ಬುಧವಾರ, ಜೂನ್ 20, 2012

????**ಹುಡುಕಾಟ????**

                               


ಹುಟ್ಟಿದ ನವಜಾತ ಮಗುವಿಗೆ ಅಮ್ಮನ ಎದೆಹಾಲಿನ ಹುಡುಕಾಟ..
ಚಿಕ್ಕ-ಚಿಕ್ಕ ತುಂಟ ಮಕ್ಕಳಿಗೆ ಸಿಹಿತಿನಿಸುಗಳ ಹುಡುಕಾಟ..
ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಗೆ ಹೋಗದೇ ಅಡಗಿಕೊಳ್ಳುವ ಜಾಗದ ಹುಡುಕಾಟ..
ಸ್ವಲ್ಪ ದೊಡ್ಡವರಾದ ಮೇಲೆ ಹೊಸ ಹೊಸ ಕನಸುಗಳ ಹುಡುಕಾಟ..
ಕಾಲೇಜಿಗೆ ಹೋದಾಗ ಶಿಕ್ಷಕರ ಬದಲು ಹೊಸ ಗೆಳೆಯರ ಹುಡುಕಾಟ..
ಪರಿಕ್ಷೆಯ ಸಮಯದಲ್ಲಿ ಓದದೇ ಇದ್ದರೆ ಬೇರೆಯವರು ಬರೆದ ಉತ್ತರಕ್ಕಾಗಿ ಹುಡುಕಾಟ..
ಅರ್ಧಮರ್ಧ ಕಲಿತು ಇಷ್ಟವಿಲ್ಲದ ಮಾಡಲೇಬೇಕಾದ ಕೆಲಸದ ಹುಡುಕಾಟ..
ಇದರ ನಡುವೆ ಕಣ್ಣಿಗೆ ಒಮ್ಮೆ ಕಾಣಿಸಿ ಮನಸಿಗೆ ಕಾಡುವ ಹುಡುಗಿಯ ಹುಡುಕಾಟ..
ಆ ಹುಡುಗಿ ಸಿಕ್ಕರೆ, ಅವಳ ಖುಷಿಗೋಸ್ಕರ ಕೈಯಲ್ಲಿರದ ಕಾಸಿಗಾಗಿ ಹುಡುಕಾಟ..
ಮನೆಯಲ್ಲಿ ಏನಾದರೂ ತೊಂದರೆಯಾದರೆ, ಅದರ ಪರಿಹಾರಕ್ಕಾಗಿ ಹುಡುಕಾಟ..
ಅಪ್ಪಅಮ್ಮನ ಮುಂದೆ ಪ್ರೀತಿಯ ವಿಷ್ಯ ಹೇಳುವಾಗ ಹಲವಾರು ಸುಳ್ಳುಗಳ ಹುಡುಕಾಟ..
ಅಂತು ಇಂತು ಮದುವೆಯಾದಾಗ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಗೆ ಸಮಾಧಾನದ ಹುಡುಕಾಟ..
ಅದನ್ನು ಹುಡುಕುವಷ್ಟರಲ್ಲಿ ಆಯಸ್ಸು ಕಳೆದಾಗ ನಾವು ಮಾಡಿದ್ದೇನೇಂಬುದರ ಹುಡುಕಾಟ..
ಸಾಯುವ ಕಾಲದಲ್ಲಿ ಇಷ್ಟುದಿನ ಯಾರಿಗೂ ಕಾಣಿಸದ ಮೋಕ್ಷಕ್ಕಾಗಿ ಹುಡುಕಾಟ..
ಒಟ್ಟಿನಲ್ಲಿ ಜೀವನ ಪೂರ್ತಿ ಬರೀ ಹುಡುಕಾಟವೇ ಹುಡುಕಾಟ..!!!!