ಶನಿವಾರ, ಡಿಸೆಂಬರ್ 10, 2011

....ಓಂ ಶಾಂತಿ ಓಂ....

ನೀನೇ ನನ್ನ ಪ್ರೀತಿ ನೀನೇ ರೀತಿ...
  ನೀನೇ ನನ್ನ ಶಾಂತಿ ನೀನೇ ನನ್ನ ಆಸ್ತಿ...
ನೀನೇ ಎಂದೂ ನನ್ನ ಮನದೊಡತಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
      ನಿನ್ನಿಂದ ಮನಸಿಗೆ ಹೊಸ ಕಾಂತಿ... (೧)

ಕಾಡಬೇಡ ನೀನು ಸ್ವಪ್ನದಲಿ ಬಂದು...
          ನಗಬೇಡ ನೀನು ಎದುರಲಿ ನಿಂದು...
ಸೋತು ಹೋಗುವೆ ನಾನು ಓ ಮನದರಸಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನೀನಿಲ್ಲದೇ ಎಲ್ಲಿ ನನ್ನ ಸುಖ ಶಾಂತಿ..? (೨)

ನಾನೀಗ ಅರಿತೆ ಈ ಪ್ರೀತಿ ತುಂಬಾ ಮೋಸ...
            ಪ್ರೀತಿ ಹೆಸರ ಹೇಳಿ ಆಡುತಾರೆ ಸರಸ...
ಇಲ್ಲೂ ಹೀಗೇನಾ..? ಅಥವಾ ಸಹಜ ನಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
   ಈ ಪ್ರೀತಿ ನಿಮಗ್ಯಕೆ ಮಹಾರಾಯ್ತಿ..? (೩)

ನೀನೇ ನನ್ನ ನೋಡಿ ಪ್ರೀತಿ ಮೋಡಿ ಮಾಡಿ...
           ಯಾಕೆ ಹೋದೆ ಓಡಿ ಧನಿಕನ ನೋಡಿ...
ಪ್ರೀತಿಯಲ್ಲೂ ಲಾಭವ ಹುಡುಕಲು ಹೋದೆಯಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
       ನಿನ್ನ ನೆನಪಲ್ಲಿ ಹಾಳಾಯ್ತು ಮನಶ್ಯಾಂತಿ... (೪)

ಹಾಳಾದ ಈ ಮನಸೂ ನನ್ನ ಮಾತೆಲ್ಲಿ ಕೇಳಿತು..?
          ಮತ್ತೊಬ್ಬ್ಬಳ ನೋಡಿ ಖುಷಿಯಿಂದ ಜಿಗಿಯಿತು...
ಮತ್ತದೇ ಪ್ರಾಸಪದ ಮನದಲ್ಲಿ ಮೂಡಿತು...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನಿನ್ನಿಂದ ಮನಸಿಗೆ ಹೊಸ ಕಾಂತಿ... (೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ