ಗುರುವಾರ, ಅಕ್ಟೋಬರ್ 27, 2011

''...ನನ್ನ ಹನಿಗವನಗಳು...''

1)
''ಹೀಗೂ ಉಂಟೇ ನೋಡಿ
ಒಂದು ಬ್ರೇಕ್ ನ ನಂತರ''

''ಯಾಕೋ ಗೊತ್ತಿಲ್ಲಾ ನನ್ನ
ಮನಸಲ್ಲೇನೋ ಕಾತುರ''

''ಅವಳನ್ನೋಡೊ ಆಸೆ ಹೆಚ್ಚಿಸಿದೆ
ನನ್ನ ಮನದ ಆತುರ''

''ಇಂಥ ಅಪಾಯ ಉಂಟಾಗಲು
ಕಾರಣವೇ ಈ ಅವಸರ''

''ಇಂಥ ಅತೀವೇಗದ ದೇಸೆಯಿಂದಲೇ
ನನ್ನ ಪ್ರೀತಿ ಹೇಳಾಗಿತ್ತು ಹರೋ ಹರ''

''ಅದನ್ನು ತಿಳಿದುಕೊಳ್ಳವ ಮುನ್ನವೇ
ಎದೆಯನ್ನು ಕೆರೆದುಕೊಂಡಾಗಿತ್ತು ಪರ ಪರ''

2)
ನನ್ನ ಈ ಮನದ ಆಗಸದಲ್ಲಿ,,
ಕಹಿ ನೆನಪಿನ ಕಾರ್ಮುಗಿಲು ಕವಿದು..
ಖುಷಿಯ ಕಾಮನಬಿಲ್ಲು ಕಾಣೆಯಾಗಿ,,
ಕಣ್ಣೀರ ಮಳೆಯು ಸುರಿಯುತಿಹುದೆಂದ ಪ್ರದೀಪ....

3)
ಆ ದಿನ ಯಾಕೆ ನೀನಾದೆ ನನ್ನಿಂದ
'ಅಗೋಚರ',
ಅಂದಿನಿಂದ ನನ್ನ ಮನಸಾಗಿದೆ
'ನಿಶಾಚರ',
ಏನೋ ಗೊತ್ತಿಲ್ಲಾ ಕಂಡಿದ್ದೆಲ್ಲಾ ಅನಿಸುತಿದೆ
'ಅಬ್ರಕದಬ್ರ',
ನನ್ನಾಣೆಗೂ ನಿನ್ನ ಪ್ರೀತಿಸುವೆ 'ಇದು ಸತ್ಯ'
ನನ್ನ ಪ್ರೀತಿಯನ್ನು ಕೆಣಕಲು ಯಾರಾದರೂ ಕೇಳಿದರೆ 'ಹೀಗೂ ಉಂಟೇ'..?
'ಕ್ರೈಂಡೈರಿ'ಯಲ್ಲಿ ಅವರ ಕಥಾಯಾಗುತ್ತದೆ
'ಕ್ರೈಂಸ್ಟೋರಿ'


ಹಾಗಂತಾ ನಮ್ಮ ಪ್ರೀತಿನಾ 'ಗಲ್ಲಿ ಗಾಸಿಪ್' ಥರ 'ನೀವು ಹೇಳಿದ್ದು ನಾವು ಕೇಳಿದ್ದು' ಅಂತ
'ಸಿಂಗ್ರಿ ರೌಂಡ್ಸ್' ಗೆ ಬಂದಾಗ ಹೇಳಬಾರದು,
ಇದು ನನ್ನ 'ಕಟ್ಟೆಚ್ಚರ'......


ಆದ್ರೂ ಗೆಳೆಯರೇ ಈ ಪ್ರೀತಿ ಅನ್ನೋದು
'ಜೇಡರ ಬಲೆ' ಅಂದ್ಕೊಂಡಿದ್ದೆ ಆದ್ರೆ ಇದು
'ಚಕ್ರವ್ಯೂಹ' ಅಂತ ಇವತ್ತೇ ಗೊತ್ತಾಗಿದ್ದು....!!!!!!

4)
ದಯವಿಟ್ಟು ಸಾಕು ಮಾಡು ಈ ನಿನ್ನ-ನನ್ನ ಪ್ರಶ್ನೋತ್ತರ...
ನಿನ್ನ ಮುಗ್ಧ ಪ್ರಶ್ನೆಗೆ ನಾನಾಗಿರುವೆ
ಈಗ ನಿರುತ್ತರ...
ನಿನ್ನೀ ಅತಿಯಾದ ಪ್ರೀತಿ, ಕಾಡುತಿದೆ
ನನ್ನ ನಿರಂತರ...
ಆದರೆ ನಮ್ಮಿಬ್ಬರ ನಡುವೆ ಬಂದು ಒಂದು ಮಧ್ಯಂತರ..,
ನಿನ್ನ ಕಳೆದುಕೊಳ್ಳುವ ಭಯದಲ್ಲಿ ನನ್ನ ಮನಸಾಗಿದೆ ತತ್ತರ...

5)
...ಮನಸ್ಸೆಂಬ ಮರುಭೂಮಿಯಲ್ಲಿ ನೀರಿನಂತೆ ಚಿಮ್ಮಿದವಳು ನೀನು...

...ಸುಡುವ ಬಿರುಬಿಸಿಲಲ್ಲೂ ತಂಪಾದ ತಂಗಾಳಿಯಾದವಳು ನೀನು...

...ರಾಗವನ್ನೇ ಮರೆತಿದ್ದ ನನ್ನ ಜೀವನಕ್ಕೆ ನವಪಲ್ಲವಿಯಾದವಳು ನೀನು...

...ಮಂಕಾಗಿದ್ದ ನನ್ನ ಕಲ್ಪನೆಗಳಿಗೆ ಹೊಳಪು ತಂದವಳು ನೀನು...

...ಈ ಕವನದಲ್ಲಿ ಮೂಡಿದ ಪದಗಳಿಗೆ ಸ್ಪೂರ್ತಿಯಾದವಳು ನೀನು...

ಭಾನುವಾರ, ಅಕ್ಟೋಬರ್ 23, 2011

|ನನಗೂ ಒಬ್ಬ ಗೆಳತಿ ಬೇಕು
ಸುಂದರಿಯಲ್ಲದ್ದಿದ್ದರೂ
ಗುಣವಂತೆಯಾಗಿರಬೇಕು
ನನಗೂ ಒಬ್ಬ ಗೆಳತಿ ಬೇಕು|


|ನನ್ನ ಬರಹಕೆ ಸ್ಪೂರ್ತಿಯಾಗಿರಬೇಕು
ನನ್ನಿಂಗಿತವ ಅರಿತುಕೊಳ್ಳಬೇಕು ದೊಡ್ಡವರಿಗೆ ಮರ್ಯಾದೆ ಚಿಕ್ಕವರಿಗೆ
ಪ್ರೀತಿಯ ತೋರಬೇಕು|


|ನನಗೂ ಒಬ್ಬ ಗೆಳತಿ ಬೇಕು|


|ಜೀವನವೆಂದರೇನೆಂದು ಗೊತ್ತಿರಬೇಕು
ಸಹನೆಯ ಅರ್ಥ ತಿಳಿದಿರಬೇಕು
ನನ್ನಂತೆಯೇ ಎಲ್ಲರನ್ನೂ
ನಗಿಸುತಿರಬೇಕು|


|ನನಗೂ ಒಬ್ಬ ಗೆಳತಿ ಬೇಕು|


|ಅವಳ ನೋವನು ನನ್ನಲಿ ಹೇಳಬೇಕು
ನನ್ನಯ ಸುಖವ ಅವಳು ಪಡೆಯಬೇಕು
ನನ್ನೆದೆಯಲಿ ಯಾವಾಗಲೂ
ನಲಿಯುತಿರಬೇಕು|


|ನನಗೂ ಒಬ್ಬ ಗೆಳತಿ ಬೇಕು |


|ಏನೇ ಆದರೂ ಇಬ್ಬರಿಗೂ ತಿಳಿದಿರಬೇಕು
ಅನುಮಾನಕೆ ಕಾರಣ ಮೂಡದಿರಬೇಕು
ನಮ್ಮ ಜೋಡಿ ಬೇರೆಯವರಿಗೆ
ಮಾದರಿಯಾಗಬೇಕು|

|ಅಂತಃ ಗೆಳತಿ ನನಗೆ ಬೇಕು
ಸುಂದರಿಯಲ್ಲದ್ದಿದ್ದರೂ
ಗುಣವಂತೆಯಾಗಿರಬೇಕು
ನನಗೂ ಒಬ್ಬ ಗೆಳತಿ ಬೇಕು|

ಶನಿವಾರ, ಅಕ್ಟೋಬರ್ 15, 2011

('ಪಯಣ' ಚಿತ್ರದ ''ಮೋಡದ ಒಳಗೆ'' ಹಾಡಿನ ಧಾಟಿಯಲ್ಲಿ ನನ್ನ ಕಲ್ಪನೆ)

|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|

|ಜೀವದ ಗೆಳತಿ ಎಲ್ಲಿಹೆ ನೀನು
ನಿನ್ನ ಹುಡುಕುತಾ ನನ್ನೆ ಕಳೆದೆನು
ಈ ದಿನ ನಾನು|

|ಕಪಟ ತಂತ್ರ ಗೊತ್ತಿಲ್ಲಾ,
ಮೋಸಗಾರ ನಾನಲ್ಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ..
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ.|


|ನಿಂತರೆ ನಿನದೇ ನೆನಪು
ಕುಂತರೆ ನಿನದೇ ಕನಸು
ಏತಕೆ ನನ ಕಾಡಿದೆ
ನಿನ ಕಲರವ ಹೇ.. ಹೆ..|

|ನಾನು ನಿನ್ನ ಮನಸೊಳಗೆ
ನೀನು ನನ್ನ ಎದೆಯೊಳಗೆ
ಇದ್ದರೆ ಈ ಜಗವನೇ ನಾ ಮರೆವೆನು|

|ಕಾದು ಕೂರುವೆ ನಾನು
ಒಮ್ಮೆ ಬಂದು ನೋಡು ನೀನು
ಮತ್ತೆ ಏನೂ ಕೇಳೆನು ನಾನು
ನನ್ನ ಜೀವವೇ
ಮತ್ತೆ ಏನೂ ಕೇಳೆನು ನಾನು
ನನ್ನ ಜೀವವೇ|


|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|


|ನಾನು ನಿನ್ನ ಮನಸೊಳಗೆ
ಪ್ರೀತಿ ಅರ್ಜಿ ಸಲ್ಲಿಸುವೆ
ಆ ಮನವಿಯ ನೀ ಒಪ್ಪಿಕೊ
ನನ್ನ ಕಾಡದೇ ಹೇ...|

|ನೀನೇ ನನ್ನ ಹಸಿರುಸಿರು
ನನ್ನ ನೀನು ಮರೆಯದಿರು
ನೀ ನಾವಿಕೆ ನನ್ನ ಬಾಳಿಗೆ ಎಂದೆಂದಿಗೂ|

|ನೀನು ಬರದೇ ಬದುಕಿನಲೀ
ನನ್ನ ಜೀವ ಬಾಡುವುದು
ನೀನೇ ನನ್ನ ದೇಹದಲೀ
ಪ್ರಾಣ ಎಂದಿಗೂ
ನೀನೇ ನನ್ನ ದೇಹದಲೀ
ಪ್ರಾಣ ಎಂದಿಗೂ|


|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|

|ಜೀವದ ಗೆಳತಿ ಎಲ್ಲಿಹೆ ನೀನು
ನಿನ್ನ ಹುಡುಕುತಾ ನನ್ನೆ ಕಳೆದೆನು
ಈ ದಿನ ನಾನು|

|ಕಪಟ ತಂತ್ರ ಗೊತ್ತಿಲ್ಲಾ,
ಮೋಸಗಾರ ನಾನಲ್ಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ|

ಗುರುವಾರ, ಅಕ್ಟೋಬರ್ 13, 2011

''banglore ಹವ್ಯಕ ಹುಡುಗಿಯ ದಿನ-ನಿತ್ಯದ ಗೋಳು''...!!!

ಮನವಿ;;;;-
ಇದು ಎಲ್ಲ ಹವ್ಯಕ ಹುಡುಗಿಯರಿಗೆ ಅಲ್ಲಾ.....

ಇದೊ೦ದು ಕೇವಲ ಕವನ


ಅಪ್ಪಯ್ಯ ನಾನು ನಾಳೆಯಿ೦ದ ಕಾಲೇಜಿಗೆ ಹೋಗ್ತ್ನಿಲ್ಲೆ.
ಎ೦ತ೦ಕ೦ದ್ರೆ ನೀ ಕೊಡು ದುಡ್ದು ನ೦ಗೆ ಸಾಕಾಗ್ತಿಲ್ಲೆ..
ಎಲ್ಲಾ ಹುಡ್ಗೀರು ನಮ್ನ್-ನಮ್ನಿ ಜೀನ್ಸ್ ಟೀಷರ್ಟ್ ಹಾಯ್ಕ೦ಡ್ ಬತ್ತ.
ಆದ್ರೆ ನ್೦ಗ್ ಮಾತ್ರ ಅದೇ ಹಳೇ ಚುಡಿದಾರ ಕುರ್ತಾ.
ಎಲ್ರ ಕೈಲೂ ಈಗ ಹೊಸ-ಹೊಸ i pod mobile ಇರ್ತು
ನನ್ನ್ಹ್ತ್ರ ಮಾತ್ರ ಈಗೂ ಹಳೇ calculator, ಪಟ್ಟಿ,
ಪೆನ್ನು ಇದ್ದು..

ಅಪ್ಪಯ್ಯ ನಾನು.......

ಮನೆಲಿ ದಿನಾ ಅಕ್ಕಿ ತೆಳ್ಳಾವ್ ತಿ೦ದು ಸಾಕಾಗಿ ಹೋತು.
ನ೦ಗೂ ಕೂಡ ಅವ್ರ೦ಗೆ ಪಿಜ್ಜಾ,ಬರ್ಗರ್ ತಿನ್ನವು ಕಾಣ್ತು..
ಪ್ರತಿ-ದಿನ ಬೆಳಿಗ್ಗೆ ಆ ಸೇಟು ಅ೦ಗಡಿ ನೋಡಿ ಬೇಜಾರು ಬ೦ತು..
ನ೦ಗೂ ಅವ್ರ ಜೊತೆಗೆ ಷಾಪಿ೦ಗ್ ಮಾಲ್, ಪಿವಿಆರ್ ಗೆ ಹೋಗಕಾಗ್ತು..

ಅಪ್ಪ ಮಗಳಿಗೆ ಹೇಳ್ತಾನೆ,,

ಮಗಳೇ ಕೇಳೇ ನೀನು ನಾಳೆಯಿ೦ದ ಕಾಲೇಜಿಗೆ ಹೋಗವು ಹೇಳಿಲ್ಲೆ.
ಎ೦ತ೦ಕ೦ದ್ರೆ, ನೀ ಅಲ್ಲಿಗ್ ಹೋಗಿ ಉದ್ದಾರ
ಮಾಡುದು ಎ೦ತೂ ಇಲ್ಲೆ..!!!

ಬುಧವಾರ, ಅಕ್ಟೋಬರ್ 5, 2011

ಬದಲಾದೆ....!

ಬದಲಾದೆ ನಾನೀಗ ಬದಲಾದೆ..
ಮುಂಚಿನಂತಿಲ್ಲ ನಾನಿಗ ಬದಲಾದೆ..

ಅವಳ ಕಣ್ಣ ನೋಟ ನೋಡಿ..
ಅವಳ ಸವಿಮಾತ ಕೇಳಿ..
ನಾನೀಗ ಬದಲಾದೆ..

ಖುಷಿಯಾಗಿ ಆರಾಮಾಗಿ,
ಹಾರಾಡಿಕೊಂಡಿದ್ದೆ ಆಗ ನಾನು..
ಆ ಚಂಚಲೆಯ ನೋಡಿ ನನಗೀಗ,,
ಬೇಡವೆನಿಸುತಿದೆ ಏನೂ..


ಅಂದುಕೊಂಡಿದ್ದೆ ನಾ,
ಎಲ್ಲರಂತಲ್ಲ ಈ ಪುಂಡ..
ಆದರೀಗ ನಾ ಕಾತರಿಸುತ್ತಿರುವೆ
ಆಗಲು ಅವಳ ಗಂಡ..

ಬದಲಾದೆ ನಾನೀಗ ಬದಲಾದೆ,
ಮುಂಚಿನಂತಿಲ್ಲ ನಾನೀಗ ಬದಲಾದೆ..

ಅವಳ ಅಕ್ಕರೆಯ ನೋಡಿ..
ಅವಳ ಮುಗ್ಧತೆಗೆ ಸೋತು..
ನಾನೀಗ ಮನುಜನಾದೆ...

ಮಂಗಳವಾರ, ಅಕ್ಟೋಬರ್ 4, 2011

(ಹುಡುಗರು ಚಿತ್ರದ,
''ನೀರಲ್ಲಿ ಸಣ್ಣ ಅಲೆಯೊಂದು'' ಧಾಟಿಯಲ್ಲಿ ನನ್ನ ಕಲ್ಪನೆ)

ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನಈಗ..

ತುಸು ಪ್ರೀತಿ ಕಾಣಿಸಿ ಕಣ್ಣಲ್ಲೇ ಕೊಂದೆ ನೀ..
ಸವಿಮಾತ ಕೇಳಿಸಿ ಕಾಣದಾದೆಯಾ..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ಕುಂತಲ್ಲೇ ಕೇಳಿಸುತ್ತಿದ್ದೆ
ಈ ನನ್ನ ಎದೆಹಾಡು..
ನೀನೆಲ್ಲೋ ಹೋಗಿರುವಾಗ
ನನಗ್ಯಾಕೆ ಆ ಹಾಡು..?
ಮನಸ್ಸಿನಲ್ಲೇ ನಾನೀಗ
ಬಯಸುತಿಹೆನು ನಿನ್ನ..
ಮರೆಯಲಾರೆ ನಾನಿನ್ನ
ಒಮ್ಮೆ ಬಾರೇ ಚಿನ್ನ..

ಎದೆಯಲ್ಲಿ ಈಗ ನೂರಾರು ಲಹರಿ
ಓಡಾಡುತಿಹುದು ನೊಡು...
ಆಗೊಂದು ಕನಸು ಈಗೊಂದು ನೆನಪು
ಕಾಡುತಿಹುದು ನೋಡು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ತಲೆಯಲ್ಲಿ ಸಾವಿರಾರು
ಚಿಂತೆಗಳ ಸರಮಾಲೆ..
ಮನಸ್ಸಿದು ಆಗಿದೆ ಇಂದು
ದುಃಖದ ಉಯ್ಯಾಲೆ..

ನೀನೇ ಬಂದು ಮನಸಾರೆ
ನನ್ನ ಸಮಾಧಾನಿಸು..
ಅಷ್ಟೇ ಸಾಕು ಬಾಳಲ್ಲಿ
ಅದೇ ನನ್ನ ಕನಸು..

ನನ್ನ ಚುಚ್ಚಿ ತಿವಿಯೊ ಅ ನಿನ್ನ ಮೌನ
ಯಾಕೀಗ ನೀನೇ ಹೇಳು..
ನಾನೊಂದು ತೀರ ನೀನೊಂದು ತೀರ
ಆಗಿರಬೇಕಾ ಹೇಳು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..

ಭಾನುವಾರ, ಅಕ್ಟೋಬರ್ 2, 2011

ತಳಮಳ....

ಕ್ಷಮಿಸಿ...
ಇದು ರೊಮಾಂಟಿಕ್ಕಾ.?ಸೆಂಟಿಮೆಂಟಾ..? ಅಥವಾ ಕಾಮಿಡಿ ನಾ.?
ಅಂತಾ ನಂಗೆ ಗೊತ್ತಾಗಿಲ್ಲಾ..
ಏನೋ ಹೇಳಲು ಹೋಗಿ ಏನೋ ಅಗಿದೆ.. ಸ್ವಲ್ಪಸಹಿಸಿ ಕೊಳ್ಳಿ..!!

ಯಾರಿಗೆ ಹೇಳಲಿ ನನ್ನೀ ತಳಮಳವ...?

ಏನೂ ಹೇಳದ ಅವಳ ಆ ಮೌನ
ನನ್ನ ಕೊಲ್ಲುತಿದೆ..
ಗಡಿಯಾರದಲಿ ಮೂರು ಮುಳ್ಳುಗಳು
ಮೆಲ್ಲಗೆ ಜಾರುತಿದೆ..
ನನ್ನಯ ತಾಳ್ಮೆ ಮಿತಿಯ
ಗಡಿ ದಾಟುತಿದೆ..

ಯಾರಿಗೆ ಹೇಳಲಿ ನನ್ನೀ ತಳಮಳವ...?

ನನ್ನ ಪಾಡಿಗೆ ನಾನು,
ತುಂಬಾ ಆರಾಮಾಗಿದ್ದೆ..
ಎಲ್ಲಿಂದಲೋ ಆಕೆ ಬಂದು,
ಕೆಡಿಸಿದಳು ನನ್ನ ನಿದ್ದೆ..
ಹಗಲಲ್ಲೇ ಕನಸು ಕಾಣುತಾ ನಾ,
ಪ್ರೀತಿಯ ಹಳ್ಳದಲ್ಲಿ ಬಿದ್ದೆ..

ಯಾರಿಗೆ ಹೇಳಲಿ ನನ್ನೀ ತಳಮಳವ..

ಬರೀ ಕನಸು ಕಾಣುವುದರಲ್ಲೇ
ಮುಗಿದ್ಹೋಯ್ತು ಬಾಳು..
ಯಾರೂ ಕೇಳುವವರಿಲ್ಲ,
ನನ್ನಮನದ ಈ ಗೋಳು..
ಹಾಗಾಗಿ ನನಗೀಗ ಅನಿಸುತಿದೆ
ಇಷ್ಟೇನಾ ಬಾಳು..?

ಶನಿವಾರ, ಅಕ್ಟೋಬರ್ 1, 2011

ನನ್ನ ಚೆಲುವೆ....

ಓ ಚೆಲುವೆ.. ಬಾ ಚೆಲುವೆ..ನೀ ನನ್ನೆಡೆಗೆ...
ನೀ ಬರದೆ ನಾನಿಲ್ಲಿ ಇರಲಾರೆನೇ...


ಆ ನಿನ್ನ ನಗುವು ನನ್ನ ಕಾಡುತಿರಲು..

ಆ ಕಣ್ಣ ನೋಟ ನನ್ನ ಕೊಲ್ಲುತಿರಲು..

ನನಗೀಗ ನೀನೇ ಗತಿಯೆಂದು

ನನ್ನ ಮನ ಕೊರಗುತಿಹುದು..


ಓ ಚೆಲುವೆ.. ಬಾ ಚೆಲುವೆ...

ಒಂದು ಸಿಹಿಗನಸು ಬಿದ್ದಂತಾಯ್ತು ನಾ
ನಿನ್ನ ಕಂಡಾಗ..

ನನ್ನ ಹೃದಯ ನಿನ್ನ ಪಾಲಾಯಿತು
ನೀ ಬಂದು ನಿಂತಾಗ..

ನಾ ಮಾಡಿದೆ ನಿನ್ನೆದುರಲಿ ನನ್ನ
ಪ್ರೀತಿಯ ಅಲಾಪನೆ..

ನೀ ಹೇಳದೇ ಏನನ್ನೂ ಮುಗಳ್ನಗುತಾ
ಹೋದೆ ಹಾಗೆ ಸುಮ್ಮನೆ..


ಓ ಚೆಲುವೆ.. ಬಾ ಚೆಲುವೆ...


ಒಮ್ಮೆ ಒಪ್ಪಿಕೊ ನನ್ನೊಲವೇ
ಈ ನನ್ನ ಪ್ರೀತಿಯ..

ಬಚ್ಚಿಟ್ಟು ನಿನ್ನ ಕಾಯುವೆ ನನ್ನೆದೆಯಲಿ
ಓ ನನ್ನ ಹೃದಯ..

ನಾ ಎದುರಿಸುವೆ ನಿನಗಾಗಿ ಭುವಿಯೇ
ತಿರುಗಿ ನಿಂತರೂ..

ಮನಸಾರೆ ನಗುತಿರು ನನ್ನ ನೋಡಿ
ನೀ ಹಾಗೆ ಸುಮ್ಮನೆ..


ಓ ಚೆಲುವೆ.. ಬಾ ಚೆಲುವೆ..ನೀ ನನ್ನೆಡೆಗೆ...
ನೀ ಬರದೆ ನಾನಿಲ್ಲಿ ಇರಲಾರೆನೇ...

ಆ ನಿನ್ನ ನಗುವು ನನ್ನ ಕಾಡುತಿರಲು..

ಆ ಕಣ್ಣ ನೋಟ ನನ್ನ ಕೊಲ್ಲುತಿರಲು..

ನನಗೀಗ ನೀನೇ ಗತಿಯೆಂದು

ನನ್ನ ಮನ ಕೊರಗುತಿಹುದು..