ಶನಿವಾರ, ಡಿಸೆಂಬರ್ 31, 2011

ಓ ಮನಸೇ .....

ಓ ಮನಸೇ ಓ ಮನಸೇ ಹೀಗೇಕೆ ಕಾಡುವೆಯೇ..?
    ಓ ಕನಸೇ ಓ ಕನಸೇ ನನ್ಯಾಕೆ ಕೊಲ್ಲುವೆಯೇ..?
ನೀನು ದೂರ ಹೊದ ಮೇಲೆ,
             ಹೇಗೆ ಅಂತ ಇರಲಿ ನಾನು.?
ನೀನೇ ಹೇಳು ಓ ನನ್ನ ಪ್ರಾಣವೇ... (೧)


ಓ ಗಿಣಿಯೇ ಓ ಗಿಣಿಯೇ ನೀನ್ಯಾಕೆ ಮರೆಯಾದೆ..?
    ನಾ ನಿನಗೆ ನಾ ನಿನಗೆ ಈಗ್ಯಾಕೆ ಹೊರೆಯಾದೆ..?
ನಿನ್ನ ಮುದ್ದು ಪ್ರೀತಿ ನಂಬಿ,
      ನಾನು ಇಂದು ಮೋಸ ಹೋದೆ.?
ಹೀಗೇಕಾಯ್ತು ಹೇಳೆ ಓ ಪ್ರಾಣವೇ....? (೨)


ಓ ಬೆಡಗಿ ಓ ಬೆಡಗಿ ಎಲ್ಲಿರುವೇ ನನ್ನ ನೀಮರೆತು..?
   ಬಾ ನೋಡು ನಾನಿನಗೆ ಕೇಳಿಸುವೆ ನನ್ನ ಎದೆಮಾತು...
ನೀನು ಎಲ್ಲೇ ಹೇಗೆ ಇದ್ರೂ,
         ನಾನು ನಿನ್ನ ಪ್ರೀತಿ ದಾಸ..
ಇದೇ ಸತ್ಯ ಕೇಳೆ ಓ ಪ್ರಾಣವೇ.....(೩)

1 ಕಾಮೆಂಟ್‌:

  1. ಅತ್ಯಮೋಘ ಲಯ ಮತ್ತು ಭಾವ ತೀವ್ರತೆ. ಉತ್ತಮ ಗಾಯಕನ ಕೈಯಲ್ಲಿ ಸಿಕ್ಕರೆ ಪಕ್ಕದ ಮನೆಯವಳು ಥಟ್ಟನೆ ವಾಲುವಳು ಅವನ ಕಡೆಗೆ!

    ಪ್ರತ್ಯುತ್ತರಅಳಿಸಿ