ಮಂಗಳವಾರ, ನವೆಂಬರ್ 19, 2013

ಅಪರಿಚಿತ ದಾರಿಯಲ್ಲಿ ನನ್ನವಳನ್ನು ಹುಡುಕುತ್ತಾ ಹೊರಟೆ ಅವಳು ಬಿಟ್ಟುಹೋದ ಗುರುತನ್ನು ಹಿಡಿದು... ಅಯಾಸ ತೀರಿಸಲು ಅವಳ ನೆನಪುಗಳ ತಂಗುದಾಣವಿತ್ತು ಹಸಿವು ನೀಗಲು ಅವಳ ಮುಗುಳ್ನಗುವೇ ಆಧಾರವಾಗಿತ್ತು... ಅವಳ ಮುನಿಸು ದಾರಿಯಲ್ಲಿ ಅಡ್ಡಿಯಾದರೂ ಅವಳು ತೋರಿದ್ದ ಒಲವಿನ ದೀವಿಗೆ ಪಯಣವನ್ನು ಸುಗಮವಾಗಿಸಿತ್ತು.. ಮುಂದೆ ನನಗೆ ಹತಾಷೆ ಕಾದಿತ್ತು ತಲುಪುವ ಗಮ್ಯ ಬಹಳ ದೂರವಿತ್ತು ನಗುವಿನ ಬುತ್ತಿಯೂ ಖಾಲಿಯಾಗುತ್ತಿತ್ತು ನೆನಪಿನ ತಂಗುದಾಣವೂ ಎಲ್ಲೂ ಕಾಣದಂತಾಗಿತ್ತು... ಕೊನೆಗೂ ನಾನು ಸೋಲಲಿಲ್ಲ ಮನದಲ್ಲಿ ಚಿಗುರಿದ ಆಸೆಯ ಕುಡಿ ಬಾಡಲಿಲ್ಲ ದೂರದಲ್ಲಿ ಅವಳನ್ನು ಕಂಡಂತೆ ಭಾಸವಾಯಿತು ನನಗಾದ ಖುಷಿಗೆ ಮನವು ಕುಣಿಯುತ್ತಿತು.... ನನ್ನನ್ನು ನೋಡಿ ಆಕೆ ಅಚ್ಚರಿಗೊಂಡಳು ನನ್ನೆಡೆಗೆ ಓಡಿಬಂದು ನನ್ನನಪ್ಪಿ ಕಣ್ಣೀರಿಟ್ಟಳು ತಾನು ಮಾಡಿದ ತಪ್ಪಿಗೆ ತನ್ನನ್ನೇ ಬೈದುಕೊಂಡಳು ತಪ್ಪಿಗೆ ಪ್ರಾಯಶ್ಚಿತವಾಗಿ ನನ್ನೊಡನೆ ಬರಲೊಪ್ಪಿಕೊಂಡಳು... ಪರಿಚಿತವಾದ ದಾರಿಯಲ್ಲಿ ನನ್ನವಳ ಕೈ ಹಿಡಿದು ಹೊಸ ಹೊಸ ಆಸೆಗಳೊಂದಿಗೆ ಹೊಸ ಹುರುಪಿನಲಿ ಹರುಷದಿಂದ ಹೊರಟಿರುವೆ ಹೊಸ ಗುರಿಯೆಡೆಗೆ...

ಭಾನುವಾರ, ಆಗಸ್ಟ್ 25, 2013

1) ಕೈಯಲ್ಲಿತ್ತು ಅಂದು ಒಡೆದ ಕನಸಿನ ಕನ್ನಡಿಯ ಒಂದು ಚೂರು.. ನನ್ನಿಂದ ದೂರಾಗಿ ನೀ ಸೇರಿದಾಗ ಕಣ್ಣಿಗೆ ಕಾಣದ ದೂರದೂರು... 2) ನಿನ್ನೆಯಿಂದ ನನ್ನ ಬಾಳಿನಲ್ಲಿ ನನ್ನ ಪ್ರೀತಿಯ ಸತ್ತ ಸೂತಕ... ಮರೆಯಲಾಗದ ನಿನ್ನ ನೆನಪಲಿ ಮುಳುಗಿ ಮನಸ್ಸಾಗಿದೆ ಇಂದು ಭಾವುಕ...'' 3) ನನ್ನ ಈ ಮನದ ಆಗಸದಲ್ಲಿ,, ನಿನ್ನ ಕಹಿ ನೆನಪಿನ ಕಾರ್ಮುಗಿಲು ಕವಿದು.. ಖುಷಿಯ ಕಾಮನಬಿಲ್ಲು ಕಾಣೆಯಾಗಿ,, ಕಣ್ಣೀರ ಮಳೆಯು ಸುರಿಯುತಿಹುದೆಂದ ಪ್ರದೀಪ.... 4) ಆ ದಿನ ಯಾಕೆ ನೀನಾದೆ ನನ್ನಿಂದ 'ಅಗೋಚರ', ಅಂದಿನಿಂದ ನನ್ನ ಮನಸಾಗಿದೆ 'ನಿಶಾಚರ', ಏನೋ ಗೊತ್ತಿಲ್ಲಾ ಕಂಡಿದ್ದೆಲ್ಲಾ ಅನಿಸುತಿದೆ 'ಅಬ್ರಕದಬ್ರ', ನನ್ನಾಣೆಗೂ ನಿನ್ನ ಪ್ರೀತಿಸುವೆ 'ಇದು ಸತ್ಯ' ನನ್ನ ಪ್ರೀತಿಯನ್ನು ಕೆಣಕಲು ಯಾರಾದರೂ ಕೇಳಿದರೆ 'ಹೀಗೂ ಉಂಟೇ'..? 'ಕ್ರೈಂಡೈರಿ'ಯಲ್ಲಿ ಅವರ ಕಥಾಯಾಗುತ್ತದೆ 'ಕ್ರೈಂಸ್ಟೋರಿ' ಹಾಗಂತಾ ನಮ್ಮ ಪ್ರೀತಿನಾ 'ಗಲ್ಲಿ ಗಾಸಿಪ್' ಥರ 'ನೀವು ಹೇಳಿದ್ದು ನಾವು ಕೇಳಿದ್ದು' ಅಂತ 'ಸಿಂಗ್ರಿ ರೌಂಡ್ಸ್' ಗೆ ಬಂದಾಗ ಹೇಳಬಾರದು, ಇದು ನನ್ನ 'ಕಟ್ಟೆಚ್ಚರ'...... ಆದ್ರೂ ಗೆಳೆಯರೇ ಈ ಪ್ರೀತಿ ಅನ್ನೋದು 'ಜೇಡರ ಬಲೆ' ಅಂದ್ಕೊಂಡಿದ್ದೆ ಆದ್ರೆ ಇದು 'ಚಕ್ರವ್ಯೂಹ' ಅಂತ ಇವತ್ತೇ ಗೊತ್ತಾಗಿದ್ದು....!!!!!! 5) ದಯವಿಟ್ಟು ಸಾಕು ಮಾಡು ಈ ನಿನ್ನ-ನನ್ನ ಪ್ರಶ್ನೋತ್ತರ... ನಿನ್ನ ಮುಗ್ಧ ಪ್ರಶ್ನೆಗೆ ನಾನಾಗಿರುವೆ ಈಗ ನಿರುತ್ತರ... ನಿನ್ನೀ ಅತಿಯಾದ ಪ್ರೀತಿ, ಕಾಡುತಿದೆ ನನ್ನ ನಿರಂತರ... ಆದರೆ ನಮ್ಮಿಬ್ಬರ ನಡುವೆ ಬಂದು ಒಂದು ಮಧ್ಯಂತರ.., ನಿನ್ನ ಕಳೆದುಕೊಳ್ಳುವ ಭಯದಲ್ಲಿ ನನ್ನ ಮನಸಾಗಿದೆ ತತ್ತರ... 6) ...ಮನಸ್ಸೆಂಬ ಮರುಭೂಮಿಯಲ್ಲಿ ನೀರಿನಂತೆ ಚಿಮ್ಮಿದವಳು ನೀನು... ...ಸುಡುವ ಬಿರುಬಿಸಿಲಲ್ಲೂ ತಂಪಾದ ತಂಗಾಳಿಯಾದವಳು ನೀನು... ...ರಾಗವನ್ನೇ ಮರೆತಿದ್ದ ನನ್ನ ಜೀವನಕ್ಕೆ ನವಪಲ್ಲವಿಯಾದವಳು ನೀನು... ...ಮಂಕಾಗಿದ್ದ ನನ್ನ ಕಲ್ಪನೆಗಳಿಗೆ ಹೊಳಪು ತಂದವಳು ನೀನು... ...ಈ ಕವನದಲ್ಲಿ ಮೂಡಿದ ಪದಗಳಿಗೆ ಸ್ಪೂರ್ತಿಯಾದವಳು ನೀನು...

ಸೋಮವಾರ, ಜುಲೈ 22, 2013

ಚೆಲುವೆ

...ಚೆಲುವೆ... ಈ ನನ್ನೆದೆಯಲ್ಲೊಂದು ಪುಟ್ಟ ಗೂಡು.. ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು.. ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ, ನಿನ್ನ ನೆನಪುಗಳೇ ಇದರ ಅಡಿಪಾಯ.. ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ.. ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು.. ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು.. ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ.. ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....
...ಚೆಲುವೆ... ಈ ನನ್ನೆದೆಯಲ್ಲೊಂದು ಪುಟ್ಟ ಗೂಡು.. ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು.. ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ, ನಿನ್ನ ನೆನಪುಗಳೇ ಇದರ ಅಡಿಪಾಯ.. ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ.. ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು.. ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು.. ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ.. ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....

ಶನಿವಾರ, ಜುಲೈ 20, 2013

ಚೆಲುವೆ...

ಚೆಲುವೆ...

ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...

ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...

ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...