ಸೋಮವಾರ, ಜುಲೈ 22, 2013

ಚೆಲುವೆ

...ಚೆಲುವೆ... ಈ ನನ್ನೆದೆಯಲ್ಲೊಂದು ಪುಟ್ಟ ಗೂಡು.. ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು.. ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ, ನಿನ್ನ ನೆನಪುಗಳೇ ಇದರ ಅಡಿಪಾಯ.. ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ.. ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು.. ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು.. ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ.. ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....

ಶನಿವಾರ, ಜುಲೈ 20, 2013

ಚೆಲುವೆ...

ಚೆಲುವೆ...

ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...

ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...

ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...