ಶನಿವಾರ, ಡಿಸೆಂಬರ್ 17, 2011

""ನನ್ನ ಕವನ""

ಹಾಳಾದ್ ದಿಲ್ ನಿನ್ನನ್ನೇ ಕೇಳ್ತು..
          ನಾನೇನ್ಮಾಡ್ಲಿ ನೀ ಹೇಳು ಚೈತು..
ನೀನಂತೂ ಇಲ್ಲಾ ನನ್ನಲ್ಲಿ ಇಂದು..
                  ನಾನಿನ್ನ ಹುಡುಕಲಿ ಎಲ್ಲೇಲ್ಲಿ ಎಂದು.? (1)


ನೀ ನನ್ನ ಪ್ರಾಣ ಅಂತ ನೀನೇ ಹೆಳಿದೆ ಅಂದು..
     ಆದರೆ ಯಾಕೆ ಕೋಪ ಈ ಪ್ರಾಣದ ಮೇಲೆ ಇಂದು.?
ಆ ದಿನ ನನ್ನದೆಯಲ್ಲಿ ನೀನೇ ಪ್ರೀತಿಯ ಬಳ್ಳಿ ಹಬ್ಬಿಸಿದೆ..
     ಆದರೀದಿನ ನೀನೇ ಯಾಕೆ ಚಿಗುರುವ ಮುನ್ನವೇ ಕತ್ತರಿಸಿದೆ.? (2)


ನಗುವ ನಯನ ಅಂತ ಯುಗಳಗೀತೆ ಹಾಡಿ ನನ್ನ ಅಟ್ಟಕ್ಕೇರಿಸಿದೆ..
               ಪ್ರೀತಿ ಮಧುರ ತ್ಯಾಗ ಅಮರ ಅಂತ ನೀನನ್ನ ಹಳ್ಳಕ್ಕೆ ತಳ್ಳಿದೆ..
ಆದರೂ ನಾನು ನನಗಿಂತ ಹೆಚ್ಚು ನಿನ್ನ ಪ್ರೀತಿಸಿದೆ..
        ಕಾರಣವಿಲ್ಲದೇ ಯಾಕೆ ನೀನನ್ನ  ನಿನ್ನಿಂದ ದೂರವಾಗಿಸಿದೆ..? (3)


ಕೋಗಿಲೆಯಂತ ನಿನ್ನ ಧ್ವನಿ ಕೇಳಿ ನನ್ನ ನಾ ಮರೆತಿದ್ದೆ..
          ಕೋಗಿಲೆಯೇ ಗಿಡುಗನಾಗಿ ನನ್ನೆದೆಯ ನೀ ಕುಟುಕಿದ್ದೆ..
ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..
      ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ..(4)

ಇದೇನಾ ಪ್ರೀತಿ ಇದೇನಾ ಪ್ರೇಮ.?
             ಪ್ರೀತಿ ಹೆಸರಲಿ ಗೆದ್ದಾಗಿತ್ತು ಕಾಮ..
ಕೊನೆಗೂ ನನ್ನ ಏಕಾಂಗಿಯಾಗಿ ಬಿಟ್ಟು ಹೋದೆ ನೀ ಒಂದುದಿನ..
           ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ.. (5)

5 ಕಾಮೆಂಟ್‌ಗಳು:

 1. ಒಳ್ಳೆಯ ಕವನ.

  ಚೈತು ಯಾಕಿಷ್ಟು ಹಿಂಡುತೀಯಮ್ಮ? ಪ್ರೀತಿಗೆ ಶರಣಾಗಿ ಬಿಡು.

  ನನ್ನ ಬ್ಲಾಗಿಗೆ ಸ್ವಾಗತ:
  www.badari-poems.blogspot.com
  www.badari-notes.blogspot.com

  ಪ್ರತ್ಯುತ್ತರಅಳಿಸಿ
 2. ಪ್ರೀತಿಸಿದ ಪ್ರೀತಿಯೆ ಇಲ್ಲಿ ಕನಸಾಗಿ ಕನವರಿಸಿದೆ.ಒಡಲಾಳದಲ್ಲಿನ ತುಮುಲವಂತೂ ಹೇಳ ತೀರದು.ಚಕ್ರವಾಕ ಪಕ್ಷಿಯ ವಿರಹವೇದನೆಯಂತೆ ಪ್ರೀತಿ ದೂರಾಗಿ ಅದರ ನೆರಳು ಕಂಪಿಸುತ್ತಿರುವುದು.ಆದರೆ ಪ್ರೀತಿಯ ಸೋಗಿನಲ್ಲಿ ಪರ ಪುರುಷನ ಅಪ್ಪಿಕೊಂಡ ಸಖಿಯ ಮನಸು ಅತ್ಯಂತ ಸ್ವಾರ್ಥವಾಗಿದೆ.ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ....ಎಂದ ುಆಲಾಪಿಸುತ್ತಿರುವ ಪ್ರೇಮಿಯ ಮನಸ್ಸಂತೂ ಘಾಸಿಗೊಂಡು ವೇದಿಸುತ್ತಿರುವುದು.ಆದರೂ ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ...ಎನ್ನುವ ಮನದ ಹಂಬಲಿಕೆ ಇಷ್ಟವಾಗುವುದಿಲ್ಲ.ನನ್ನ ಬಿಟ್ಟಾದರೂ ನೀ ಅವನಲ್ಲಿ ಸುಖವಾಗಿರು ಎನ್ನುವ ತ್ಯಾಗದ ಸ್ಪರ್ಷ ಕವಿತೆಯಲ್ಲಿ ಹರಿದಾಡಬೇಕಿತ್ತು ಎಂಬ ಆಶಯ ಮೂಡುವುದು.ಸುಂದರ,ಮನೋಹರ ಕವಿತೆ ಇಷ್ಟವಾಯಿತು.

  ಪ್ರತ್ಯುತ್ತರಅಳಿಸಿ
 3. ಚೆಂದದ ಸಾಲುಗಳು ಪ್ರದೀಪ್... ಇದು ನಿಮ್ಮ ಬ್ಲಾಗಿಗೆ ಮೊದಲ ಭೇಟಿ ಇಷ್ಟವಾಯ್ತು!

  ಪ್ರತ್ಯುತ್ತರಅಳಿಸಿ