ಭಾನುವಾರ, ಡಿಸೆಂಬರ್ 4, 2011

""ನನ್ನ ಕವನ""

ಹೀಗೇಕೆ ಹೀಗೇಕೆ ನಾನಾದೆ..
            ಕಾರಣವ ಹೇಳೆ ಓ ಒಲವೇ. 
ನಿನ್ನ ಕಂಡಾಗ ನನ್ನಿಂದ ನಾನೇ ಮಾಯವಾದೆ.. (೧)


ಮೌನವಾಗಿದ್ದ ನನ್ನ ಕನಸಿಗೆ ನೀ ಮಾತು ಕಲಿಸಿದೆ..
                    ಛಿದ್ರವಾಗಿದ್ದ ನನ್ನ ಮನಸಲಿ ನೀ ಚಿತ್ರ ಬಿಡಿಸಿದೆ..
ತಮ ತುಂಬಿದ್ದ ನನ್ನ ಬದುಕಲಿ ನೀ ದೀವಟಿಗೆಯಾದೆ..(೨)


ಮಾಯಾ ಜಿಂಕೆಯಂತೆ ಬಂದು ನನ್ನ ಚಂಚಲನಾಗಿಸಿದೆ..
                   ಸುಡು ಬಿಸಿಲಲ್ಲಿ ತಂಗಾಳಿಯಾಗಿ ನನ್ನ ಮನದಲಿ ವಾಸವಾದೆ..
ಹೇಗೋ ಇದ್ದವನ ಹೀಗೆ ಬದಲಿಸಿ ನಡುನೀರಲ್ಲಿ ಕೈಬಿಟ್ಟು ಹೋದೆ..(೩)


ಹೀಗೇಕೆ ಮಾಡಿದೆಯೆಂದು ನಾ ಕೇಳಲಾರೆ..
                             ಈ ನಿನ್ನ ನೆನಪಲಿ ನಾ ಕೊರಗುತಾ ಕೂರಲಾರೆ..
ಆದರೆ ಈ ಕಲ್ಲನ್ನು ಶಿಲೆಯಾಗಿಸಿದ್ದನ್ನು ಎಂದೂ ಮರೆಯಲಾರೆ.. (೪)


ಈ ಜೀವನದ ತಿರುವುಗಳೇ ಸರಿಯಿಲ್ಲ..
            ಇನ್ನೊಬ್ಬಳಿಗೆ ನನ್ನ ಮನ ಸೋತು ಹೋಯ್ತಲ್ಲಾ..
ಅವಳೇ ನನ್ನ ಮುದ್ದಿನ ಮಡದಿ ಮೃದುಲಾ..! (೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ