ಶುಕ್ರವಾರ, ನವೆಂಬರ್ 4, 2011

(ತಮಿಳು ಚಿತ್ರ ''ಪಯ್ಯಾ'' ದ 'ಸುತ್ತುದೇ ಸುತ್ತುದೇ ಭೂಮಿ'
ಹಾಡಿನ ಧಾಟಿಯಲ್ಲಿ ನನ್ನ ಪ್ರಯತ್ನ ತಪ್ಪಿದ್ದಲ್ಲಿ ತಿದ್ದಿರಿ...)


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ರಾರಾರೆ ರಾರೆ ರಾರೆ ರಾರೇ
ಚೆಲುವೆಯೇ ಬಾರೇ..
ಈ ನನ್ನ ಪಾಡು ನೋಡಿ ನೋಡಿ
ನಗದಿರು ತಾರೆ..|

|ಏನೋ ಕಾಣೆ ನಿನ್ನ ನೋಡಿ ಮನಸಲಿ ಆಸೆ ಮೂಡಿತೀಗ..
ಏನೋ ಕಾಣೆ ನಿನ್ನ ಕಂಡ ಕನಸಿಗೆ ಜೀವ
ಬಂದಿತೀಗ.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ಆ ತುಂಟ ತುಂಟ ನಗುವಿನಲ್ಲೇ ಕಾಡುವೆ
ನೀ ಕಾಡುವೇ...
ನಿನ್ನ ಕಣ್ಣ ಸೆಳೆತದಲ್ಲೇ ಕೊಲ್ಲುವೆ ನನ್ನ ಕೊಲ್ಲುವೇ..
ಅಂತು ಇಂತು ನಿನ್ನ ಪ್ರೀತಿ ಪಡೆಯಲು... ಅಂತ್ಯದಲ್ಲಿ ನಾನು ಸಫಲನಾದೆನಾ.?
ಏನೂ ತಿಳಿಯದೇ ನನ್ನ ಹಣೆಯ ಚಚ್ಚಿಕೊಂಡೆನೇ..|


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ಒಂದುಸುಂದರ ದಿನದಿ ನಿನ್ನನು ನೋಡಿದೆ
ನಾ ನೊಡಿದೆ..
ಏನೋ ತಿಳಿಯದೇ ನಿನ್ನ ಚೆಲುವಿಗೆ ಸೋತೆನು
ನಾ ಸೋತೆನು.
ಹಾಗೋ ಹೀಗೋ ಇದ್ದೆ ನಾನು ಬದುಕುತಾ..
ನಿನ್ನ ಕಂಡು ಆದೆ ನಾ ನಿನ್ನ ಭಕುತ..
ಎಂಥಾ ಮೋಡಿ ಮಾಡಿ ನೀನು ಮಾಯವಾದೆಯೇ.|

ಹೇ....


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ರಾರಾರೆ ರಾರೆ ರಾರೆ ರಾರೇ
ಚೆಲುವೆಯೇ ಬಾರೇ..
ಈ ನನ್ನ ಪಾಡು ನೋಡಿ ನೋಡಿ
ನಗದಿರು ತಾರೆ..|

|ಒಮ್ಮೆ ನೀನು ನನ್ನ ಪುಟ್ಟ ಎದೆಯಲಿ ಬಂದು
ವಾಸವಾಗು..
ಅಷ್ಟು ಸಾಕು ನನ್ನ ಜೀವ ನಿನಗಾಗಿ ಎಂದೂ
ನೆನಪಿರಲಿ.|

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ