ಮಂಗಳವಾರ, ಸೆಪ್ಟೆಂಬರ್ 27, 2011

''ನಾ ಕಂಡ ಮಳೆಗಾಲದ ಒಂದು ದಿನ''

ಇದು ಮಳೆಗಾಲದಲ್ಲಿ ಒಂದು ದಿನ ನಾನು ಹಾಗು ನನ್ನ ಗೆಳೆಯ ಮಾಡಿದ ಪ್ರಯಾಣದ ನಡುವೆ ಆದ ಪ್ರಯಾಸದ ಕಥೆ- ವ್ಯಥೆ.!

ಅದು 2009ರ ಜೂನ್ ಮಾಸ...
ವರುಣದೇವ allraedy ತನ್ನ bating ಶುರು ಹಚ್ಕಂಡು ಕೆಲವೊಂದು ಊರಿನಲ್ಲಿ 4's, 6's ಹೊಡ್ದಾಗಿತ್ತು..!

ಅಂತ ಸಮಯದಲ್ಲಿ ನಾನು ಹಾಗು ಮಹೇಶ(my frnd) 'herohonda-splender' bike ತಗೊಂಡು ಹೊನ್ನಾವರದಿಂದ ಯಲ್ಲಾಪುರಕ್ಕೆ ಹೊರಟೆವು...

ನಮ್ಮ ಅದ್ರಷ್ಟಕ್ಕೆ ಈ ದಿನ ಮಳೆಯಿಲ್ಲವೆಂದು ಸಂತಸದಿಂದಲೇ ಹೊರಟ್ವಿ..
But ನಮ್ಮ ಅಲ್ಪಕಾಲದ ಸಂತಸ ನೋಡಿ ವರುಣದೇವ ಮನದಲ್ಲೇ ನಗ್ತಿರೋದು ನಮಗೆ ಗೊತ್ತಾಗಲೇ ಇಲ್ಲಾ....!!

ನಾವು ಹೊನ್ನಾವರ ಸನಿಹದಲ್ಲೇ ಇರುವ ನಮ್ಮೂರು ಅಪ್ಸರಕೊಂಡದಿಂದ ಹೊರಡುವಾಗ ಸಮಯ ಬೆಳಗ್ಗಿನ 8:30 ರ ಆಸುಪಾಸು....
ನಾವು ಹೊರಡುವಾಗೇನೋ ಖುಷಿಯಿಂದಲೇ ಹೊರಟ್ವಿ ಆ......ದ.....ರೆ......,,,???

oh sory ನಾವು ಯಲ್ಲಾಪುರಕ್ಕೆ ಹೊರ್ಟಿದ್ದು ನನ್ frnd ನ ತಾತನಿಗೆ ಹುಷಾರಿಲ್ಲಾಂತ ನೋಡ್ಕೊಂಡು ಬರೋಕೆ... but ಅಲ್ಲಿಂದ ವಾಪಾಸ್ ಬರೋದಿರ್ಲಿ, ಯಲ್ಲಾಪುರಕ್ಕೆ ಹೋಗಿಮುಟ್ತೀವಾ ಅಂತ ನಾವು ಸಾಗಿದ ದಾರಿಯಲ್ಲಿ ಭಯಮಿಶ್ರಿತ ಅನುಮಾನ ಮೂಡಿತ್ತು....!

ಅಂದು ನಾವು ಹೊರಟ ಗಳಿಗೆ ಸರಿಯಿರ್ಲಿಲ್ಲ ಅನ್ಸುತ್ತೆ..!
ಯಾಕಂದ್ರೆ ನಾವಿನ್ನೂ 1km ಹೋಗಲಿಲ್ಲ,, ಅಷ್ಟರಲ್ಲಿ ಒಬ್ಬ ವ್ಯಕ್ತಿ ನಮ್ಮ ಬೈಕಿಗೆ ಅಡ್ಡ ಬಂದು ಸ್ವಲ್ಪದರಲ್ಲಿ ಆಕ್ಸಿಡೆಂಟ್ ಆಗೋದು ತಪ್ಪಿತು....
ನಮ್ಮಿಬ್ಬರಿಗೂ ಈ ತರಹದ (ಅಪ)ಶಕುನದಲ್ಲಿ ನಂಬಿಕೆ ಇಲ್ಲದ್ದಿದ್ದರಿಂದ ನಮ್ಮ ಪಯಣ continue ಆಯ್ತು..

ಹಾಗೇ ಮುಂದೆ ಸಾಗಿ ಕುಮಟಾ ಸನಿಹದ
''ಹೊನ್ಮಾವು cross'' ಬಳಿ tea ಅಂಗಡಿ ಪಕ್ಕ ನಮ್ಮ ''ಐರಾವತ''ವನ್ನು ನಿಲ್ಲಿಸಿ, '2 ಟೀ 2 ಬನ್ನು ಕೊಡಣ್ಣಾ' ಅಂತಾ ಹೇಳಿ, ಹೊರಗಡೆ ಇಟ್ಟಿದ್ದ ನೀರಿನಲ್ಲಿ ಮುಖ ತೊಳೆಯುತ್ತಾ ಇಲ್ಲಿಂದ ಎಲ್ಲೂ ನಿಲ್ಲದೇ ಸೀದಾ ಮಹೇಶನ ಪರಿಚಯದವರ ಮನೆಗೆ ಹೋಗುವ plan ಮಾಡುತ್ತಿರುವಾಗಲೇ,
'ಟಪಕ್' ಅಂತ ಒಂದು ಮಳೆ ಹನಿಯೊಂದು ನೀರಿನಲ್ಲಿ ಬಿತ್ತು....

(ಇನ್ನೊಂದು ವಿಷಯ ನಮ್ಮ ಹತ್ರ ಎಷ್ಟೇ ದುಡ್ಡಿದ್ರೂ, ಎಷ್ಟೇ ದೊಡ್ಡ ಹೋಟೆಲ್ಲಿಗೆ ಹೋಗಿ ತಿಂದ್ರೂನು, ಈ ಟೀ with ಬನ್ನಿನ ತರ ಆಗಲ್ಲಾ ಏನಂತೀರಾ....??)

ಟೀ ಕುಡ್ದಾಯ್ತು ಮಹೇಶ ಒಂದಿಷ್ಟು ಗುಟ್ಕಾ ಪ್ಯಾಕ್ ತಗೊಂಡ,
ಅಲ್ಲೇ ಪಕ್ಕದಲ್ಲಿ ನಮ್ಮ ''natural call'' ಮುಗಿಸಿ, 'raincot' ಧರಿಸಿಕೊಂಡು ಮುಂದೆ ಹೋದೆವು..

But ಅಲ್ಲಿಂದ ನಾವು 'ಕುಮಟಾ ಟೆಂಪೊ ಸರ್ಕಲ್' ದಾಟುತ್ತಿದ್ದಂತೆ, ''ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋದಳೇನೋ'' ಎಂಬಂತೆ,
'ವರುಣದೇವ' ಗಳಗಳನೆ ಅಳಲು ಆರಂಭಿಸಿದ...!
ಆ ಕಣ್ಣೀರು ಮರುದಿನ ನಾವು ಮನೆಗೆ ಬಂದು ಮುಟ್ಟಿದ್ರೂ ಕಮ್ಮಿಯಾಗಿರಲಿಲ್ಲ...!

ನಮಗೆ ಆ ಕಣ್ಣೀರು ಮೊದಮೊದಲು ಪನ್ನೀರಿನಂತೆ ಭಾಸವಾಯಿತು..
ನಂತರದ ಕೆಲವೇ ತಾಸಲ್ಲಿ ನಮ್ಮ ಕಣ್ಣಲ್ಲೇ ನೀರು ಬರುವಂತಾಗಿತ್ತು...!

ಮುಂದೆ ಹೋಗ್ತಾ ಹೋಗ್ತಾ ಮಳೆಯ ರಭಸ ಜೋರಾಗತೊಡಗಿತು..
ಮಳೆ ಹನಿಯು ಭೂಮಿಯ ಮೇಲಿನ ಕೋಪವನ್ನು ನಮ್ಮೇಲೆ ತೋರುತ್ತಾ, ಮುಖದ ತುಂಬಾ 'ರಪರಪನೆ' ಭಾರಿಸತೊಡಗಿತು..
ಮಹೇಶ ಹೆಲ್ಮೇಟಿನಿಂದ,
ನಾನು ಕನ್ನಡಕ ಹಾಗು ಒಂದು ಕರವಸ್ತ್ರದಿಂದ ನಮ್ಮ ಮೂತಿಯನ್ನು ಆದಷ್ಟು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇದ್ವಿ..
bt no use ನಾನು ಹಾಕ್ಕೋಂಡಿದ್ದ raincot ಹಳೇದ್ದಾದ್ದರಿಂದ ಒಳಗೆ ಮಳೆನೀರು ಹೋಗಿ shirt ಒದ್ದೆಯಾಗಿ body ಲಿ ಲೈಟಾಗಿ ಕುಳುಕುಳು ಅನ್ನೋಕೆ start ಆಯ್ತು..!!


ಮಳೆ ಜೋರಾದ ಕಾರಣ ಮಹೇಶ, ಜಾಸ್ತಿ ಸ್ಪೀಡಿಲ್ಲದೇ '30-40kms/h' ವೇಗದಲ್ಲಿ ನಮ್ಮ ಐರಾವತವನ್ನು ಚಲಾಯಿಸುತ್ತಿದ್ದ..!
ನಾನು 'ಚಿನ್ನದ ತಾರೆ ಗಣೇಶ್' ಸ್ಟೈಲಲ್ಲಿ ಮಳೆಗೆ ಹಿಡಿಶಾಪ ಹಾಕುತ್ತಾ, ಅದು ಇದು ಕಷ್ಟಸುಖ ಮಾತಾಡ್ತಾ, ಅವನನ್ನು ನಗೀಸ್ತಾ ಇದ್ದೆ..
ಹಾಗೆ 'kms board' ಗಳನ್ನು ಎಣಿಸುತ್ತಾ ಅಘನಾಶಿನಿ ನದಿಯ ಬ್ರಿಡ್ಜ್ ಬಳಿ ಬಂದಾಗ, ಮಹೇಶ,,
''ಒಂದೇ ನಿಮಿಷಕ್ಕೇ ಸ್ವರ್ಗಕ್ಕೆ ಹೋಗೋ ಆಸೆ ಇದ್ಯಾ ಅಂತ ಕೇಳ್ದಾ''
ನಾನು ಅವನ ಮಾತನ್ನು ಅರ್ಥೈಸಿಕೊಂಡು,,
''ಗಾಡಿ ನಿಂದು ಗಾಡಿ ಓಡಿಸ್ತಿರೋ body ನಿಂದು ನೀ ಎಲ್ಲಿಗೆ ಹೋಗ್ತ್ಯೋ ಅಲ್ಲಿಗೆ ನಾನು ಬರ್ತಿನಿ..!''
ಅಂತ ಫಿಲ್ಮಿ ಸ್ಟೈಲಲ್ಲಿ ಹೇಳಿದಾಗ,,
ಮಹೇಶ ದೊಡ್ಡದಾಗಿ ಸ್ಮೈಲಿದ..
ಅವನು ಹಾಗೆಹೇಳಲು ಕಾರಣವಿತ್ತು.. ದಿನದಿಂದ ಸತತವಾಗಿ ಮಳೆ ಬಿದ್ದ ಕಾರಣ,, ಅಘನಾಶಿನಿ ನದಿ ಅಪಾಯದ ಮಟ್ಟಕ್ಕೆ ಮಟ್ಟಕ್ಕೆ ಮೀರಿ ಹರಿಯುತ್ತಿತ್ತು..

ಹಾಗೆ ಆ ಬ್ರಿಡ್ಜ್ ದಾಟಿ ಸ್ವಲ್ಪದೂರ ಹೋಗಿದ್ವಿ..
ಅಷ್ಟರಲ್ಲಿ ಎದುರಿಗೆ ಒಂದು 'tata sumo' ನಿಧಾನವಾಗೇ ಬರ್ತಾ ಇತ್ತು,,
ನಾವು ನಮ್ಮ left ಗೆ,
sumoದವನು ಅವನ left ಗೆ
ಅರಾಮಾಗಿ ಬರ್ತಿದ್ದಾಗ,
roadನ ಆ ಪಕ್ಕದಲ್ಲಿದ್ದ ಹಸು ಒಂದನ್ನು ನೋಡಿ 'tata sumo'ದ driver,
'horn' ಅದುಮಿದ..
ಅಚಾನಕ್ಕಾಗಿ ಆದ soundನ್ನು ಕೇಳಿ ಆ ಹಸು ಬೆದರಿ road ಕಡೆಗೇ ಓಡಿಬಂತು.. ಮಳೆ ಬೀಳುತ್ತಿದ್ದ ಕಾರಣ roadಲ್ಲಿ ನೀರು ನಿಂತಿತ್ತು.
ಆ ನೀರಿನ ಮೇಲೆ ಕಾಲಿಟ್ಟ ಹಸು ಆಯತಪ್ಪಿ ಜಾರಿಕೊಂಡು ನಮ್ಮ ಕಡಗೇ ಬಂದಾಗ,, ನಮ್ಮಿಬ್ಬರ ಎದೆಯಲ್ಲಿ ನೀರೊಣಗಿ,,
ನಾನು ''ಏಯ್.. ಏಯ್.. ಏಯ್..''
ಅಂದೆ ಅಷ್ಟರಲ್ಲಿ,,,,??

To be continued...

3 ಕಾಮೆಂಟ್‌ಗಳು: