ಶನಿವಾರ, ನವೆಂಬರ್ 5, 2011

.....''ನನ್ನ ನಲ್ಲ''......

(ಮೊದಲ ಸಲ ಒಬ್ಬ ''ಹುಡುಗಿಯಂತೆ''
'ಥಿಂಕಿಸಿ' ಕವನ ರಚಿಸಿದ್ದಿನಿ ತಪ್ಪಾದಲ್ಲಿ ಕ್ಷಮಿಸಿ...!
specialy girls.... Sory girls....!)

|ನನ್ನ ಮನದಲಿ ಹೇಳಲು ಮಾತು
ನೂರಾರಿದೆ..
ಹೇಳಲಾಗದೇ ಎಲ್ಲಾ ತುಟಿಯಂಚಲೇ
ನಿಂತಿದೆ..
ನನ್ನ ನಲ್ಲನ ನೆನೆಯುತಾ ಈ ಮನವು
ಕಾಯುತಿದೆ.|


|ನಲ್ಲನ ಅರಸುತಾ ಪ್ರೀತಿಯ ಹುಡುಕುತಾ..
ಕಾಲವ ದೂಡುವೆ ನಾನೀಗ..
ಅವನೆಲ್ಲೇ ಸಿಕ್ಕರೂ ಹೇಗೇ ಇದ್ದರೂ..
ತಿಳಿಸಲೇಬೇಕು ನೀವೀಗ.|


|ಏನೇ ಅಂದರೂ ಕಾಟವ ಕೊಟ್ಟರೂ..
ನೀ ನನ್ನ ಜೀವ ಎಂದನಾತ..
ಒಂದೇ ಮಾತಲಿ ಮನವ ಕದ್ದು..
ಆಗಲು ಹೊರಟ ಪ್ರಾಣನಾಥ.|


|ಬಾಡಿದೆ ಭಾವ ಸೋತಿದೆ ಜೀವ..
ಅನುದಿನ ನೆನೆಯುತಾ ಅವನ್ನನ್ನೇ..
ನನ್ನೆಡೆ ಒಮ್ಮೆ ಬಂದರೆ ಅವನು..
ಕೊಡುವೆನು ನಲಿಯುತಾ ಮನಸನ್ನೇ.|


|ನನ್ನ ಮನದಲಿ ಹೇಳಲು ಮಾತು
ನೂರಾರಿದೆ..
ಹೇಳಲಾಗದೇ ಎಲ್ಲಾ ತುಟಿಯಂಚಲೇ
ನಿಂತಿದೆ..
ನನ್ನ ನಲ್ಲನ ನೆನೆಯುತಾ ಈ ಮನವು
ಕಾಯುತಿದೆ.|

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ