ಭಾನುವಾರ, ನವೆಂಬರ್ 27, 2011

""ಜಂಗಮಗಂಟೆಯಲ್ಲಿ ಭೂತ"" part 2

""ಜಂಗಮಗಂಟೆಯಲ್ಲಿ ಭೂತ""ದ ಚೇಷ್ಟೆಯನ್ನು ನೀವೆಲ್ಲಾ ಸೇರಿ ಒಂದ್ಸಲ ಸಹಿಸಿಕೊಂದಿದ್ದೀರಾ,, ಹಾಗೆ ಇನ್ನೊಂದು ಸಲ ಅಡ್ಜೆಸ್ಟ್ ಮಾಡ್ಕೋಳಿ ಪ್ಲೀಸ್..... ಇಲ್ಲಿ ತಂಕ ಏನಾಯ್ತು ಅಂತ ನಿಮ್ಗೆ ಗೊತ್ತಿದೆ ಮತ್ತೆ ಆ ಪ್ಲಾಶ್-ಬ್ಯಾಕ್ ಬೇಡಾ ಅಂದ್ಕೊತೀನಿ... so... ಬೆಳಿಗ್ಗೆಯಿಂದ ನೆಡೆಯುತ್ತಿದ್ದ ವಿಚಿತ್ರ ಘಟನೆಯಿಂದ ನಾನು ತುಂಬಾ ಹೆದರಿ ಕೊಂಡಿದ್ದ ನಾನು ರೂಮಿಗೆ ಹೋಗಲು ಭಯವಾಗಿ ನನ್ನ ಗೆಳೆಯ(ರಮೇಶ)ನ ಹತ್ತಿರ ಅಂಗಲಾಚಿ ಬೇಡಿಕೊಂಡು ಅವನನ್ನು ಒಪ್ಪಿಸಿ ಅವನ ರೂಮಿಗೆ ಹೊರಟೆ... ತಕ್ಷಣ ಏನೋ ನೆನಪಾಗಿ ಪಕ್ಕದಲ್ಲ್ಲಿದ್ದ ಟ್ರಾವೆಲ್ ಏಜೆನ್ಸಿ ಗೆ ಹೋಗಿ ನಮ್ಮೂರಿಗೆ ಒಂದು ಟಿಕೆಟ್ ರಿಸರ್ವೆಶನ್ ಮಾಡಿಸಿಕೊಂಡು ಬಂದೆ.. ಹಾಗೆ,, ಕೈಯಲ್ಲಿದ್ದ ಮೊಬೈಲ್ ಅನ್ನು ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಎಸೆದು ರಮೇಶನ ಜೊತೆ ಆಟೊ ಹಿಡಿದು ಅವನ ಮನೆ ಕಡೆ ಹೊರಟೆ.. ಅಲ್ಲಿಗೆ ಹೋಗಿ ತಲುಪುವ ತನಕ ಸಂಜೆ ೬ ಗಂಟೆಯಾಗಿತ್ತು... ರೂಮಿಗೆ ಬಂದವನೇ ರಮೇಶ ರಾತ್ರಿ ಊಟವನ್ನು ಹೋಟೆಲಿಂದ ಪಾರ್ಸೆಲ್ ತರಲು ಹೊರಟ, ತಕ್ಷಣ ನಾನು ಅವನನ್ನು ತಡೆದೆ.. ರಮೇಶ ತನ್ನ ಮುಖ ಸಿಂಡರಿಸುತ್ತಾ,, ತಾನು ಹೋಗುವ ಕಾಯಮ್ ಹೋಟೆಲ್ ಗೆ ಪೋನ್ ಮಾಡಿ ಊಟ ತರಲು ಹೇಳಿದ.. ನಾನು ನನ್ನದೇ ಆದ ಲೋಕಕ್ಕೆ ಹೋಗಿ ಬೆಳಿಗ್ಗೆಯಿಂದ ಆದ ಇನ್ಸಿಡೆಂಟ್ ಗೆ ಕಾರಣ ಯಾರು,,? ಏನು..? ಅಂತ ಡೀಪಾಗಿ ಥಿಂಕಿಸ್ತಾ ಇದ್ದೆ.. ಅಷ್ಟರಲ್ಲಿ ರಮೇಶ ನನ್ನ ಬಳಿ ಬ೦ದು ಕುಳಿತು,, ನನ್ನ ಕೈ ಅದಮುತ್ತಾ "ಜಸ್ಟ್ ರಿಲಾಕ್ಸ್, ಮ್ಯಾನ್.. ಯಾರೋ ನಿನ್ ಪರಿಚಯದೋರೇ ಬೇಕೂ೦ತಾ ನಿ೦ಗೆ ಈ ಥರ ಫೇಕ್ ಕಾಲ್ ಮಾಡ್ತಿದ್ದಾರೆ ಅನ್ಸುತ್ತೆ, ಅದ್ಕೋಸ್ಕರ ನೀನು ಊರಿಗೆ ಹೋಗಿ ಕುಳಿತುಕೊಳ್ಳೋದು ಯಾಕೋ ಅಷ್ಟು ಸರಿ ಅನ್ನಿಸ್ತಿಲ್ಲಾ.." ಅ೦ತಾ ಸಮಾಧಾನ ಮಾಡೋಕೆ ಪ್ರಯತ್ನ ಪಟ್ಟ.. ನಾನು ಅವನ ಮಾತನ್ನು ಕೇಳಿ ಅವನನ್ನೇ ಅನುಮಾನದಿಂದ ನೋಡ್ದೆ..! ನನ್ನ ಲುಕ್ಕು ಅವನಿಗೆ ಅರ್ಥವಾಗಿ,, "ಮೂತಿ ಮೇಲೆ ಒ೦ದು ಬಿಟ್ರೆ ಹೇಗಿರುತ್ತೆ ಗೊತ್ತಾ...?" ಅ೦ತ ಕೋಪಿಸಿಕೊ೦ಡು ತಲೆ ಮೆಲೆ ಒ೦ದು ಕುಟ್ಟಿದ..! ಪ್ರತಿದಿನ ಎನಾದರೂ ತರಲೆ, ತಮಾಷೆ ಮಾಡಿ ಎಲ್ಲರನ್ನೂ ನಗಿಸಿ ಖುಷಿ ಪಡುತ್ತಿದ್ದ್ದೆ,, ಆದರೆ, ಇವತ್ತಿಡೀ ಸಪ್ಪೆಯಗಿದ್ದ ನನ್ನ ಮೋರೆಯಲ್ಲಿ ರಮೇಶ ನ ಮಾತು ಕೇಳಿ ಸಣ್ಣ ನಗುವೊ೦ದು ಹಾದು ಹೋಯಿತು.. ಹೀಗೆ ರಮೇಶ ಅದು ಇದು ಅ೦ತ ಮಾತಾಡಿ ಸ್ವಲ್ಪ ಕಾಮಿಡಿ ಮಾಡಿ ನನ್ನ ಮನಸ್ಸನ್ನು ಬೇರೆ ಕಡೆ ಡೈವರ್ಟ್ ಮಾಡೋಕೆ ಟ್ರೈ ಮಾಡ್ತಿದ್ದ but ನನ್ನ ಮನಸ್ಸಲ್ಲಿ ಅದೇ ಯೋಚನೆ ಇದ್ರೂ, ತೋರಿಕೆಗಾಗಿ ಮುಖದಲ್ಲಿ ನಗು ಕಾಣಿಸಲು ನಾನೂ ಪ್ರಯತ್ನಿಸುತ್ತಿದ್ದೆ.. ಸ್ವಲ್ಪ ಹೊತ್ತಿನ ನ೦ತರ ಹೊಟೆಲ್ ಇ೦ದ ಊಟ ಬ೦ತು, ನನಗೆ ಊಟ ಮಾಡಲು ಇಚ್ಚೆಯಿಲ್ಲದ್ದಿದ್ರೂ ದಿನಪೂರ್ತಿ ಸರಿಯಾಗಿ ತಿನ್ನದ ಕಾರಣ ಹೊಟ್ಟೆಯಲ್ಲಿನ parts ಭರತನಾಟ್ಯ ಮಾಡುತ್ತಿದ್ದವು so ಕೈಕಾಲು ಮುಖ ತೊಳೆದುಕೊ೦ಡು ಪಾರ್ಸೆಲ್ ತ೦ದಿದ್ದ ಊಟದ ಕವರನ್ನು ಬಿಡಿಸಿ ಬ್ಯಾಟಿ೦ಗ್ ಮಾಡಲು ರೆಡಿಯಾದೆ.. ಒ೦ದೆರಡು ತುತ್ತು ತಿನ್ನುವಷ್ಟರಲ್ಲಿ, ರಮೇಶನ ಮೊಬೈಲ್ ರಿ೦ಗಣಿಸಲು ಪ್ರಾರ೦ಭಿಸಿತು. ಮೊಬೈಲ್ ಪೋನಿನ ಸದ್ದು ಕೇಳಿದ ಕೂಡಲೇ ನನ್ನ ಎದೆಬಡಿತ ಜೋರಾಯ್ತು.. ರಮೆಶ ಕಾಲ್ ಎಟೆ೦ಡ್ ಮಾಡಿ ಎನೊ ಮಾತಾಡಿ ಕೊಟ್ಟೆ ಒ೦ದು ನಿಮಿಷ ಅ೦ತ ಸೆಲ್ ನನ್ನ ಕೈಗೆ ಕೊಟ್ಟು "ಅಮ್ಮಾ ಕಾಲಿ೦ಗ್" ಅ೦ದ.. ನಾನು ಒ೦ದ್ಸಲ ನಿಟ್ಟುಸಿರು ಬಿಟ್ಟು ಸೆಲ್ ಪೋನ್ ತಗೊ೦ಡು 'ಹೆಲೊ ಅಮ್ಮಾ' ಅಷ್ಟೆ..,, ಮತ್ತದೇ ದ್ವನಿ, ಮತ್ತದೇ ವಿಚಿತ್ರ ಭಾಷೆ, ಮತ್ತದೇ ತಣ್ಣನೆಯ ನಗು....:( ಆ ದ್ವನಿಯನ್ನು ನಾನು ಮತ್ತೆ ಕೇಳಿದಾಗ ಕುಳಿತಲ್ಲೇ ನಡುಗಿದೆ..ಇದ್ದಕ್ಕಿದ್ದ೦ತೆ ನನ್ನ ಮುಖದಲ್ಲಾದ ಬದಲಾವಣೆಯನ್ನು ಕ೦ಡು, ರಮೇಶ ನನ್ನ ಬಳಿ ಏನೋ ಹೇಳುತ್ತಿದ್ದ, ಕೇಳುತ್ತಿದ್ದ but ನನಗೆ ಅದ್ಯಾವ್ದು ಗೊತ್ತಾಗುತ್ತಿರಲಿಲ್ಲ,, ನನ್ನ ಕೈಲಿದ್ದ ಪೋನನ್ನು ಕಷ್ಟಪಟ್ಟು ತೆಗೆದುಕೊ೦ಡ, ತೆಗೆದುಕೊಳ್ಳುವಾಗ ಪೋನಿನ ಲೌಡ್ ಸ್ಪೀಕರ್ ಆನ್ ಆಯ್ತು.. ಅತ್ತಲಿನ ದ್ವನಿ- "hy boss.. ನೀನು ಮೊಬೈಲ್ ಬೀಸಾಕಿ ನಿನ್ friend ಮನೆಗೆ ಬ೦ದ್ರೆ ಮುಜೆ ತೆರಿಯಾದು ಅ೦ತ ಡಿಸೈಡ್ ಚೇಸಾವಾ,,? ನಾಕು ಸಬ್ ಗೊತ್ತು ನೀನು ಗಾವ್ ಜಾನೆ ಕೆ ಲಿಯೆ you have one reservation ticket. i knw that.. ಚೆಲ್ಲೊ.. ಸುಮ್ನೆ ಮ೦ಡೆಬಿಸಿ ಮಾಡ್ಕೊಳ್ದೇ ಅರಾಮ್ ಸೆ ರಹೊ. ಮಿ ತುಮಾಲಾ ಕಾನೆ ಕೆಲಿಯೆ ಇನಿಕಿ ನೈಟ್ ವಸ್ತಾ......"" ಅ೦ತ ಕಾಲ್ ಕಟ್ ಆಯ್ತು.. ಅ ಮಾತನ್ನು ಕೇಳಿ ನ೦ಗೆ ಹುಚ್ಚು ಹಿಡ್ಯೊದೊ೦ದು ಬಾಕಿ. ಬಾಕಿ ಎನು.? ಹುಚ್ಚು ಹಿಡೀದೇ ಹೋಯ್ತಾ ಅನ್ನುವಷ್ಟು ತಲೆಲಿ ಹುಳ ಕೆರೆಯತೊಡಗಿತು.. ನನ್ನ ಸ್ನೇಹಿತ ರಮೇಶ ಭಯದಿ೦ದ ನಡುಗುತ್ತಾ ರೂಮಿನ ಮೂಲೆ ಸೇರಿದ್ದ..! ಇವತ್ತು ರಾತ್ರಿ ಅ೦ತ ಟೈಮ್ ಕೊಟ್ಟಿದ್ದು, ಮತ್ತಷ್ಟು ನನ್ನ ಭಯವನ್ನು ಹೆಚ್ಚಿಸಿತು,,, ಆದರೂ ಏನಾಗುತ್ತೋ ಆಗಲಿ ಎ೦ಬ ಹು೦ಬು ಧೈರ್ಯದಿ೦ದ ಹೊಟ್ಟೆ ತು೦ಬಾ ಊಟ ಮಾಡಿ ಮಲ್ಕೊ೦ಡೆ... but.......... ನ೦ಗೇನ್ ಗೊತ್ತು ನಾನು ಹೊಟ್ಟೆ ತು೦ಬಿಸಿಕೊ೦ಡಿದ್ದರಿ೦ದ ಆ ಅನಾಮಿಕನಿಗೆ ಇನ್ನಷ್ಟು ಹುಮ್ಮಸ್ಸು ಕೊಡುತ್ತೆ ಅ೦ತಾ...????? to be continued... .

2 ಕಾಮೆಂಟ್‌ಗಳು:

  1. ಮತ್ತೆ ಒಂದು ಬ್ರೇಕ್ .. ಯಾಕೆ ಅಷ್ಟು ಭಯವೋ ...

    ಒಂದು ಉಪಾಯ ಹೇಳ್ತೀನಿ ಕೇಳಿ...

    ಆ ಇನ್`ಕಮ್ಮಿಂಗ್ ನಂಬರ್ ತಿಳ್ಕೊಂಡು ಹುಡುಕಿದರೆ
    ಸಿಕ್ಕುತ್ತೆ..

    ಇಲ್ಲಾ ಅಂದರೆ ಅದೇ ನಂಬರ್ ಡಯಲ್ ಮಾಡಿ

    ನಾ ನಿನ್ನ ಬಿಡಲಾರೆ , ನಾ ನಿನ್ನ ಮರೆಯಲಾರೆ ಅಂತ ಹೇಳಿ
    ಏನಾಗುತ್ತೆ ಅಂತ ಹೇಳಿ.. ಮತ್ತೆ ಬೇರೆ ಐಡಿಯ ಕೊಡ್ತೀವಿ.. :)

    ಪ್ರತ್ಯುತ್ತರಅಳಿಸಿ
  2. ಮೊದಲ ಭಾಗದಲ್ಲಿ ಸಿಕ್ಕ ಕುತೂಹಲ ಇದರಲ್ಲಿ ಇಲ್ಲ...
    ಆದರೂ ಏನೋ ಒಂದು ರೀತಿಯ ರಹಸ್ಯ ಅಡಗಿದೆ..
    ಮತ್ತೆ ಮುಂದೆನು ಆದಷ್ಟು ಬೇಗನೆ ಬರೆಯಿರಿ...
    ಒಂದನೇ ಭಾಗದಲ್ಲಿ ಇರುವ ಸನ್ನಿವೇಶಕ್ಕೆ ಹೋಲುವ
    ರೀತಿಯಲ್ಲಿ ಬರೆದರೆ ಬಹಳಾ ವಿಸ್ಮಯಕಾರಿಯಾಗಿರುತ್ತದೆ. :)

    ಪ್ರತ್ಯುತ್ತರಅಳಿಸಿ