ಶನಿವಾರ, ಜುಲೈ 20, 2013

ಚೆಲುವೆ...

ಚೆಲುವೆ...

ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...

ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...

ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...

2 ಕಾಮೆಂಟ್‌ಗಳು:

  1. ತುಂಬಾ ಹೊಗಳಿದ್ದೀರಿ ನಲ್ಲ ನನಗೆ ತುಂಬಾ ಸಂಕೋಚವಾಗುತ್ತದೆ. ಎಂದಳಾಕೆ!

    http://badari-poems.blogspot.in

    ಪ್ರತ್ಯುತ್ತರಅಳಿಸಿ
  2. ಆಕೆಯ ಮುಖ ದರ್ಶನಕ್ಕಾಗಿ ಕಾಯುತ್ತಿದ್ದೇನೆ..
    ಆಮೇಲೆ ಈ ಕವನ ಓದಿ ನಾಚಿಕೆ ಪಡುತ್ತಾಳೋ ಅಥವಾ ಕೋಪ ತೋರಿಸುತ್ತಾಳೋ ಕಾದು ನೋಡೋಣ ಸರ್..

    ಪ್ರತ್ಯುತ್ತರಅಳಿಸಿ