ಬುಧವಾರ, ನವೆಂಬರ್ 9, 2011

|ದೂರದಲ್ಲೊಂದು ಸುಂದರ ಗುಡ್ಡ...
ಮೂತಿಯಲ್ಲೊಂದು ಸಣ್ಣ ಕುರುಚಲು ಗಡ್ಡ|

|ಮಂಜು ಮಸುಕಿದ ವಾತಾವರಣದಲ್ಲಿ
ಏನೂ ಕಾಣದಷ್ಟು ಮಬ್ಬು...
ಎರಡು ದಿನದಿಂದ ಸ್ನಾನ ಮಾಡದೇ
ದೇಹದಲ್ಲಿ ಬೆವರು ವಾಸನೆಯ ಗಬ್ಬು|

|ನಾನು ತಿಳಿದಿದ್ದೆ ನಾನಂದುಕೊಂಡಷ್ಟು
ಸುಂದರಿಯಲ್ಲ ನನ್ನವಳು...
ಆದರೆ ನಾನು ಮೂರ್ಛೆ ಹೋದೆ,
ಕಂಡಾಗ ಅವಳ ಹಳದಿ ಬಣ್ಣದ ಹಲ್ಲುಗಳು|

|ಕಾಣುತಿದೆ ಅಲ್ಲೊಂದು ಸುಂದರ ಪುಟ್ಟ ಊರು...
ಮಾಮೂಲಿ ಕವನ ಗೀಚಿ ನನಗೀಗಾಗಿದೆ ಬೋರು|

|ಈ ತರಹದ ಶೈಲಿ ನನ್ನಹೊಸ ಪ್ರಯತ್ನ...
ಕವಿ ಮನಸಿಗೆ ನೋವಾದಲ್ಲಿ ನಿಲ್ಲಿಸುವೆ ಈ ಯತ್ನ...

1 ಕಾಮೆಂಟ್‌:

  1. ನಿಜವಾದ ಅನಿಸಿಕೆ... ಇದು ಒಂದು ಸಾಕು...
    ಅಥವಾ ಇನ್ನು ಒಂದನ್ನು ಮಾತ್ರ ಈ ರೀತಿ ಬರೆಯಬಹುದು...
    ಅತಿಯಾದ ಪ್ರಯತ್ನ ಈ ರೀತಿ ಬೇಡ.. ಕವಿತೆಯಲ್ಲಿ ಒಂದು ಅಥವಾ
    ಎರಡೇ ವಿಷಯ ವಸ್ತುಗಳು ಇದ್ದರೆ ಚೆನ್ನ.. ಈ ಶೈಲಿ ಯಾಕೋ ಇಷ್ಟ
    ಆಗುತ್ತಿಲ್ಲ ಓದಲು.. ಮತ್ತು ಅದರಲ್ಲಿ ಸರಿಯಾದ ಭಾವಾರ್ಥವು ಸಿಗುವುದಿಲ್ಲ..
    ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ... ಮತ್ತೆ ಮುಂದಿನದು ನಿಮ್ಮ ಇಷ್ಟ... :)

    ಪ್ರತ್ಯುತ್ತರಅಳಿಸಿ