ಸೋಮವಾರ, ಏಪ್ರಿಲ್ 16, 2012

<<<**"ನನ್ನ ಕವನ"**>>>

ಈ ಪಾಪಿ ಮನದ ಪಾಪ ತೊಳೆಯೋಳು,
ನನ್ನ ಮನದರಸಿ ಶಾಪ ಹಿಡಿದ ಕನಸಲ್ ಬರುವವಳು..

ಕಡುಗಪ್ಪು ತುಂಬಿದ ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು ಬೆಳಕ ಚೆಲ್ಲಿದವಳು..

ಹೇಗೆ ಹೊಗಳಲಿ ಅವಳ ಅಂದ-ಚೆಂದವಾ.?
ಅವಳೆದುರು ನಾ ಹೇಗೆ ಹೇಳಲಿ ನನ್ನೀ ಒಲವಾ.?

ಅವಳೋಬ್ಬ ಶ್ರೀಮಂತ ಮನೆಯ ಸಿರಿ,
ನಾನು ಬಡವರ ಮನೆಯ ಭಿಕಾರಿ..

ಆದರೆ ಪ್ರೀತಿಗಿಲ್ಲ ಈ ಬಡತನ ಸಿರಿತನ,
ಅದಕ್ಕಾಗಿ ಶುರು ಮಾಡಿದೆ ಅವಳೊಡನೆ ಗೆಳೆತನ..

ಆದರದನ್ನು ಒಪ್ಪಲಿಲ್ಲ ನಮ್ಮಿಬ್ಬರ ಮನೆತನ,
ಸುಳ್ಳು ಕಥೆಯ ಹೇಳಿ ಬೆಳೆಸಿದರು ನಮ್ಮ ನಡುವೆ ಹಗೆತನ..

ನಂತರ ಅವಳ ಮರೆಯಲು ಬಹಳ ದುಃಖಿಸಿತ್ತು ನನ್ನೀ ಮನ,
ಮತ್ತೆ ಎಂದೆಂದೂ ಆಗಲೇ ಇಲ್ಲ ನನ್ನ ಬಾಳಲ್ಲಿ ಅವಳಾಗಮನ..

ಶುಕ್ರವಾರ, ಏಪ್ರಿಲ್ 6, 2012

ಈ ಲೈಫಲ್ಲೇನೂ ಇಲ್ಲಾ


ನಾನೊಬ್ಬ ಚೆಲುವೆಯ ನೋಡಿದೆ..
ಅವಳೂ ನನ್ನ ನೋಡಿದಾಗ ನಾನಲ್ಲೇ ಬಿದ್ದೆ..
ಕೆಲದಿನದಲ್ಲಿ ಅವಳ ಮನವ ನಾ ಗೆದ್ದೆ..
ಆದರೆ, ನನ್ನ ಮನದಲ್ಲೇ ಬಹುದಿನದಿಂದ ನಾ ಯೋಚಿಸುತ್ತಿದ್ದೆ,
ಈ ಲೈಫಲ್ಲೇನೂ ಇಲ್ಲಾ ಬರೀ ಅನ್ನ-ಸಾರು ರಾಗಿಮುದ್ದೆ...!

ಅವಳೂ ಕೂಡ ತನ್ನ ಮನೆಯವರ ಒಪ್ಪಿಸಿದಳು..
ನಾನು ನನ್ನ ಮನೆಯಲ್ಲಿ ಹೇಳಿಕೊಂಡೆ ನನ್ನ ಮನದ ಅಳಳು..
ಅಂತೂ ಇಂತೂ ನಮ್ಮವರು ಒಪ್ಪಿಕೊಂಡುಹೊರಟರು ಅವಳ ನೋಡಲು..
ನನ್ನಲ್ಲಾಗ ಒಂದುಕ್ಷಣ ಮೂಡಿತು ಕವನದ ಒಂದು ಸೊಲ್ಲು..
ಅದೇ ಈ ಲೈಫಲ್ಲೇನೂ ಇಲ್ಲಾ ಬರೀ ಕಷ್ಟ-ದುಃಖವೆಂಬ ಕಲ್ಲು-ಮುಳ್ಳು...!!


ಹಾಗೂ ಹೀಗೂ ನಮ್ಮ ಮದುವೆ ಆಯಿತು..
ಒಂದೇ ವರ್ಷಕ್ಕೇ ಮಗುವೂ ಆಗಿಹೋಯಿತು..
ಜೀವನದ ಬೆಲೆ ಆಗ ನನಗೆ ಗೊತ್ತಾಗಿತ್ತು..
ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು..
ನನಗೀಗ ಒಂದು ಸಾಲು ನೆನಪಾಯಿತು..
"ಈ ಲೈಫಲ್ಲೇನೂ ಇಲ್ಲಾ ಸಮಸ್ಯೆಯೇ ಮುಗಿಯೊಲ್ಲಾ ಬಂದರೂ ನನ್ನ ಸಾವಿನ ಹೊತ್ತು...!!!