ಶುಕ್ರವಾರ, ನವೆಂಬರ್ 4, 2011

....''ಜಂಗಮಗಂಟೆಯಲ್ಲಿ ಭೂತ''....

ಈ ಲೇಖನವನ್ನು ಓದಿ,,
ಭಯ ಆದ್ರೆ ಹೆದರಬಹುದು, ಕಾಮಿಡಿ ಅನ್ಸಿದ್ರೆ ನಗಬಹುದು, ಏನೂ ಅನ್ನಿಸದಿದ್ರೆ ಹಾಗೆ ಸುಮ್ಮನೆ ಕೂರಬಹುದು..
ಅದ್ರೆ ಇದನ್ನು ಓದಿ, ಥೂ...! ಅಂತ
ಕ್ಯಾಕರಿಸಿ ಉಗಿಬೇಕು ಅನ್ಸಿದ್ರೆ ನಂಗೆ msg ಮಾಡಿ class ತಗೊಳ್ಳಿ.. Bt publicಅಲ್ಲಿ ಮಾನ ಕಳೆಯ ಬೇಡಿ...!! Please

ಅದು...
''ಹೊಟ್ಟೆ ಬಿರಿಯುವಷ್ಟು ತಿಂದು ನೆಟ್ಟಗೆ ಮಲಗಿಕೊಂಡಿರುವ ಹೆಬ್ಬಾವಿನಂತೆ'' ಕಾಣುವ 'ಟಾರ್ರೋಡು'..
ಅಲ್ಲಿ ಒಬ್ಬ ಯುವಕ
ನೆಡೆದುಕೊಂಡು ಹೋಗುತ್ತಿದ್ದಾನೆ..
ಸಮಯ ಸುಮಾರು ಮಧ್ಯರಾತ್ರಿ 12:00-12:30 ಆಗಿರಬಹುದು.
ಹೊತ್ತಲ್ಲದ ಹೊತ್ತಾಗಿದ್ದರಿಂದ, ಆದಷ್ಟು ಬೇಗ ಮನೆ ಸೇರಲು ಎದುರುಸಿರು ಬಿಡುತ್ತಾ ಓಡುನಡಿಗೆಯಲ್ಲಿ ಹೋಗುತ್ತಿದ್ದಾನೆ..
ಅಷ್ಟರಲ್ಲಿ ಬಳೆ ಹಾಗು ಗೆಜ್ಜೆಗಳ ಸದ್ದು ಕೇಳಿಸಿತು..
ಆ ತಂಪಾದ ರಾತ್ರಿಯಲ್ಲೂ ಭಯದಿಂದ ಯುವಕನ ಮುಖದಲ್ಲಿ ಬೆವರು ಹನಿ ಕಾಣಿಸತೊಡಗಿತು...

ಯುವಕ ತನ್ನ ನಡಿಗೆಯಲ್ಲಿ ಮತ್ತಷ್ಟು ವೇಗ ಹೆಚ್ಚಿಸಿದ,, ಆಗ ಆ ಸದ್ದು ಇನ್ನಷ್ಟು ಸನಿಹದಲ್ಲಿ ಕೇಳಿಸತೊಡಗಿತು. ಜೊತೆಗೆ ದಾರಿದೀಪ(road light) ದ ಬೆಳಕಿನಲ್ಲಿ ಮಹಿಳೆಯ ನೆರಳೊಂದು ಕಂಡು, ಆ ಯುವಕ ಮತ್ತಷ್ಟು ಹೆದರಿ ಅಲ್ಲೆ ನಿಂತುಬಿಟ್ಟ,
ಆಗ ಆ ಮಹಿಳೆ ಇವನ ಭುಜದ ಮೇಲೆ ಕೈ ಇಟ್ಟು,, 'ಚಂದನ್...' ಅಂತ ಪಿಸುಗುಟ್ಟಳು ಈ ಕೈ ಹಾಗು ಪಿಸುಮಾತು ಪರಿಚಿತವಾಗಿತ್ತು. so ಆ ಯುವಕ ನಿಧಾನವಾಗಿ ಹಿಂದಿರುಗಿ ನೋಡಿದಾಗ, ಅವನ ಪ್ರೇಯಸಿ ನಿಂತಿದ್ದಳು. ತಕ್ಷಣ ಯುವಕನಲ್ಲಿದ್ದ ಭಯವೆಲ್ಲಾ ಮಾಯವಾಗಿ ತನ್ನ ಪ್ರೇಯಸಿಯನ್ನು ಬಿಗಿಯಾಗಿ ತಬ್ಬಿಕೊಂಡ..
ಅಷ್ಟೇ...! ''ಜಂಕಜಿಕ ಜಂಕಜಿಕ'' ಅನ್ನೊ ಕರ್ಕಶವಾದ ಮ್ಯೂಸಿಕ್ ಜೊತೆಗೆ ಡ್ಯುಯೆಟ್ ಶುರುವಾಯಿತು....!!!

ಕರ್ಮದ ಕಾಂಡ...!:@

ಈ ಫಿಲ್ಮ್ ಮಾಡೊ ನಿರ್ದೆಶಕರಿಗೆ, ಯಾವಾಗ ಹಾಡನ್ನು ಸೇರ್ಸಬೇಕು ಅಂತ ಟೈಂಸೆನ್ಸ್ ಇಲ್ವಾ,,? ಅಥವಾ ಈ ಹಾಡು ತೋರಿಸೋಕೆ ಈ ಥರ ಬಿಲ್ಡಪ್ ಕೊಟ್ರಾ,,? ಅಂತ ತಿಳಿಯದೇ ನನ್ನcell pone ಅಲ್ಲಿ
'youtube browser' closeಮಾಡಿ ತಡರಾತ್ರಿ ಆದುದರಿಂದ ಮಲ್ಕೊಂಡು ನಿದ್ದೆಗೆ ಶರಣಾದೆ...
(Oh sorry ನಾನು ಇಷ್ಟೊತ್ತು ಹೇಳಿದ್ದು
'youtube'ಅಲ್ಲಿ ನೋಡ್ತಿದ್ದ ಒಂದು ಅತ್ಯದ್ಭುತವಾದ ಕಿತ್ತೋಗಿರೋ ಡಬ್ಬಾ movie ಬಗ್ಗೆ..!!)

''ಟಿಟಿಟಿಂ ಟಿಟಿಂ ಟಿಟಿಟಿಂ''...
ಅನ್ನೋ ಸದ್ದಿನೊಂದಿಗೆ ಅಲರಾಂ ಬಾಯಿಬಡ್ಕೊಳ್ಳೊ ಮುಂಚೆನೇ ನನ್ನ celpone ಗೆ ಒಂದುmsg ಬಂತು.
ಆ ಶಬ್ಧಕ್ಕೆ ಎಚ್ಚರವಾಗಿ ನಿದ್ದೆಗಣ್ಣಲ್ಲೇ ಆ msg open ಮಾಡಿದಾಗ ಯಾವ್ದೋ unknown number ಇಂದ,
''hy iam mobile'' ಅಂತ msg ಬಂದಿತ್ತು..
ನಾನು ಜಾಸ್ತಿ ತಲೆ ಕೆಡೆಸಿಕೊಳ್ಳದೇ ''hellow iam celpone'' ಅಂತ replayಮಾಡಿ ಮತ್ತೆ ಮಲ್ಕೊಂಡೆ..

ಸ್ವಲ್ಪಹೊತ್ತಿನಲ್ಲೇ ಅಲರಾಂ ನ ಸದ್ದಿಗೆ ಪುನಃ ಎಚ್ಚರವಾಗಿ, ಹಾಸಿಗೆಯಿಂದ ಎದ್ದು ನನ್ನ ಬೆಳಗ್ಗಿನ 'ಪಾಪಕರ್ಮ'ಗಳನ್ನು ಮುಗಿಸಿಕೊಂಡು ಮತ್ತೆ room ಗೆ ಬಂದಾಗ ಮತ್ತದೇ number ಇಂದ ಅದೇ msg ಬಂದಿತ್ತು..

ನಾನು ಈ ಬಾರಿ ಆ msg ಗೆ 'so what' ಅಂತreply ಮಾಡ್ದೆ..

ಹಾಗೆ celpone ಪಕ್ಕಕ್ಕಿಟ್ಟು, ಬಾಗಿಲಲ್ಲಿ ಬಿದ್ದಿದ್ದ ಪ್ಯಾಕೆಟ್ ಹಾಲನ್ನು ತಂದು coffie ಮಾಡಿ ಕುಡ್ಕೊಂಡು pactory ಗೆ ಹೊರಟೆ.
ಆದರೆ pactory ಗೆ ಹೋದರೂ ನನ್ನ ತಲೆಯಲ್ಲಿ ಆ msg ಕಳುಹಿಸಿದ unknwon number ಯಾರದ್ದಿರಬಹುದು ಎಂಬ ಕುತುಹಲದ ಹುಳ ಕೆರೆಯುತ್ತಾ ಇತ್ತು..!

Computer ಮುಂದೆ ಕುಳಿತು ಏನನ್ನೋ ನೋಡುತ್ತಿರುವಾಗ ಮತ್ತೆ ಅದೇ numberಇಂದ ''i gonna eat u'' ಅಂತ msgಬಂತು.! ಅದನ್ನ ಓದಿ ನಾನು ಒಂದ್ಸಲ shock ಆದ್ರೂ ''ok best of luck'' ಅಂತ replay ಮಾಡ್ದೆ...

ನಂದೊಂದು ಕೆಟ್ಟ ಅಭ್ಯಾಸ,, ಯಾವ್ದಾದ್ರೂ ಹೊಸ number ಇಂದ msg ಬಂದ್ರೆ, ಅವ್ರ್ಯಾರು ಏನೂ ಅಂತ ತಲೆ ಕೆಡಿಸಿಕೊಳ್ಳದೇ ಅವರು ಅವರಾಗಿಯೇ ತಮ್ಮಹೆಸರನ್ನು ಹೇಳಬೇಕೆ ಹೊರತು ನಾನಾಗಿಯೇ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ..
(ಇಲ್ಲೂ ಹಾಗೆ ಮಾಡಲು ಹೋಗಿ ಏನೇನೋ ಆಗೋಯ್ತು...)
ಹಾಗೆ ಮಧ್ಯಾಹ್ನ canteen ಅಲ್ಲಿ ಊಟ ಮಾಡುತ್ತಿರುವಾಗ ಅದೇ number ಇಂದ call ಬಂತು.
ತಕ್ಷಣ ನಾನು ಆ call atend ಮಾಡಿದಾಗ ಆ ಕಡೆಯಿಂದ ಒಬ್ಬ ವ್ಯಕ್ತಿ ತಣ್ಣಗೆ 'ಸ್ಮೈಲುತ್ತಾ',,
''ಏನ್ ಬಾಸ್ ಊಟ ಮಾಡ್ತಿದ್ದಿರಾ..? ಮಾಡಿ ಮಾಡಿ ಮೇ ಭೀ ಯಹೀ ಚಾಹತಾ ಹೂ ಕೀ,
'ಒರುವೇಳೆ ನೀಂಗಳ್' 'ಚಾಲ ಚಾಲ'
'ತಿಂದುಂಡು ಮೈ ಬೆಳೆಸಿಕೊಂಡ್ರೆ,' 'ತುಮಾಲಾ' 'ಕಾನೆ ಮೆ ಬಡಾ ಮಝಾ ಅಯೆಗಾ,' coz i gonna eat you''ಅಂತ ಕನ್ನಡ,ಹಿಂದಿ ಇಂಗ್ಲಿಷ್,ಮರಾಠಿ,ತೆಲುಗು,ತಮಿಳ್ ಈ ಎಲ್ಲಾ ಭಾಷೆನೂ ಸೇರಿಸಿ ವಿಚಿತ್ರವಾಗಿ ಮಾತನಾಡಿ ಮತ್ತೆ ನಗತೊಡಗಿದ.
ನಾನು ಆ ವ್ಯಕ್ತಿ ಹೇಳಿದ್ದನ್ನ ಕೇಳಿ ತುಂಬಾ nervess ಆದೆ. ಆದ್ರೂ ಅದ್ನ ತೋರ್ಪಡಿಸದೇ ಕೊಪದಿಂದ '' who the hell r u man'' ಅಂತ ಕೂಗಿದೆ ಅದಕ್ಕೆ ಆ ಕಡೆಯಿಂದ ಮೆಲುದನಿಯಲ್ಲಿ '' iam mobile'' ಅಂತ answer ಬಂದು call cut ಆಯ್ತು..
ಅಷ್ಟರಲ್ಲಿ ನನ್ನ ಸದ್ಯೋಗಿಗಳೆಲ್ಲಾ ನನ್ನನ್ನೇ ನೋಡುತ್ತಿದ್ದರು, ನಾನು ಅವರಿಗೆಲ್ಲಾ sorry ಕೇಳಿ, bossಹತ್ರ reqvest ಮಾಡಿ half leave ತಗೊಂಡು ಮನೆಗೆ ವಾಪಾಸ್ಸಾದೆ...

Pactory ಇಂದ ಬೇಗ ಬಂದರೂ ಮನೆಗೆ,
i mean roomಗೆ ಹೋಗಲು ಭಯವಾಗಿ ನನ್ನ ಸ್ನೇಹಿತನೊಬ್ಬನಿಗೆ call ಮಾಡಿ
'ಕಾಮತ್ ಹೋಟೆಲ್' ಗೆ ಬರ ಹೇಳಿ, ಅವನ್ಹತ್ರ ಬೆಳಿಗ್ಗೆಯಿಂದ ಆದ ವಿಷಯವನ್ನೆಲ್ಲಾ ಹೇಳಿದೆ..
ಅವನು ಸಲೀಸಾಗಿ police complent ಕೊಡು ಅಂದ.
ಆದರೆ ನಂಗೆ ಈ ಪೋಲಿಸು ಕೋರ್ಟು ಅಂದ್ರೆ ತುಂಬಾ ಭಯ, ಅದ್ಕೆ ಆ idea ಕೈಬಿಟ್ಟು 'ಬೇರೇ ಏನಾದ್ರೂ ಇದ್ರೆ ಹೇಳು' ಅಂದೆ. ಅದಕ್ಕವನು ತಕ್ಷಣ number change ಮಾಡು ಅಂದ. ಈ idea ನಂಗೂ ಸರಿಯೆನಿಸಿ ಅಲ್ಲಿಂದ ಹೊರಟಾಗ ಮತ್ತದೇ number ಇಂದ msg ಬಂತು.
Bt ಈ ಸಲ ಆ msg ಓದಿ ನನ್ನ ಜೊತೆಗೆ ನನ್ನ friend ಕೂಡ shock ಆದ.....

ಆ ಅಲ್ಲಿ ಈ ಥರ ಬರೆದಿತ್ತು..
Number change ಮಾಡ್ತಿರಾ..? ಮಾಡಿ ಮಾಡಿ, ಎಷ್ಟ್ number change ಮಾಡ್ತೀರಾ.? 10, 20, 50,...
100 number changeಮಾಡಿದ್ರೂ,
'ಮೇ ಆಫ್ ಕೊ ನಹೀ' 'ವಿಡಮಾಟೆ' 'ಚಂಪೈಸ್ತಾನು' 'i w'll eat you' 'ನಿಮ್ಮ ದೇಹವನ್ನು ಕಚ್ಚಿ ಕಚ್ಚಿ ತಿಂದು' 'after than i gonna kill you''..
ಆ msg ಓದಿ ಭಯದಿಂದ ಹೊಟೆಲ್ ನ
A.C room ಅಲ್ಲೂ ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿತ್ತು...

To be continued......!

1 ಕಾಮೆಂಟ್‌: