ಸೋಮವಾರ, ಜುಲೈ 22, 2013
...ಚೆಲುವೆ...
ಈ ನನ್ನೆದೆಯಲ್ಲೊಂದು ಪುಟ್ಟ ಗೂಡು..
ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು..
ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ,
ನಿನ್ನ ನೆನಪುಗಳೇ ಇದರ ಅಡಿಪಾಯ..
ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ..
ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು..
ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು..
ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ..
ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....
ಶನಿವಾರ, ಜುಲೈ 20, 2013
ಚೆಲುವೆ...
ಚೆಲುವೆ...
ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...
ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...
ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...
ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...
ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...
ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...
ಬುಧವಾರ, ನವೆಂಬರ್ 28, 2012
"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..
"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..
ಬುಧವಾರ, ಆಗಸ್ಟ್ 22, 2012
ಯಾರವಳು..??!!
ಕರಗಳಿಗೆಟುಕದ ಅಂಬರದ ತಾರೆ ಅವಳು..
ಕಣ್ಣಿಗೆ ಕಾಣದ ಸುಂದರ ಮಾಯೆ ಅವಳು..
ಮಾತಲಿ ಬಣ್ಣಿಸಲಾಗದ ಚೆಲುವೆ ಅವಳು..
ಯಾರೂ ದ್ವೇಷಿಸಲಾಗದ ಮುಗ್ಧೆ ಅವಳು..
ಮನಸಲಿ ಪೂಜಿಸುವ ದೇವತೆ ಅವಳು..
ಕನಸನೇ ಕದಿಯುವ ತುಂಟ ಕಳ್ಳಿ ಅವಳು..
ನನ್ನುಸಿರಲಿ ಆವರಿಸಿರುವ ಮಿಂಚು ಅವಳು..
ಕಾರಣ ಇಲ್ಲದೇ ಮೂಡಿದ ಪ್ರೀತಿ ಅವಳು..
ಕವಿಯಾಗುವವರಿಗೆ ಸ್ಪೂರ್ತಿಯ ಚಿಲುಮೆ ಅವಳು..
ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ಕಾಡುವವಳು..
ಯಾರವಳು ಯಾರವಳೂ ಯಾರೋ ಅವಳು..
ಕಣ್ಣಿಗೆ ಕಾಣದ ಸುಂದರ ಮಾಯೆ ಅವಳು..
ಮಾತಲಿ ಬಣ್ಣಿಸಲಾಗದ ಚೆಲುವೆ ಅವಳು..
ಯಾರೂ ದ್ವೇಷಿಸಲಾಗದ ಮುಗ್ಧೆ ಅವಳು..
ಮನಸಲಿ ಪೂಜಿಸುವ ದೇವತೆ ಅವಳು..
ಕನಸನೇ ಕದಿಯುವ ತುಂಟ ಕಳ್ಳಿ ಅವಳು..
ನನ್ನುಸಿರಲಿ ಆವರಿಸಿರುವ ಮಿಂಚು ಅವಳು..
ಕಾರಣ ಇಲ್ಲದೇ ಮೂಡಿದ ಪ್ರೀತಿ ಅವಳು..
ಕವಿಯಾಗುವವರಿಗೆ ಸ್ಪೂರ್ತಿಯ ಚಿಲುಮೆ ಅವಳು..
ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ಕಾಡುವವಳು..
ಯಾರವಳು ಯಾರವಳೂ ಯಾರೋ ಅವಳು..
ಮಂಗಳವಾರ, ಆಗಸ್ಟ್ 21, 2012
ಸೋಮವಾರ, ಆಗಸ್ಟ್ 20, 2012
***ನನ್ನವಳು***
ಮನಸಲಿ ನಲಿದಾಡಿ..
ಕನಸಲಿ ಕುಣಿದಾಡಿ..
ನನ್ನ ಮೈಮನ ಮರೆಸಿದ ಹೆಣ್ಣು ನೀನು..
ಕೈ ಹಿಡಿದು ಮುದ್ದಾಡಿ..
ಮಡಿಲಲ್ಲಿ ಮಗುವಾಗಿ..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..
ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..
ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..
ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..
ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..
ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..
ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..
ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..
ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..
ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..
ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)