ಗುರುವಾರ, ಡಿಸೆಂಬರ್ 29, 2011

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ ತಪ್ಪಾದರೇ ಕ್ಷಮಿಸಿ ತಿದ್ದಿ ಹೇಳಿ..

"ನೋಡಿ ನಾವೇ ನಮ್ ಸ್ವಂತ ಬುದ್ಧಿ ಉಪಯೋಗ್ಸಿ ಒಂದು ಕವನ ಬರೆದರೆ, ನಮ್ಗೂ ಬರೆಯೋಕೆ ಬರುತ್ತೆ ಅಂತಾ ಗೊತ್ತಾಗುತ್ತೆ, ಇನ್ನೂ ಬರಿಬೇಕು ಅನ್ನೋ ಆಸೆ ಹುಟ್ಟತ್ತೆ..
ಅಬ್ಬಬ್ಬಾಂದ್ರೆ ಏನ್ರೀ ಒಂದಿಷ್ಟು ಲೈಕ್ ಕಮ್ಮಿ ಬೀಳುತ್ತೆ, ಯಾರಾದ್ರೂ ತಿಳ್ದೋರು ತಪ್ಪನ್ನ ತಿದ್ಕೊಳೋಕೆ ಹೇಳ್ತಾರೆ...."

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ನಾನಿಲ್ಲಿ ಏನಕ್ಕೆ ಬಂದಿದಿನಿ ಗೊತ್ತಾ.?
ನಂಗೂ ಬರ್ಯೋಕೆ ಬರುತ್ತೆ ಅಂತಾ ತೋರ್ಸೊದಿಕ್ಕೆ...")

 
ಸೆಲೆಬ್ರೇಟ್ಟಿ ಅಪ್ಪುಡೇಟಿಗೆ ನೂರೇಂಟು ಲೈಕು..
ನಮ್ಮ ಕವನ ಪೋಸ್ಟು ಆದರೆ ಬರೋದೆಲ್ಲಾ ಮಾರ್ಕು..
ಹೆಚ್ಚಾದರೆ ಹೊಡಿರಿ ಬುಡಕ್ಕೆ..
ಸರಿಯಾದರೆ ತಟ್ಟಿರಿ ಭುಜಕ್ಕೆ...
ಮಾತ್ರೆಯಿಲ್ಲದ ಕವನಾ ಸರಿಯಿಲ್ಲಾ.....

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ಅದೇನೋ ಅಂತಾರಲ್ಲಾ ಬಂದ್ರೆ ಬಾಗಿಲು ಹೋದ್ರೆ ಕೂದಲು" ಹಾಗೆನೇ)

 
ಮನಸಿಲ್ಲದೇ ಏನಾದರೂ ಕವನ ಬರೆಯಬೇಡಿ..
ಮತಿಯಿಲ್ಲದೇ ಯಾರಾದರೂ ಕಾಪಿ ಹೊಡೆಯಬೇಡಿ...
ಧಮ್ಮಿದ್ದರೆ ಬರೀರಿ ಸ್ವಂತದ್ದು..
ಇಲ್ಲಾಂದ್ರೆ ಸುಮ್ನಿರಿ ನೀವೆಂದೂ...
ಕದ್ದ ಕವನಾ ಎಂದೂ ನಿಮದಲ್ಲಾ......

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
(ಈಗ ಏನಾಗುತ್ತೆ ಅಂದ್ರೆ ಪ್ರಕಾಶ್ ಶ್ರೀನಿವಾಸ್ ಅವರ ವಿಷ್ಯದಲ್ಲಾಯ್ತಲ್ಲಾ ವಾದ-ವಿವಾದ,
ಅಯ್ಯೋ ಅದೇಲ್ಲಾ ಹಳೆ ವಿಷ್ಯಾ ಬಿಟ್ಟಾಕಿ.....)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ