿಯಾದ ಈ ಹಲಸು...
           ಮೈಮೇಲೆ ಬಿದ್ದರೆ ನನಸಾಗುವುದು ನರಕದ ಕನಸು...


ಆರೋಗ್ಯಕ್ಕೆ ಉತ್ತಮ ಈ ದಾಳಿಂಬೆ...
         ಪ್ರತಿಕ್ಷಣ ಬಣ್ಣ ಬದಲಾಯಿಸುವುದು ಗೋಸುಂಬೆ...


ಮಿತಿಮೀರಿ ತಿಂದರೆ ಬೀಜವುಳ್ಳ ಸೀಬೆ..
         ಹೊಟ್ಟೆಯಲ್ಲಿ ನಾಟ್ಯವಾಡುವುದು ನೋವೆಂಬ ಗೂಬೆ..


ನೋಡಲು ಬಲು ಸುಂದರ ಈ ದ್ರಾಕ್ಷಿ...
    ನರಿ ಸುಳ್ಳೆಂದಾಗ ಯಾರೂ ಇರಲಿಲ್ಲಾ ಸಾಕ್ಷಿ...


ಎಷ್ಟೇ ಕೊಳೆತಿದ್ದರೂ ಚೆನ್ನ ಈ ರಸ ಬಾಳೆಹಣ್ಣು..
  ಬೇಗ ಹಣ್ಣಾಗಿಸಲು ಅದಕ್ಕೆ ಮಾಡುತ್ತಾರೆ ಸೂಜಿಯಿಂದ ಹುಣ್ಣು..


ಕಷ್ಟಪಟ್ಟಾದರೂ ಒಮ್ಮೆ ತಿನ್ನಬೇಕು ಜಂಬೆ...
             ಯಾವನಿಗೊತ್ತು ಸಿಕ್ಕರೂ ಸಿಗಬಹುದು ದೇವಲೋಕದ ರಂಬೆ..

ಇದು ನನ್ನ ಪ್ರಯೋಗದ ಹೊಸ ಅಲಾಪನ..
             ದಯಮಾಡಿ ಒಪ್ಪಿ ಸಪ್ತಫಲಗಳ ಈ   ಕವನ...