ಗುರುವಾರ, ಸೆಪ್ಟೆಂಬರ್ 22, 2011

(ಯೋಗರಾಜ್ ಭಟ್ ಅವರ ''ಯಾರಿಗೆ ಹೇಳೋಣ'' ಹಾಡಿನ ಧಾಟಿಯಲ್ಲಿ ನನ್ನ ಕಲ್ಪನೆ...
ಇದು ನನ್ನ ಪ್ರಥಮ ಪ್ರಯತ್ನ ತಪ್ಪಾದಲ್ಲಿ ಮನ್ನಿಸಿ..)

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..
ಕತ್ತೆತ್ತಿ ನೋಡಿದಾಗ ತುಂಬಾ ಆಳಕ್ಹ್ಕೋಗಿದ್ದೆ..
ಇದೆಲ್ಲಾ ನಂಗೆ ಬೇಕಿತ್ತಾ ಅಂತ ಚಿಂತೆಲಿ ಬಿದ್ದೆ..
ಏನೇ ಆದ್ರೂನು, ನಾ ಹೇಗೆ ಅದ್ರೂನು,
ಅಲ್ಲಿಂದ ಬರೋಕೆ ತುಂಬಾ ಟ್ರೈ... ಮಾಡ್ದೆ.. ತಪ್ಪಿಸ್ಕೊಳೊಕೆ ಆಗ್ದೆ ನಾನು ಸೋತೋದೆ...

ಥೂ....!

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..

ತುಂಬಾ ಗ್ರೇಟು ಪೋರ ಅಂತ ಅಂದ್ಕೊಂಡಿದ್ದೆ ನಾನು ಈ ಪ್ರೀತಿ ಹುಟ್ಟೊ ಮೊದ್ಲು..
ಆದ್ರೆ ಪಕ್ಕದ್ಮನೆ ಹುಡುಗಿಯೊಬ್ಬಳು ಹಾರ್ಟು ಸೇಲಾಗೋ ಥರ ಹಾಯ್ ಅಂದ್ಬಿಟ್ಳು..
ಏನಾಯ್ತು ಅಂತ ಗೊತ್ತಾಗೋ ಮೊದ್ಲೆ,, ಎಲ್ಲಿ ಬಿದ್ದೆ ಅಂತ ತಿಳಿಳೇ ಇಲ್ಲಾ...
I love u ಅಂತಾ ಹೇಳೋಣಾಂದ್ರೆ ಧೈರ್ಯ ಕೂಡ ಕೈ ಕೊಡ್ತಲ್ಲಾ..
ಆದ್ರೆ ನಾನು ಅವ್ಳಿಗೆ love uuuuu ಅಂತಾ ಹೇಳ್ದಾಗ್ಲೆಲ್ಲಾ.,
ಅವ್ಳು cho chweet ಅಂತ ಮುಖ ಸವರಿ ಹೋಗ್ತಾಳಲ್ಲಾ...?!ಏನ್ ಮಾಡ್ಲಿ ನನ್ ಲವ್ ಮ್ಯಾಕ್ಸಿಮಮ್ಮು..
butನಾನು ಕೊಟ್ಟಿಲ್ಲ ಅವ್ಳಿಗೆ ಯಾವ ಪ್ರಾಬ್ಲಮ್ಮು..

ಅವ್ಳು ಸಿಕ್ಕಿದ್ಳು'facebook'ಅಲ್ಲಿ, 'frnd reqvest'ಕಳಿಸಿಕೊಂಡು
ನಾನು ಕ್ಲೋಸಾದೆ..
ಇಬ್ರೂ ಗುರ್ತು ಪರಿಚಯ ಮಾಡಿಕೊಂಡು, Chatನಲ್ಲೇ ಕಷ್ಟಸುಖ ಮಾತಾಡ್ತಾ ಇದ್ವಿ..
ಆದ್ರೊಂದಿನ ಅವ್ಳಣ್ಣ ಅವ್ಳ'cell'ಅಲ್ಲಿ ನನ್ ನಂಬರ್ರ್ ನೋಡೆಬಿಟ್ಟ..
ಅವ್ಳತ್ರ'cell'ಕಿತ್ಕೊಂಡು ಅದ್ರಿಂದ್ಲೇ ನಂಗೆ ಅವಾಜು ಹಾಕ್ದ..
ಈ ಸಲಾನೂ ನನ್ ಲವ್ ಮತ್ತೆ ಯೆ..ಕ್ಕು..ಟ್ಟಿ ಹೋಯ್ತಲ್ರೀ..
Sorry ಅವ್ಳ ಹೆಸ್ರು ಈಗ ನಂಗೆ ನೆನಪಿಗೆ ಬರ್ತಿಲ್ವಲ್ರೀ..!

ಯಾವ ಹುಡ್ಗೀನೂ ನಂಗೆ ಸಿಗ್ತಾನೇ ಇಲ್ಲಾ..
ನಾನೇನ್ಮಾಡ್ಲಿ ಅಂತಾನೂ ಗೊತ್ತಾಗ್ತಾ ಇಲ್ಲಾ..

ಲಾಲ್ ಭಾಗಿನಲ್ಲಿ ಒಮ್ಮೆ ನಾನು ಅವಳನ್ನ ನೋಡಿ ಲೈಟಾಗಿ ಹಾಳಾಗ್ಹೋದೆ...
ಮನಸಲ್ಲಿ ಆಸೆ ಹುಟ್ಟಿ ಅವ್ಳಿಗೆ ಗುಲಾಬಿ ಕೊಟ್ಟು i love you ಅಂದೆ..

ಅವ್ಳು ಅದ್ನ ಕೋಪದಿಂದ ನೋಡಿ, ಆ ಹೂವನ್ನ ಎಸೆದೇ ಬಿಟ್ಳು..
ನನ್ನಣ್ಣಂಗೆ ಹೇಳಿ ನಿನ್ನ ಕೈಕಾಲು ಮುರೀಸ್ತಿನಿ ಅಂದ್ಳು...
ನಾನು ಅವಳಿಗೆ ಕೈಮುಗಿದು ಬೇಡ್ಕೊಂಡ್ಬಿಟ್ಟೆ ಕಣ್ರೀ..!
ಇಲ್ದಿದ್ರೆ ನನ್ನ ''ಎಮ್ಮೆಮ್ಮು'' ಹಾಳಾಗ್ಹೋಗ್ತಿತ್ತು ನೋಡ್ರಿ...!

ಏನು ಮಾಡೋದು ನನ್ನ ಲೈಫು ಇಷ್ಟೇನೆ...!
ಹುಡ್ಗೀರ ಸಬ್ಜೆಕ್ಟಲ್ಲಿeeeee
ನಂಗೆ ಸೊನ್ನೇನೆ...!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ