ಮಂಗಳವಾರ, ಸೆಪ್ಟೆಂಬರ್ 20, 2011

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನಸಾಗಿದೆ ಇಂದು ನಿನ್ನ ಕಂಡು ಚಂಚಲ...
ನಿನಗೂ ಆ ಖುಷಿಯ ಒಂಚೂರು ಹಂಚಲಾ...
ನಿನ್ನ ನಗುವ ಕಂಡು ನನಗಾಗಿದೆ ಗೊಂದಲ...
ನನ್ನ ಪ್ರೀತಿಯ ಒಪ್ಪಿಕೊ ನೀ ಒಂದ್ಸಲ...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನದಲಿ ಸಂಚಲನ ಮೂಡಿಸಿದ ಮಿಂಚು ನೀನು...
ಸುಡು ಬಿಸಿಲಲ್ಲೂ ಕರಗದ ಮಂಜು ನೀನು...
ಎದೆಯಾಳದಿ ಮೂಡಿದ ಸಂಗೀತ ಸ್ವರ ನೀನು...
ನಿನ್ನಿ0ಗಿತ ಅರಿಯದೇ ಸೋತು ಬಳಲಿದೆ ನಾನು...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ