ಬುಧವಾರ, ಸೆಪ್ಟೆಂಬರ್ 14, 2011

ಮನಸು ಜಾರುತಿದೆ
ಕನಸು ಕಾಡುತಿದೆ
ನಾನಿನ್ನ ಕಂಡಾಗಲೇ...
ಯಾಕೆ ಹೀಗಾಯ್ತೊ
ಎಲ್ಲಿ ಏನಾಯ್ತೊ
ನೀ ಸೇರು ನನ್ನೀಗಲೇ...
ಏನೂ ತೋಚದೇ ನಾನು
ಸೋತು ಹೋದೆನು ನಾನು
ನೀ ಒಮ್ಮೆ ನಕ್ಕಾಗಲೇ...
ನಿನ್ನ ನೊಟ ಸೆಳೆಯುತಿದೆ
ನಿನ್ನ ಮಾತು ಕೊಲ್ಲುತಿದೆ
ನೀ ಬಂದು ಸಂಭಾಳಿಸು...
ಏನೆ ಮಾಡಿದರೂ ಸರಿಯೇ
ಹೇಗೆ ಕಾಡಿದರೂ ಸರಿಯೇ
ನೀ ಒಮ್ಮೆ ನನ್ನ ಪ್ರೀತಿಸು...
ಏನು ಅರಿಯದ ನಾನು
ಒಬ್ಬ ದಡ್ಡನು ನಾನು
ನಿನ್ನ ಮೋಡಿಗೆ ಮರುಳಾದೆನಾ..?
ಈ ಪ್ರೀತಿ ಪಯಣದಲಿ
ಕವನ ಬರೆಯುತಲಿ
ನಾನೀಗ ಕವಿಯಾದೆನಾ..?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ