ಶುಕ್ರವಾರ, ಸೆಪ್ಟೆಂಬರ್ 16, 2011

ಮಾಘ ಮಾಸದ ತಣ್ಣನೆ ಚಳಿಯಿರಲು..
ಕೈಯಲ್ಲಿ ಬಿಸಿಬಿಸಿ ಕಾಫಿಯಿರಲು..
ಪಕ್ಕದಿ ಬೆಚ್ಚಗೆ ಮಡದಿಯಿರಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಮುಂಜಾನೆ ತಡವಾಗಿ ಎದ್ದು..
tv ಗೆ ಮುಖ ಮಾಡಿ ಕುಳಿತು..
ಮಡದಿ ಮಾಡಿದ ತಿಂಡಿಯ ತಿನ್ನಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ನಸುನಗುತಾ ಮಡದಿ ಬೀಳ್ಕೊಡಲು..
ಮನಸ್ಸಿಲ್ಲದೇ duty ಗೆ ಹೊರಡಲು..
ಸಂಜೆ ಮಲ್ಲಿಗೆಯೊಂದಿಗೆ ಅವಳ ನೋಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ವಾರಕ್ಕೊಂದು ಭಾನುವಾರ ಬರಲು..
ಮಧ್ಯಾಹ್ನದ ಅಡಿಗೆ ನಾನೇ ಮಾಡಲು..
ಸಂಜೆ ಯಾವ್ದಾದ್ರು ಸಿನೆಮಾಕ್ಕೆ ಹೋಗಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...ಮದುವೆಯಾಗಿ ವರುಷವಾಗಲು..
ಮನೆಯಲ್ಲೊಂದು ಪಾಪು ಬರಲು..
ನಮ್ಮಿಬ್ಬರಲ್ಲಿ ಹರುಷ ಮೂಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಪಾಪು ಗೆ ಐದು ವರಷವಾಗಲು..
ಸ್ಕೂಲ್ ಅಡ್ಮಿಷನ್ ಗಾಗಿ ಕಷ್ಟಪಡುತಿರಲು..
ಮನೆಯಲ್ಲಿ ಕರ್ಚುವೆಚ್ಚ ಬೆಳೆಯುತಿರಲು..
ಇಂತ ನಾಕ ಬೇಕಾ ಅಂದ ಪ್ರದೀಪ...

ಮನೆಯಲ್ಲಿ ಮಡದಿ ಸಿಡುಕುತಿರಲು..
ಆಫೀಸಲ್ಲಿ ಕೆಲಸ ಮರೆತಂತಾಗಲು..
Boss ಹತ್ರ ಉಗಿಸಿಕೊಳ್ಳಲು..
ಇಂತ ನಾಕ ಬೇಕಾ ಅಂದ ಪ್ರದೀಪ...

Bos ಮೇಲಿನ ಕೋಪವ ಮಡದಿ ಮೇಲೆ ತೋರಲು..
ಅವಳು ಬೇಸರದಿಂದ ಅಳುತ್ತಾ ಕೂರಲು..
ಕಷ್ಟವ ಮರೆಯಲು ಇವನು bar ಗೆ ಹೊರಡಲು..
ಇಂತ ನಾಕ ಬೇಕಾ ಅಂದ ಪ್ರದೀಪ...;

ಒಂದೇ ವರ್ಷಕ್ಕೆMarried life ಸಾಕೆನಿಸಲು..
ಮನೆ ಗೇ ಹೋಗೊಕೆ ಬೇಜಾರೆನಿಸಲು..
ಬೇರೊಂದು ಸಂಗಾತಿ ಬೇಕೆನಿಸಲು..
ಈ ನಾಕ ಬೇಡವೇ ಬೇಡವೆಂದ ಪ್ರದೀಪ..

ಮನ ಆಸೆ ಪಟ್ಟಂತೆ ಆಗಲು...
ಬೇರೊಬ್ಬ ಹೆಣ್ಣು ಸನಿಹಕ್ಕೆ ಬರಲು..
ಮನೆಯಲ್ಲಿ ಮರೆತ ಸಂತಸವ ಅವಳಲ್ಲಿ ಕಾಣಲು..
ಮತ್ತೆ ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

To be continued....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ