ಬುಧವಾರ, ಜನವರಿ 4, 2012

'ವದನ ವರ್ಣನೆ'

ನಿನ್ನೀ ಸುಂದರ ನಗುವ ನೋಡಲು ಬಲುಚೆಂದ..
               ಈ ನಣುಪಾದ ರೇಶಿಮೆ ಕೆನ್ನೆ ಇನ್ನೂ ಅಂದ..


ಹಾರಾಡುವ ಆ ನಿನ್ನ ಮುಂಗುರುಳು ಅತೀ ಸುಂದರ..
         ಈ ಸೌಂದರ್ಯ ರಾಶಿಯ ನೋಡಿ ನಾಚಿದ ಆ ಚಂದಿರ..


ಕೆಂದಾವರೆಯ ಎಸಳಿನಂತಿರುವ ಆ ಅಧರ..
           ನೋಡಿ ಮೂಡಿದವು ಆಸೆಗಳು ಥರ ಥರ..


ನಿನ್ನ ಕಂಗಳು ಯಾರಿಗಾದರೂ ಮಾಡುವುದು ಮೋಡಿ..
             ನಾ ಸ್ತಬ್ದನಾಗಿದ್ದೆ ಆ ಜೋಡಿ ತಾರೆಗಳ ನೋಡಿ..ಶ್ವೇತವಜ್ರಗಳಂತಿರುವ ಆ ನಿನ್ನ ದಂತಪಂಕ್ತಿ..
          ಎಷ್ಟೇ ಹೊಗಳಿದರೂ ಆಗದು ಅತೀಶಯೋಕ್ತಿ..


'ವದನ ವರ್ಣನೆ'ಗೇ ಇಷ್ಟು ಪದಗಳು ಕಾಲಿಯಾಗಿರುವಾಗ,,
    ನಿನ್ನ ಪೂರ್ತಿಯಾಗಿ ವರ್ಣಿಸಲು ಎಲ್ಲಿ ಹುಡುಕಲಿ ಪದಗಳ ನಾನೀಗ..?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ