ಬುಧವಾರ, ಆಗಸ್ಟ್ 22, 2012

ಯಾರವಳು..??!!

ಕರಗಳಿಗೆಟುಕದ ಅಂಬರದ ತಾರೆ ಅವಳು..

ಕಣ್ಣಿಗೆ ಕಾಣದ ಸುಂದರ ಮಾಯೆ ಅವಳು..

ಮಾತಲಿ ಬಣ್ಣಿಸಲಾಗದ ಚೆಲುವೆ ಅವಳು..

ಯಾರೂ ದ್ವೇಷಿಸಲಾಗದ ಮುಗ್ಧೆ ಅವಳು..

ಮನಸಲಿ ಪೂಜಿಸುವ ದೇವತೆ ಅವಳು..

ಕನಸನೇ ಕದಿಯುವ ತುಂಟ ಕಳ್ಳಿ ಅವಳು..

ನನ್ನುಸಿರಲಿ ಆವರಿಸಿರುವ ಮಿಂಚು ಅವಳು..

ಕಾರಣ ಇಲ್ಲದೇ ಮೂಡಿದ ಪ್ರೀತಿ ಅವಳು..

ಕವಿಯಾಗುವವರಿಗೆ ಸ್ಪೂರ್ತಿಯ ಚಿಲುಮೆ ಅವಳು..

ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ಕಾಡುವವಳು..

ಯಾರವಳು ಯಾರವಳೂ ಯಾರೋ ಅವಳು..

ಸೋಮವಾರ, ಆಗಸ್ಟ್ 20, 2012

***ನನ್ನವಳು***

ಮನಸಲಿ ನಲಿದಾಡಿ..
ಕನಸಲಿ ಕುಣಿದಾಡಿ..
ನನ್ನ ಮೈಮನ ಮರೆಸಿದ ಹೆಣ್ಣು ನೀನು..

ಕೈ ಹಿಡಿದು ಮುದ್ದಾಡಿ..
ಮಡಿಲಲ್ಲಿ ಮಗುವಾಗಿ..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..

ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..

ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..

ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..

ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..

ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..