ಮನಸ್ಸಿಲ್ಲದ ಮನಸ್ಸಿನಿಂದ ಕನಸ ಕಾಣುವುದ್ಯಾಕೋ..?
ನನಸಾಗದ ಕನಸ ಕಂಡು ಮನಸ ನೋಯಿಸುವುದ್ಯಾಕೋ..?
ನಯ ವಿನಯ ತೋರುತಾ ನಯವಂಚನೆ ಮಾಡುವುದ್ಯಾಕೋ.?
ನಯನದ ಕಣಿವೆಯಂಚಿನಲ್ಲಿ ಜಲಧಾರೆ ಹರಿಸುವುದ್ಯಾಕೋ.?
ಮನ-ಮನೆ ಮುರಿಯುವ ಮಾತನಾಡುವುದ್ಯಾಕೋ.?
ತಪ್ಪಾಗಿದ್ದರೂ ತಪ್ಪನ್ನು ಸವಿಮಾತಿಂದ ಮರೆ ಮಾಚುವುದ್ಯಾಕೋ.?
ಹೇಳದೇ ಕೇಳದೇ ಎದೆಯಲಿ ಪ್ರೀತಿ ಮೂಡುವುದ್ಯಾಕೋ.?
ಕಾರಣ ನೀಡದೇ ಮೋಸವ ಮಾಡಿ ಮರೆಯಾಗುವುದ್ಯಾಕೋ.?
ಮಡದಿಯಿಲ್ಲದ ಮನೆ ಮಸಣವಾಗುವುದ್ಯಾಕೋ.?
ಮಸಣದಲ್ಲೂ ಕೂಡ ಈ ಮನ ಅವಳ ನೆನೆಯುವುದ್ಯಾಕೋ.?
ಮನ ಮರುಭೂಮಿಯಾದರೂ ಪ್ರೇಮಕುಸುಮ ಚಿಗುರುವುದ್ಯಾಕೋ.?
ಪದೇ ಪದೇ ಅವಳ ನೆನಪ ಸಿಂಚನ ಚಿಮ್ಮುವುದ್ಯಾಕೋ.?
ಇಷ್ಟೋಂದು ಪ್ರಶ್ನೆ ಈ ದಿನ ನನ್ನಲ್ಲಿ ಮೂಡಿದ್ದು ಯಾಕೋ.?
ಕವನದ ಪಯಣಕೆ ಅಪರಿಚಿತಳೊಬ್ಬಳು ಸ್ಪೂರ್ತಿಯಾಗುವುದ್ಯಾಕೋ..?
ಪರವಾಗಿಲ್ಲ ರೀ ಒಂದೇ ಹುಡುಗಿ ಇಷ್ಟೊಂದು ಪ್ರಶ್ನೆ ಮೂಡಿಸಿದ್ದಾಳೆ ಅಂದರೆ ಮುಂದೆ ಏನೇನೋ ನಡೀ ಬಹುದು !!!
ಪ್ರತ್ಯುತ್ತರಅಳಿಸಿಎಲ್ಲಾ ಸಾಲುಗಳು ಚೆನ್ನಾಗಿವೆ ಪ್ರದೀಪ್ !!!
ಸಾರೀ ಪ್ರದೀಪ್ .. ಪ್ರವೀಣ್ ಅಂದು ನಿಮಗೆ ನಾಮಕರಣ ಮಾಡಿದೆ
ಅಳಿಸಿಅರ್ಥವಾಗಲಿಲ್ಲ ಸಾರ್...!!
ಪ್ರತ್ಯುತ್ತರಅಳಿಸಿ