ಸೋಮವಾರ, ಆಗಸ್ಟ್ 20, 2012

***ನನ್ನವಳು***

ಮನಸಲಿ ನಲಿದಾಡಿ..
ಕನಸಲಿ ಕುಣಿದಾಡಿ..
ನನ್ನ ಮೈಮನ ಮರೆಸಿದ ಹೆಣ್ಣು ನೀನು..

ಕೈ ಹಿಡಿದು ಮುದ್ದಾಡಿ..
ಮಡಿಲಲ್ಲಿ ಮಗುವಾಗಿ..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..

ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..

ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..

ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..

ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..

ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ