ಬುಧವಾರ, ನವೆಂಬರ್ 28, 2012

"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..

2 ಕಾಮೆಂಟ್‌ಗಳು:

 1. "ಹೀಗೇಕೆ ಈ ಜೀವನ"

  ಹೀಗೇಕೆ ಈ ನನ್ನ ಜೀವನ..
  ಪೂರ್ತಿ ಬರೆಯಲಾಗದ ಅಪೂರ್ಣ ಕವನ..
  ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ.
  ಮನದೊಳಗೆ ಈಡೇರದ ಆಸೆಗಳೂ ಹಳಸಿವೆ..
  ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ.

  ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ..
  ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು.
  ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು..
  ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು.
  ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು..

  ಹೀಗೇಕೆ ಈ ನನ್ನ ಜೀವನ..
  ನಾ ತಿಳಿಯದಾದೆ ಅದಕೆ ಕಾರಣ..

  ಪ್ರತ್ಯುತ್ತರಅಳಿಸಿ
 2. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು ಎನ್ನಡಿರಿ ಕವಿಯೇ ಬಂದೇ ಬರುವುದು ಒಳ್ಳೆಯತನ ಗುರುತಿಸುವ ಕಾಲ. ಮನೆತನದೊಳಗೂ ಅಕ್ಕರೆಯ ಮಳೆ.

  http://badari-poems.blogspot.in/

  ಪ್ರತ್ಯುತ್ತರಅಳಿಸಿ