ಮಂಗಳವಾರ, ಮಾರ್ಚ್ 6, 2012

<<<..""ನನ್ನ ಕವನ""..>>>
ಮನಸ್ಸಿಲ್ಲದ ಮನಸ್ಸಿನಿಂದ ಕನಸ ಕಾಣುವುದ್ಯಾಕೋ..?
ನನಸಾಗದ ಕನಸ ಕಂಡು ಮನಸ ನೋಯಿಸುವುದ್ಯಾಕೋ..?

ನಯ ವಿನಯ ತೋರುತಾ ನಯವಂಚನೆ ಮಾಡುವುದ್ಯಾಕೋ.?
ನಯನದ ಕಣಿವೆಯಂಚಿನಲ್ಲಿ ಜಲಧಾರೆ ಹರಿಸುವುದ್ಯಾಕೋ.?

ಮನ-ಮನೆ ಮುರಿಯುವ ಮಾತನಾಡುವುದ್ಯಾಕೋ.?
ತಪ್ಪಾಗಿದ್ದರೂ ತಪ್ಪನ್ನು ಸವಿಮಾತಿಂದ ಮರೆ ಮಾಚುವುದ್ಯಾಕೋ.?

ಹೇಳದೇ ಕೇಳದೇ ಎದೆಯಲಿ ಪ್ರೀತಿ ಮೂಡುವುದ್ಯಾಕೋ.?
ಕಾರಣ ನೀಡದೇ ಮೋಸವ ಮಾಡಿ ಮರೆಯಾಗುವುದ್ಯಾಕೋ.?

ಮಡದಿಯಿಲ್ಲದ ಮನೆ ಮಸಣವಾಗುವುದ್ಯಾಕೋ.?
ಮಸಣದಲ್ಲೂ ಕೂಡ ಈ ಮನ ಅವಳ ನೆನೆಯುವುದ್ಯಾಕೋ.?

ಮನ ಮರುಭೂಮಿಯಾದರೂ ಪ್ರೇಮಕುಸುಮ ಚಿಗುರುವುದ್ಯಾಕೋ.?
ಪದೇ ಪದೇ ಅವಳ ನೆನಪ ಸಿಂಚನ ಚಿಮ್ಮುವುದ್ಯಾಕೋ.?

ಇಷ್ಟೋಂದು ಪ್ರಶ್ನೆ ಈ ದಿನ ನನ್ನಲ್ಲಿ ಮೂಡಿದ್ದು ಯಾಕೋ.?
ಕವನದ ಪಯಣಕೆ ಅಪರಿಚಿತಳೊಬ್ಬಳು ಸ್ಪೂರ್ತಿಯಾಗುವುದ್ಯಾಕೋ..?