ಸೋಮವಾರ, ಸೆಪ್ಟೆಂಬರ್ 26, 2011

(''ಪರಮಾತ್ಮ'' ಚಿತ್ರದ
''ಹೆಸರು ಪೂರ್ತಿ ಹೇಳದೇ''
ಧಾಟಿಯಲ್ಲಿ ನನ್ನದೊಂದು ಪ್ರಯತ್ನ)


||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||

||ಮನವಿದು ಅಳುತಿದೆ ನೋಡೇ
ನೆನೆಯುತಾ ನಿನ್ನನ್ನೇ...

ಹೃದಯವು ಬಯಸಿತು ಈಗ
ನಿನ್ನಯ ನೆನಪನ್ನೇ...||

||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||


||ನಿನ್ನ ಮೊಗದ ನಸುನಗುವೇ ನನ್ನೆದೆಯ ಹಾಡಾಗಿತ್ತು...

ನನ್ನ ಕಣ್ಣು ನಾಚುತ್ತಿತ್ತು ಮುತ್ತಿಡಲು
ನೀ ನನ್ನ ತುಟಿಗೆ...||

||ನಿನ್ನ ನೋಡೊ ಮುಂಚೆ ನಾ
ಸ್ವಲ್ಪ ಒರಟ ಆಗಿದ್ದೆ...

ಈಗ ನಂಗೆ ಅನಿಸಿದೆ ನಂಗೂ
ಒಂದು ಮನಸಿದೆ...

ನಂಗೆ ಏನೋ ಆಗಿದೆ
ನೋಡು ನೀ ಈಗಲೇ...||

||ನಿನ್ನ ಮುದ್ದು ಮಾತಲ್ಲಿದೆ
ಅತಿಯಾದ ಆಕರ್ಷಣೆ....

ಪದವಿಲ್ಲದಂತಾಯಿತು ನನ್ನ ಮನದಲಿ
ನಾ ನಿನ್ನ ಹೊಗಳಲು....||


||ತುಂಬಾ ನೋವು ಆಗಿದೆ
ಒಮ್ಮೆ ಕಾಣಬಾರದೇ...

ನನ್ನ ಮತಿಯು ಕೆಡುತಿದೆ ನನಗೆ
ನೀನು ಸಿಕ್ಕದೇ...

ನಿನ್ನ ನೆನಪಲಿ ನೆನೆಯುತಾ
ಸತ್ತುಬಿಡಲೇ...?||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ