ಮಂಗಳವಾರ, ಅಕ್ಟೋಬರ್ 4, 2011

(ಹುಡುಗರು ಚಿತ್ರದ,
''ನೀರಲ್ಲಿ ಸಣ್ಣ ಅಲೆಯೊಂದು'' ಧಾಟಿಯಲ್ಲಿ ನನ್ನ ಕಲ್ಪನೆ)

ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನಈಗ..

ತುಸು ಪ್ರೀತಿ ಕಾಣಿಸಿ ಕಣ್ಣಲ್ಲೇ ಕೊಂದೆ ನೀ..
ಸವಿಮಾತ ಕೇಳಿಸಿ ಕಾಣದಾದೆಯಾ..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ಕುಂತಲ್ಲೇ ಕೇಳಿಸುತ್ತಿದ್ದೆ
ಈ ನನ್ನ ಎದೆಹಾಡು..
ನೀನೆಲ್ಲೋ ಹೋಗಿರುವಾಗ
ನನಗ್ಯಾಕೆ ಆ ಹಾಡು..?
ಮನಸ್ಸಿನಲ್ಲೇ ನಾನೀಗ
ಬಯಸುತಿಹೆನು ನಿನ್ನ..
ಮರೆಯಲಾರೆ ನಾನಿನ್ನ
ಒಮ್ಮೆ ಬಾರೇ ಚಿನ್ನ..

ಎದೆಯಲ್ಲಿ ಈಗ ನೂರಾರು ಲಹರಿ
ಓಡಾಡುತಿಹುದು ನೊಡು...
ಆಗೊಂದು ಕನಸು ಈಗೊಂದು ನೆನಪು
ಕಾಡುತಿಹುದು ನೋಡು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ತಲೆಯಲ್ಲಿ ಸಾವಿರಾರು
ಚಿಂತೆಗಳ ಸರಮಾಲೆ..
ಮನಸ್ಸಿದು ಆಗಿದೆ ಇಂದು
ದುಃಖದ ಉಯ್ಯಾಲೆ..

ನೀನೇ ಬಂದು ಮನಸಾರೆ
ನನ್ನ ಸಮಾಧಾನಿಸು..
ಅಷ್ಟೇ ಸಾಕು ಬಾಳಲ್ಲಿ
ಅದೇ ನನ್ನ ಕನಸು..

ನನ್ನ ಚುಚ್ಚಿ ತಿವಿಯೊ ಅ ನಿನ್ನ ಮೌನ
ಯಾಕೀಗ ನೀನೇ ಹೇಳು..
ನಾನೊಂದು ತೀರ ನೀನೊಂದು ತೀರ
ಆಗಿರಬೇಕಾ ಹೇಳು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..

2 ಕಾಮೆಂಟ್‌ಗಳು:

  1. ಅವಳ ಕೋಪ ನಿನ್ನ ಸುಡುಹುತಿಹುದೆಂತು ಗೆಳೆಯ? ರಾಜಸ್ತಾನದ ಸುಡು ಬಿಸಿಲ ರೂಪದಲ್ಲೇ? ಮನೆಯಿಂದ ದೂರಾದ ನೆಪದಲ್ಲೇ? ಅಥವಾ ಇವೆಲ್ಲದರ ಜೊತೆ ಜೊತೆಗೆ ಅದು ಮತ್ತೊಂದು ದಾವಾನಲವೇ? ಹೇಳು ನನ್ನ ಗೆಳಯ..... ತಿಳಿಸು ನಿನ್ನ ಭಾರದೆದೆಯ ನೋವಾ.......

    ಪ್ರತ್ಯುತ್ತರಅಳಿಸಿ
  2. ಹಾಗೆನೂ ಇಲ್ಲಾ ಗೆಳೆಯ...
    ನಾನೊಂದು ಬಾರಿ ಪ್ರೇಮಿಯಾಗಿ 'ಥಿಂಕಿಸಿದಾಗ' ಮೂಡಿದ ಕಲ್ಪನೆ ಬಿಟ್ಟರೆ, ಮತ್ತೇನೂ ಅಲ್ಲಾ ಗೆಳೆಯ...
    ಆದರೂ ಈ ನಿನ್ನ ಸುಂದರವಾದ ಕಾವ್ಯಾತ್ಮಕ ಪ್ರತಿಕ್ರಿಯೆಗೆ ಈ ದೀಪಧರ ನ ವಂದನೆಗಳು...
    Thnx dude..

    ಪ್ರತ್ಯುತ್ತರಅಳಿಸಿ