ಗುರುವಾರ, ಜನವರಿ 5, 2012

""ಒಂದರಿಂದ ಒಂದರವರೆಗೆ""

ಹೊಸ ಪ್ರಯತ್ನ... ಫಲ ನೀಡಿ ಆಶಿರ್ವದಿಸಿ...

  ""ಒಂದರಿಂದ ಒಂದರವರೆಗೆ""

ಒಂದೆರಡು ಸಲದ ಭೇಟಿ,

ಮೂರ್ನಾಲ್ಕು ಸಲ ಮಾಡಿದ ದೂರವಣಿ ಕರೆ,

ಐದಾರು ಮಾತುಗಳಲ್ಲೇ ಅವಳಲ್ಲಿ ಸ್ನೇಹವಾಯಿತು.

ಏಳಂಟು ದಿನದಲ್ಲಿ ಆ ಸ್ನೇಹ ಪ್ರೇಮಕ್ಕೆ ವಾಲಿತು.

೯-೧೦ ಜನರಿದ್ದ ಅವಳ ಮನೆಯಲ್ಲಿ ಒಪ್ಪಿಸಿ,

೧೧-೧೨ ದಿನಗಳ ಕಾಲ ತಿಕ್ಕಾಡಿ ಕಿತ್ತಾಡಿ ನಮ್ಮನೆಯವರನೆಲ್ಲಾ ಒಪ್ಪಿಸಿದೆ.

೧೩ನೇ ದಿನ ನೀನನಗೆ ಜೋಡಿಯಲ್ಲವೆಂದು ಅವಳಂದಾಗ,

ನನಗಾಗ ನಿಂತಲ್ಲೇ ನನ್ನದೇ ೧೪ನೇ ದಿನದ (ವೈಕುಂಟ)ಸಮಾರಾಧನೆಯಾದಂತೆ ಭಾಸವಾಯಿತು.

೧೫ನೇ ದಿನ ಅವಳನ್ನು ವಿಚಾರಿಸಲು ನನ್ನ ೧೬-೧೭ ಮಂದಿ ಸ್ನೇಹಿತರು ಮುಂದಾದಾಗ,

ಅವಳಿಗಿನ್ನು ೧೮ರ ಬಾಲ್ಯಬುದ್ಧಿಯೆಂದು ಅವರನ್ನು ಸಮಾಧಾನಿಸಿದೆ.

೧೯ನೇ ದಿನ ಮನದ ಕಾಟ ತಾಳಲಾರದೇ ಅವಳ ಹುಡುಕುತಾ ಹೊರಟಾಗ,

೨೦-೨೧ ಐಶರಾಮಿ ಕಾರು ನಿಂತಿರುವುದನ್ನು ಕಂಡು,

೨೨-೨೩ ದಿನಗಳವರೆಗೂ ಕೇವಲ ಹಣಕ್ಕಾಗಿ ಪ್ರೀತಿಯೇ ಎಂದು ಯೋಚಿಸುತ್ತಿದ್ದೆ,

೨೪ನೇ ದಿನಾಂಕದಂದು ಅವಳ ಮದುವೆಯೆಂದು ಗೊತ್ತಾದಾಗ,

ನನ್ನ್ನೆದೆಯ ಕೋಣೆಯಲ್ಲಿ ನನ್ನೀ ಮನ ೨೫ ಸಲ ಕಣ್ಣೀರಿಟ್ಟಿತ್ತು.

೨೬-೨೭ ಈ ಎರಡು ದಿನ ಅವಳ ಬಗ್ಗೆ ಚಿಂತಿಸಿ,

೨೮ನೇ ದಿನ ಅವಳನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿ,

೨೯ರಂದು ನಾ ದೂರದ ಊರಿಗೆ ತೆರಳಿದಾಗ,

೩೦-೩೧ ಜನರಿದ್ದ ಆ ಬಸ್ಸಿನಲ್ಲಿ ಮತ್ತೊಮ್ಮೆ ನನ್ನ ಮನವ ಕದಿಯಲು ಹವಣಿಸುತ್ತಿತ್ತು,
ರೂಪಸಿಯೊಬ್ಬಳ 'ಒಂದು' ಜೋಡಿ ನಯನಗಳು..........

1 ಕಾಮೆಂಟ್‌: