ಗುರುವಾರ, ಜನವರಿ 5, 2012

""ಜೋಪಡಿಯ ಬದುಕು""



ಸುಕ್ಕುಗೆಟ್ಟ ತಲೆಗೂದಲು..
    ಪಾತಾಳಕ್ಕಿಳಿದ ಕಂಗಳು..
ನೀರು ಕಾಣದ ಮರಗೆಟ್ಟಿರುವ ಶರೀರ..
ಐಶರಾಮಿ ಬಾಳ್ವೆಯ ಕನಸಿನಲ್ಲಿರುವ ಮನಗಳು..
ಮಳೆಯಿರಲಿ ಚಳಿಯಿರಲಿ, ಸುಡುವ ಬಿಸಿಲಿರಲಿ,
  ನೋವಲ್ಲಿ ನಲಿವು ಕಾಣುವ ಇವರು ಜೋಪಡಿಗರು..(೧)



ಅನರಕ್ಷತೆಯ ಭವ್ಯ ನೆಂಟಸ್ತಿಕೆ
 ಶುದ್ದ ವ್ಯವಹಾರದ ಮಾತುಗಾರಿಕೆ..
ಎಲ್ಲರೂ ನಮ್ಮವರೆಂದು ಮೋಸ ಹೋಗಿ,
 ನಂತರ ಬದುಕಲಿ ಗೋಳಾಡುವರು
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
        ಶ್ರಮದಿಂದ ದುಡೀವ ಇವರು ಜೋಪಡಿಗರು.. (೨)


ಕೇವಲ ಮಾನ ಮುಚ್ಚಲಷ್ಟೇ ವಸ್ತ್ರವ ತೊಟ್ಟು,,
  ನಾಳೆ ಬಗ್ಗೆ ಚಿಂತಿಸದೇ ಈದಿನದಲ್ಲಿ ಖುಷಿಯ ಕಂಡು,,
ಪಡೆದ ಕಾಸಿಗೆ ತಕ್ಕ ಕೆಲಸ ಮಾಡುವ ಕೂಲಿಗಳಿವರು..
 ಕೆಟ್ಟ ಚಟಕ್ಕೆ ಬಲಿಯಾಗಿ ಅರೆಹೊಟ್ಟೆ ತಿಂದು ದುಃಖಿಸುವರು.,
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
ಜೋಪಡಿಯಲ್ಲೇ ಬದುಕು ಮುಗಿಸುವ ಇವರು ಜೋಪಡಿಗರು... (೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ